
ನಿತ್ಯ ಧ್ವನಿ ಸಂಪಾದಕೀಯ
ಕೊಲೆ, ಅತ್ಯಾಚಾರ, ಡ್ರಗ್ಸ್ ಮಾಫಿಯಾ, ಸೈಬರ್ ಅಪರಾಧ ಹೆಚ್ಚಳ, ತಡೆಗಟ್ಟುವಲ್ಲಿ ಸರ್ಕಾರ ಎಡವಿದ್ದೆಲ್ಲಿ…?
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕ್ರೈಂ ರಿಪೋರ್ಟ್ ನೋಡಿದರೆ ಮೈ ಜುಮ್ಮೆನಿಸುತ್ತೆ…!
ಒಂದು ಕಾಲದಲ್ಲಿ ಅಪರಾಧ ಚಟುವಟಿಕೆಗಳ ನಾಡಾಗಿದ್ದ ಉತ್ತರ ಪ್ರದೇಶದಲ್ಲಿ ಇಂದು ಕಾನೂನು ಸುವ್ಯವಸ್ಥೆ ಸುಧಾರಣೆಯಾಗಿದೆ…!!
ಆದರೆ ಸರ್ವ ಜನಾಂಗದ ಶಾಂತಿಯ ತೋಟ ವಾಗಿರುವ ಕರ್ನಾಟಕ ಅಪರಾಧಿಗಳ ಬೀಡಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ…!
ಈ ಪ್ರಶ್ನೆ ಹುಟ್ಟಲು ಕಾರಣ ಏನೆಂದು ಮೊದಲು ತಿಳಿಯೋಣ…!!
ಕಳೆದ ನಾಲ್ಕು ತಿಂಗಳಲ್ಲಿ ದಾಖಲೆಯ ಕ್ರೈಂ ಪ್ರಕರಣ
1) ಹುಬ್ಬಳ್ಳಿ ಕಾಲೇಜ್ ಕ್ಯಾಂಪಸ್ನಲ್ಲಿ ನಡೆದ ನೇಹಾ ಹೀರೆಮಠ್ ಹತ್ಯೆ
2) ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ವಿದ್ಯಾರ್ಥಿ ಅಂಜಲಿ ಕೊಲೆ
3) ಕೊಡಗಿನಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಯ ರುಂಡ ಕಡಿದು ಹತ್ಯೆ
4) ಹಾವೇರಿಯ ಹಾನಗಲ್ ನಲ್ಲಿ ಹಿಂದೂ ಯುವಕರಿಗೆ ಥಳಿತ
5) ವಿಧಾನಸೌಧದಲ್ಲಿ ಪಾಕ್ ಪರವಾಗಿ ಘೋಷಣೆ
6) ಮಂಡ್ಯದ ಕೆರೆಗೋಡಿನಲ್ಲಿ ಹನುಮಾನ್ ಧ್ವಜ ಇಳಿಸಿದಕ್ಕೆ ಗಲಾಟೆ
7) ನಗರ್ತಪೇಟೆಯಲ್ಲಿ ಹನುಮಾನ್ ಚಾಲಿಸಾ ಹಾಕಿದ್ದ ಯುವಕನ ಮೇಲೆ ಹಲ್ಲೆ
8) ಬೆಂಗಳೂರಿನ ರಾಮೆಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ
9) ಮೈಸೂರಿನಲ್ಲಿ ಪ್ರಧಾನಿ ಮೋದಿ ಬಗ್ಗೆ ಹಾಡು ರಚಿಸಿದ ಯುವಕನ ಮೇಲೆ ಹಲ್ಲೆ ನಡೆಸಿ, ಸಿಗರೇಟಿನಿಂದ ಸುಟ್ಟಿದ್ದು
10) ಕಡಬದಲ್ಲಿ ಯುವಕನೊಬ್ಬನಿಂದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಆ್ಯಸಿಡ್ ಧಾಳಿ
11) ರಾಮನವಮಿ ದಿನ ಭಗವಾಧ್ವಜ ಹಿಡಿದು ಹೋಗುತಿದ್ದ 3 ಯುವಕರ ಮೇಲೆ ಹಲ್ಲೆ
12) ಕೊಡಗಿನ ಸಿದ್ದಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿ ಹೋಗುತಿದ್ದವರ ಮೇಲೆ ಹಲ್ಲೆ
ಹೀಗೆ ಹೇಳುತ್ತಾ ಹೋದರೆ ಪಟ್ಟಿ ಇನ್ನಷ್ಟು ದೊಡ್ಡದಾಗುತ್ತಾ ಹೋಗುತ್ತದೆ…!
ರಾಜ್ಯ ಕ್ರೈಂ ರೆಕಾರ್ಡ್ ಬ್ಯೂರೋ ನೀಡಿರುವ ಅಂಕಿ ಅಂಶಗಳನ್ನು ಗಮನಿಸಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುವುದು ಸ್ಪಷ್ಟವಾಗುತ್ತದೆ…!
ಕಳೆದ ಕೆಲ ದಿನಗಳಲ್ಲಿ ಕೊಲೆ, ಅತ್ಯಾಚಾರ, ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿವೆ…!!
ಅದರಲ್ಲೂ ಕಳೆದ ನಾಲ್ಕು ತಿಂಗಳ ಅಂಕಿ ಅಂಶಗಳನ್ನು ಗಮನಿಸಿದರೆ ಗಾಬರಿ ಹುಟ್ಟುತ್ತದೆ…!
ಡ್ರಗ್ ಮಾಫಿಯಾ, ಲೈಂಗಿಕ ದೌರ್ಜನ್ಯ, ಸೈಬರ್ ವಂಚನೆ, ಹಲ್ಲೆ, ಪ್ರಕರಣಗಳು ಅಧಿಕವಾಗಿವೆ…!!
2024ರ ಜನವರಿಯಿಂದ ಏಪ್ರಿಲ್ 30ರವರೆಗೆ ಅಂದರೆ 4 ತಿಂಗಳಲ್ಲಿ ಸುಮಾರು 430 ಕೊಲೆಗಳು, 198 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ…!
2327 ಮಹಿಳೆಯರ ಮೇಲೆ ದೌರ್ಜನ್ಯ, 1262 ಮಕ್ಕಳ ಮೇಲೆ ದೌರ್ಜನ್ಯ, 7421 ಸೈಬರ್ ಕ್ರೈಂ, 450 ರಾಬರಿಗಳು ಸಂಭವಿಸಿವೆ…!!
ಲೈಂಗಿಕ ದೌರ್ಜನ್ಯ ಹಾಗೂ ಸೈಬರ್ ವಂಚನೆ ಗಗನಕ್ಕೆ ಏರಿದೆ…!!
ಹಲ್ಲೆ, ಮಾರಣಾಂತಿಕ ಹಲ್ಲೆ ಕೇಸ್ಗಳು ಅಧಿಕವಾಗುತ್ತಾ ಸಾಗುತ್ತಿವೆ, ಇದು ಆತಂಕಕ್ಕೆ ಕಾರಣವಾಗಿದೆ…!
ಆದರೆ ನಮ್ಮ ಮಾನ್ಯ ಗ್ರಹ ಸಚಿವರು ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸಿದಂತೆ ತೋರುತ್ತಿಲ್ಲ…!!
ತನಿಖೆ ಪ್ರಗತಿಯಲ್ಲಿ ಇರುವಾಗ, ವೈಯಕ್ತಿಕ ವಿಚಾರಕ್ಕಾಗಿ ಮರ್ಡರ್ ಆಗಿದೆ, ಪ್ರೀತಿ ನಿರಾಕರಿಸಿದ್ದಕ್ಕೆ ಮರ್ಡರ್ ಆಗಿದೆ, ಹಿಂದಿನ ಸರ್ಕಾರದಲ್ಲಿ ಕೊಲೆ ಪ್ರಕರಣ ಆಗಿರಲಿಲ್ವಾ, ಈ ರೀತಿಯ ಗ್ರಹ ಸಚಿವರ ಮಾತುಗಳು ಎಷ್ಟು ಸರಿ…!?
ಹೆಣ್ಣು ನಡುರಾತ್ರಿಯಲ್ಲಿ ಒಬ್ಬಳೇ ಓಡಾಡುವಂತಾದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಸಾರ್ಥಕ” ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು…!
ನಡುರಾತ್ರಿಯಲ್ಲಿ ಬೇಡ, ನಡುಹಗಲಿನಲ್ಲಾದರೂ ಸುರಕ್ಷಿತವಾಗಿ ಓಡಾಡುವಂತಾದರೆ ಸಾಕು…!!
ಕಾಲೇಜಿಗೆ ಹೋಗುವುದು, ಮನೆಯಲ್ಲಿರುವುದು ಮುಂತಾದ ಸರಳ ಕ್ರಿಯೆಗಳ ಸಂದರ್ಭದಲ್ಲಿ ಕೂಡ ಪಾತಕಿಗಳು ದಾಳಿ ನಡೆಸುತ್ತಾರೆ ಎಂದರೆ ಏನು ಹೇಳೋಣ…? ಬೆಂಗಳೂರಿನ ಬೀದಿಗಳಲ್ಲಿ ರೌಡಿ ಶೀಟರ್ಗಳು ಯಾರ ಭಯವಿಲ್ಲದೆ ಗ್ಯಾಂಗ್ ಕಟ್ಟಿಕೊಂಡು ಹೊಡೆದಾಡುವುದು, ಸರ ಎಗರಿಸುವುದು, ಹಲ್ಲೆ, ಬೈಕ್ ವ್ಹೀಲಿಂಗ್ ನಡೆಸುತ್ತಿದ್ದಾರೆ…!
ಗೃಹ ಇಲಾಖೆ ದುರ್ಬಲವಾದಾಗ, ಪುಂಡರಿಗೆ ರಾಜಕಾರಣಿಗಳೇ ಕುಮ್ಮಕ್ಕು ನೀಡಿದಾಗ ಇಂಥ ಪ್ರವೃತ್ತಿ ಹೆಚ್ಚುತ್ತದೆ, ಇದಕ್ಕೆ ಈಗಲೇ ಕಡಿವಾಣ ಹಾಕದೆ ಹೋದರೆ ಮುಂದಿನ ದಿನಗಳು ಇನ್ನಷ್ಟು ಭಯಾನಕವಾಗಿರಲಿವೆ…!!
ಸಂಪಾದಕರ ನಿಲುವು
ಇತ್ತೀಚಿನ ದಿನಗಳಲ್ಲಿ ಬರ್ಬರ ಕೊಲೆಗಳು, ದೇಹವನ್ನು ಕ್ರೂರವಾಗಿ ತುಂಡು ತುಂಡಾಗಿ ಕತ್ತರಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ…!
ಬಹುತೇಕ ಪ್ರಕರಣಗಳಲ್ಲಿ ಹಂತಕರಿಗೆ ಸರಿಯಾಗಿ ಯಾವುದೇ ಶಿಕ್ಷೆಯಾಗುತ್ತಿಲ್ಲ…!!
ಇದು ನಮ್ಮ ಕಾನೂನು ಮತ್ತು ಪೊಲೀಸ್ ವ್ಯವಸ್ಥೆಯಲ್ಲಿನ ಹುಳುಕುಗಳನ್ನು ಸಾಕ್ಷಿಕರಿಸುತ್ತದೆ…!
ಆರೋಪಿಗಳ ವಿರುದ್ಧ ಸಾಕ್ಷ್ಯಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ಕುರಿತು ಪೊಲೀಸರಿಗೆ ಸೂಕ್ತ ತರಬೇತಿ ನೀಡುವ ಅಗತ್ಯ ಇದೆ…!!
ಪೊಲೀಸ್ ವ್ಯವಸ್ಥೆಯ ಸುಧಾರಣೆ ಮಾಡಬೇಕಿದೆ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅಪರಾಧಗಳನ್ನು ಮಟ್ಟ ಹಾಕುವ ಕೆಲಸವಾಗಬೇಕಿದೆ…!
ಯಾವುದೇ ಅಪರಾಧಿಯು ಶಿಕ್ಷೆಯ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು, ಆಗಲೇ ಸಂತ್ರಸ್ತರಿಗೆ ನ್ಯಾಯ ದೊರೆಯಲು ಸಾಧ್ಯ…!!