
ದೇಶ್ ಹಮಾರಾ ಹೇ ಎಂದು ವೀರಾವೇಷದ ಭಾಷಣ ಮಾಡುತ್ತಾ ಡಯಾಸ್ ಗಾಜು ಒಡೆದ ಸಚಿವ ಜಮೀರ್ ಅಹಮದ್…!
ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರವಾಗಿ ಗೋಕಾಕ್ ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ರೋಷಾವೇಶದಿಂದ ಭಾಷಣ ಮಾಡುವ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಕೈಯಿಂದ ಗುದ್ದಿ ಡಯಾಸ್ ನ ಗಾಜು ಒಡೆದು ಹಾಕಿದ ವಿಚಿತ್ರ ಘಟನೆ ನಡೆದಿದೆ…!
ಈ ವೇಳೆ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕುತ್ತಾ ಡಯಾಸ್ ಮೇಲೆ ಗುದ್ದಿದ್ದರಿಂದ ಗಾಜು ಪುಡಿಪುಡಿಯಾಗಿದ್ದು, ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ…!!
ಗೋಕಾಕ್ ಕೆಜಿಎನ್ ಹಾಲ್ ಶನಿವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಘಟನೆ ನಡೆದಿದೆ. ಭಾಷಣದ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಜಮೀರ್ ಅಹ್ಮದ್ ಅವರು, ಮುಸ್ಲಿಮರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು, ಎದೆಗೆ ಗುಂಡು ತಿಂದು ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ, ಆದರೆ, ಬಿಜೆಪಿಯವರು ಕೋಮು ದ್ವೇಷ ಬಿತ್ತಲು ಮುಂದಾಗುತ್ತಾರೆ ಎಂದು ಆರೋಪಿಸಿದರು…!
ಸಾರೇ ಜಹಾಂಸೇ ಅಚ್ಚಾ, ನಾವೆಲ್ಲ ಒಂದು, ದೇಶ್ ಹಮಾರಾ ಹೈ ಹಮಾರಾ ಹೈ ಎನ್ನುತ್ತಾ ಜಮೀರ್ ಅವರು ಕೈಯಿಂದ ಡಯಾಸ್ ಗಾಜಿಗೆ ಗುದ್ದಿದ್ದಾರೆ. ಜಮೀರ್ ಗುದ್ದುತ್ತಿದ್ದಂತೆಯೇ ಡಯಾಸ್ಗೆ ಅಳವಡಿಸಿದ ಗಾಜು ಒಡೆದು ಚೂರು ಚೂರಾಗಿದೆ. ಈ ವೇಳೆ ಅಲ್ಲೆ ನೆರೆದಿದ್ದ ಕಾರ್ಯಕರ್ತರು ಕೂಗ ತೊಡಗಿದರು. ಗಾಜು ಒಡೆದರೂ ಸಚಿವರು ಮಾತ್ರ ತಮ್ಮ ಭಾಷಣ ಮುಂದುವರೆಸಿದ್ದು ಕಂಡುಬಂತು…!!