
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಮಿತಿ ಮೀರುತಿದ್ದು, ಧಾರವಾಡದಲ್ಲಿ ಡೆಂಗ್ಯೂವಿನಿಂದ ಈ ವರ್ಷದ ಮೊದಲ ಸಾವು ಸಂಭವಿಸಿದೆ…!!
ರಾಜ್ಯದ ಹಲವು ಜಿಲ್ಲೆಗಳಲ್ಲಿ ಡೆಂಗ್ಯೂ ಚಿಕುನ್ಗುನ್ಯಾ ಕಾಯಿಲೆಗಳು ರಣಕೇಕೆ ಹಾಕುತ್ತಿವೆ…!
ಜನ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರುತ್ತಿದ್ದಾರೆ, ಇದೀಗ ಧಾರವಾಡ ಜಿಲ್ಲೆಯಲ್ಲಿ ಡೆಂಗ್ಯೂವಿನಿಂದ ಬಾಲಕಿಯೊಬ್ಬಳು ಮ್ರತಪಟ್ಟಿದ್ದಾಳೆ…!!
ರಾಜ್ಯದಲ್ಲಿ ಪ್ರಸಕ್ತ ವರ್ಷ 4,414 ಡೆಂಗ್ಯೂ, 778 ಚಿಕುನ್ಗುನ್ಯಾ ಪ್ರಕರಣಗಳು ಪತ್ತೆ ಆಗಿವೆ…!
ಈ ನಡುವೆ ಕಳೆದ 10 ದಿನಗಳಲ್ಲಿ ಬರೋಬ್ಬರಿ 1,026 ಡೆಂಗ್ಯೂ, 137 ಚಿಕುನ್ ಗುನ್ಯಾ ಪಾಸಿಟಿವ್ ಬಂದಿದ್ದು ಆತಂಕ ಮೂಡಿಸಿದೆ…!!
ಚಿಕೂನ್ಗುನ್ಯಾಕ್ಕಿಂತ ಡೆಂಗ್ಯೂ ಹಾವಳಿಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ…!