
ಭೋಪಾಲ್ – ಸರ್ಕಾರಿ ನೌಕರರು ಆರೆಸ್ಸೆಸ್ ಸೇರುವುದರ ಮೇಲೆ ನಿಷೇಧ ಹೇರಿದ್ದ ತನ್ನ ‘ತಪ್ಪನ್ನು ಅರಿತುಕೊಳ್ಳಲು’ ಕೇಂದ್ರ ಸರ್ಕಾರಕ್ಕೆ ಐದು ದಶಕಗಳೇ ಬೇಕಾಯಿತು ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ…!
ಸರ್ಕಾರಿ ನೌಕರರು ಆರೆಸ್ಸೆಸ್ ಸೇರದಂತೆ ಇದ್ದಂತಹ ನಿಷೇಧವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರಿ ನೌಕರ ಪುರುಷೋತ್ತಮ ಗುಪ್ತ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿದ ಮಧ್ಯಪ್ರದೇಶ ಹೈಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು…!!
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಆಡಳಿತ ಕಾಲದಲ್ಲಿ ಆರೆಸ್ಸೆಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆಗೆ ಸರ್ಕಾರಿ ನೌಕರರಿಗೆ ಹೇರಲಾಗಿದ್ದ ನಿರ್ಬಂಧವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆರವುಗೊಳಿಸಿದೆ…!
ಕೇಂದ್ರ ಸರ್ಕಾರಕ್ಕೆ ತನ್ನ ತಪ್ಪಿನ ಅರಿವಾಗಲು ಸುಮಾರು ಐದು ದಶಕಗಳೇ ಬೇಕಾಯಿತು, ಆರೆಸ್ಸೆಸ್ ನಂತಹ ಅಂತರಾಷ್ಟ್ರೀಯ ಖ್ಯಾತಿಯ ಸಂಘಟನೆಯನ್ನು ದೇಶದ ನಿಷೇಧಿತ ಸಂಘಟನೆಗಳ ನಡುವೆ ತಪ್ಪಾಗಿ ಇರಿಸಲಾಗಿತ್ತು, ಇದನ್ನು ಒಪ್ಪಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಇಷ್ಟು ಸಮಯ ಬೇಕಾಯಿತು, ಈ ನಿಷೇಧದಿಂದಾಗಿ ಅನೇಕ ಕೇಂದ್ರ ಸರ್ಕಾರಿ ನೌಕರರು ದೇಶಕ್ಕೆ ಹಲವು ವಿಧಗಳಲ್ಲಿ ಸೇವೆ ಸಲ್ಲಿಸುವ ಅವಕಾಶಗಳು ತಪ್ಪಿದಂತಾಯಿತು, ಎಂದು ಕೇಂದ್ರ ಸರ್ಕಾರಿ ನಿವೃತ್ತ ನೌಕರ ಪುರುಷೋತ್ತಮ್ ಗುಪ್ತಾ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಲೇವಾರಿ ಮಾಡುವಾಗ ಮಧ್ಯಪ್ರದೇಶ ಹೈಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು…!!
ಸರಕಾರಿ ನೌಕರರು ಆರೆಸ್ಸೆಸ್ ಅನ್ನು ಸೇರುವುದನ್ನು ನಿಷೇಧಿಸಿದ್ದ 58 ವರ್ಷಗಳಷ್ಟು ಹಿಂದಿನ ಆದೇಶವನ್ನು ಕೇಂದ್ರವು ಇತ್ತೀಚಿಗೆ ಹಿಂದೆಗೆದುಕೊಂಡಿದೆ…!
ಈ ನಿಷೇಧವನ್ನು 1966ರಲ್ಲಿ ಹೇರಲಾಗಿತ್ತು…!!