
ಧಾರವಾಡ – ನಗರದ ಹಳೇ ಎಪಿಎಂಸಿ ಆವರಣದಲ್ಲಿ ಜಾನುವಾರು ವಿಚಾರದಲ್ಲಿ ಹಿಂದೂ ಮತ್ತು ಮುಸ್ಲಿಂ ಯುವಕರ ನಡುವೆ ಶುಕ್ರವಾರ ಗಲಾಟೆ ನಡೆದಿದ್ದು ಮೂವರಿಗೆ ಪೆಟ್ಟಾಗಿದೆ…!
ಭಜರಂಗದಳದ ಕಾರ್ಯಕರ್ತನ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿರುವ ಹಲ್ಲೆಯನ್ನು ಖಂಡಿಸಿ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಮುತ್ತಿಗೆ ಯತ್ನಿಸಿರುವ ಘಟನೆ ಧಾರವಾಡ ನಗರದ ಹಳೆ ಎಪಿಎಂಸಿ ಬಳಿ ನಡೆದಿದೆ…!
ಗೋ ರಕ್ಷಣೆ ಮಾಡಲು ಹೋದಾಗ ಸೋಮಶೇಖರ ಚನ್ನಶೆಟ್ಟಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗುತ್ತಿದ್ದು, ಧಾರವಾಡ ನಗರದ ಹಳೆ ಎಪಿಎಂಸಿ ಬಳಿ ಹಲ್ಲೆ ನಡೆಸಿರುವ ಆರೋಪ ಈಗ ಕೇಳಿ ಬಂದಿದೆ…!!
ಹಲ್ಲೆಗೆ ಒಳಗಾದ ಸೋಮಶೇಖರ ಚೆನ್ನಶೆಟ್ಟಿ ಪ್ರಾಣಿ ರಕ್ಷಕ ಹಾಗೂ ಉರಗ ರಕ್ಷಕನು ಕೂಡ ಆಗಿದ್ದಾನೆ. ಠಾಣೆಯ ಮುಂದೆ ಕುಳಿತು ಇದೀಗ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು…!
ಶಾಸಕ ಅರವಿಂದ ಬೆಲ್ಲದ ಅವರು, ಸೋಮಶೇಖರ ಚೆನ್ನಶಟ್ಡಿ ಮೇಲೆ ಹಲ್ಲೆ ನಡೆದಿರುವುದು ಖಂಡನೀಯವಾಗಿದ್ದು ಎಫ್ಐಆರ್ ದಾಖಲಿಸಿಕೊಂಡು ಶೀಘ್ರವಾಗಿ ಬಂಧಿಸಬೇಕು, ಕ್ರಮ ವಹಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರಿಗೆ ತಿಳಿಸಿದರು, ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು…!!