
ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ”ಹನುಮಾನ್ ಚಾಲೀಸಾ” ಆಲಿಸುವುದು, ಪಠಿಸುವುದು ಮಹಾಪರಾಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟಣೆಯನ್ನು ಉಲ್ಲೇಖಿಸಿ, ಪರೋಕ್ಷವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು…!
ರಾಜಸ್ಥಾನದ ಟೋಕ್ ನಲ್ಲಿ ಇಂದು ಬ್ರಹತ್ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮೋದಿ ಮಾತನಾಡಿದರು…!!
ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಅಂಗಡಿಯಲ್ಲಿ ಕುಳಿತು ಹನುಮಾನ್ ಚಾಲೀಸಾ ಕೇಳುತ್ತಿದ್ದ ಎಂಬ ಕಾರಣಕ್ಕೆ ಅಂಗಡಿಯವನಿಗೆ ಕ್ರೂರವಾಗಿ ಥಳಿಸಲಾಗಿತ್ತು ಎಂದು ಕಿಡಿಕಾರಿದರು…!
ಇಷ್ಟೇ ಅಲ್ಲ ಕಾಂಗ್ರೆಸ್ ಅಯೋಧ್ಯೆ ರಾಮ ಮಂದಿರವನ್ನು ವಿರೋಧಿಸಿದರು, ಪ್ರಾಣಪ್ರತಿಷ್ಠೆ ವಿರೋಧಿಸಿದರು, ಕೊನೆಗೆ ನೀಡಿದ ಅಹ್ವಾನ ತಿರಸ್ಕರಿಸಿದರು ಇದರಲ್ಲೇ ಕಾಂಗ್ರೆಸ್ ಮನಸ್ಥಿತಿ ಹೀಗಿದೆ ಎಂಬುವುದು ಗೊತ್ತಾಗುತ್ತದೆ ಎಂದರು…!!
ಜೊತೆಗೆ ಕಾಂಗ್ರೆಸ್ ಕಾರ್ಪೋರೇಟರ್ ಪುತ್ರಿ ನೇಹಾ ಹೀರೆಮಠ್ ಹತ್ಯೆ ಪ್ರಕರಣ ಹಾಗೂ ಕೇಳಿ ಬಂದಿರುವ ಲವ್ ಜಿಹಾದ್ ಆರೋಪವನ್ನು ಮೋದಿ ಉಲ್ಲೇಖಿಸಿ, ಕಾಂಗ್ರೆಸ್ ಆಡಳಿತದಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷತೆ ಇಲ್ಲ ಎಂದರು…!
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಅಲ್ಪಸಂಖ್ಯಾತರಿಗೆ ಮೊದಲ ಆದ್ಯತೆಯಾಗಿ ಹಂಚುತ್ತದೆ ಎಂಬ ಆರೋಪವನ್ನು ಮತ್ತೊಮ್ಮೆ ಪ್ರಸ್ತಾಪ ಮಾಡಿದ ಮೋದಿ, ನಾನು ಸತ್ಯ ಹೇಳಿದರೆ ವಿಪಕ್ಷಗಳಿಗೆ ಮೆಣಸಿನ ಉರಿ ಬಿದ್ದಂತಾಗುತ್ತದೆ, ಎಂದು ಹೇಳಿದ್ದಾರೆ…!!
ಈ ದೇಶದ ಸಂಪತ್ತಿನಲ್ಲಿ ಮುಸಲ್ಮಾನರಿಗೆ ಮೊದಲ ಪಾಲು ಸಿಗಬೇಕು ಎಂದು ಮನಮೋಹನ್ ಸಿಂಗ್ ತಾವು ಪ್ರಧಾನಿಯಾಗಿದ್ದ ಹೇಳಿದ್ದನ್ನು ನೀವು ಮರೆಯಬೇಡಿ ಎಂದಿದ್ದಾರೆ…!
ರಾಜಸ್ಥಾನದ ಟೊಂಕ್ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ದೇಶದ ಸಂಪತ್ತನ್ನು ಕಿತ್ತುಕೊಂಡು ಆಯ್ದ ಜನರಿಗೆ ಹಂಚಲು ಕಾಂಗ್ರೆಸ್ ಸಂಚು ರೂಪಿಸುತ್ತಿದೆ’ ಎಂಬ ಸತ್ಯವನ್ನು ನಾನು ಬಹಿರಂಗ ಮಾಡಿದ್ದೇನೆ ಎಂದು ಹೇಳಿದ್ದಾರೆ…!!
‘ಕಾಂಗ್ರೆಸ್ ಏಕೆ ಸತ್ಯಕ್ಕೆ ಹೆದರುತ್ತಿದೆ…? ತನ್ನ ನೀತಿಗಳನ್ನು ಏಕೆ ಮರೆಮಾಚುತ್ತದೆ…? ಎರಡು ಮೂರು ದಿನಗಳ ಹಿಂದೆ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣವನ್ನು ನಾನು ಬಯಲು ಮಾಡಿದ್ದೆ. ಇದಾದ ಬಳಿಕ ಕಾಂಗ್ರೆಸ್ ಹಾಗೂ ಅದರ ‘ಇಂಡಿ’ ಮೈತ್ರಿಕೂಟದ ನಾಯಕರು ಎಲ್ಲಾ ಕಡೆ ಮೋದಿಯನ್ನು ನಿಂದಿಸಲು ಪ್ರಾರಂಭಿಸಿದ್ದಾರೆ, ಎಂದು ಆರೋಪಿಸಿದ್ದಾರೆ…!
ಸೋಮವಾರ ರಾಜಸ್ಥಾನಕ್ಕೆ ಬಂದಾಗ ನಾನು ನನ್ನ 90 ಸೆಕೆಂಡ್ ಭಾಷಣದಲ್ಲಿ ಕೆಲವು ಸತ್ಯವನ್ನು ದೇಶದ ಜನರ ಮುಂದೆ ಮಂಡಿಸಿದ್ದೆ, ಇದು ಇಡೀ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದಲ್ಲಿ ತಲ್ಲಣ ಹುಟ್ಟುಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದರು…!!
ಕಾಂಗ್ರೆಸ್ ಸದಾ ಕಾಲ ಒಲೈಕೆ ಮತ್ತು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಲೇ ಬಂದಿರುವುದಾಗಿ ಪ್ರಧಾನಿ ಮೋದಿ ಹೇಳಿದರು. ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನಾಂಗಕ್ಕೆ ಮೀಸಲಾತಿ ನೀಡುವುದು ಮೋದಿಯ ಗ್ಯಾರಂಟಿಯಾಗಿದೆ ಎಂದರು…!