
ಬೆಂಗಳೂರು : ರಾಜ್ಯವೇ ಖುಷಿಪಡುವ ಸುದ್ದಿ ಕೊಟ್ಟವಳು ಈಗ ರಾಜ್ಯವೇ ಬೆಚ್ಚಿ ಬೀಳುವ ಸುದ್ದಿ ಕೊಟ್ಟಿದ್ದಾಳೆ, ಇಂದಿರಾನಗರ ‘ಸ್ಪಾ’ ವ್ಯವಸ್ಥಾಪಕನಿಗೆ ಬ್ಲಾಕ್ಮೇಲ್ ಮಾಡಿ 15 ಲಕ್ಷ ರು. ವಸೂಲಿ ಮಾಡಲು ಯತ್ನಿಸಿದ ಪ್ರಕರಣ ಸಂಬಂಧ ಕನ್ನಡ ಸುದ್ದಿವಾಹಿನಿ ‘ರಾಜ್ ನ್ಯೂಸ್’ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸೇರಿ ಇಬ್ಬರನ್ನು ಜಿ.ಬಿ.ನಗರ ಪೊಲೀಸರು ಬಂಧಿಸಿದ್ದಾರೆ. ಸುದ್ದಿವಾಹಿನಿಯ ಸಿಇಒ ರಾಜಾನುಕುಂಟೆ ವೆಂಕಟೇಶ್ ಹಾಗೂ ನಿರೂಪಕಿ ದಿವ್ಯಾ ವಸಂತಾ ಸೋದರ ಸಂದೇಶ್ ಬಂಧಿತರಾಗಿದ್ದು, ಆರೋಪಿಗಳಿಂದ 3 ಮೊಬೈಲ್ ಜಪ್ತಿ ಮಾಡಲಾಗಿದೆ.
ಪ್ರಕರಣ ಬೆಳಕಿಗ ಬರುತ್ತಿದ್ದಂತೆ ನಿರೂಪಕಿ ದಿವ್ಯಾ, ಸಚಿನ್ ಹಾಗೂ ಆಕಾಶ್ ನಾಪತ್ತೆಯಾಗಿದ್ದಾರೆ , ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ .
ಇಂದಿರಾನಗರದ 100 ಅಡಿ ರಸ್ತೆ 15ನೇ ಮುಖ್ಯರಸ್ತೆಯ ‘ಟ್ರಿ ಸ್ಟ್ರಾ ಅಂಡ್ ಬ್ಯೂಟಿ’ ಪಾರ್ಲ್ರನ ವ್ಯವಸ್ಥಾಪಕ ಶಿವಶಂಕ ಅವರಿಗೆ ವೇಶ್ಯಾವಾಟಿಕೆ ನಡೆದಿದೆ ಎಂದು ಬೆದರಿಸಿ ಹಣ ಸುಲಿಗೆ ಮಾಡಲು ವೆಂಕಟೇಶ್ ತಂಡ ಯತ್ನಿಸಿತ್ತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಸಿಇಒ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.
ಸ್ಪೈ ರಿಸರ್ಚ್ ಗ್ರೂಪ್ ಮಾಡಿದ್ದ ದಿವ್ಯಾ: ಸುಲಿಗೆ ಕೃತ್ಯಗಳಿಗೆ ವಾಟ್ಸ್ ಆಪ್ನಲ್ಲಿ ‘ಸೈ ರಿಸರ್ಚ್ ಟೀಂ’ ಹೆಸರಿನ ಗ್ರೂಪ್ ಅನ್ನು ವೆಂಕಟೇಶ್ ಹಾಗೂ ದಿವ್ಯಾ ಮಾಡಿಕೊಂಡಿದ್ದರು. ಈ ವಾಟ್ಸಪ್ ಗ್ರೂಪಿನಲ್ಲಿ ಕೆಲವು ಚರ್ಚೆಗಳನ್ನು ಮಾಡುತ್ತಿದ್ದಾರೋ ಹಾಗೆ ತಮ್ಮ ಯೋಜನೆಗಳನ್ನ ರೂಪಿಸುತ್ತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ತಂಡ ಸುಮಾರು ನೂರಕ್ಕೂ ಹೆಚ್ಚಿನ ಜನರಿಂದ ಸುಲಿಗೆ ಮಾಡಿದೆ ಹಾಗೂ ಬ್ಲಾಕ್ಮೇಲ್ ಮಾಡಿದೆ ಎಂದು ಹೇಳಲಾಗುತ್ತಿದೆ. ಆನ್ಲೈನ್ ಮೂಲಕ ಹಣವನ್ನು ಪಡೆಯುತ್ತಿದ್ದರೂ ಎಂದು ಪೊಲೀಸ್ ತನಿಖೆ ಇಂದ ಬಯಲಾಗಿದೆ.
ಖಾಸಗಿ ಸುದ್ದಿವಾಹಿನಿ ಹಾಗೂ ಖಾಸಗಿ ಚಾನೆಲ್ ಗಳಲ್ಲಿ ಐದು 10,000 ಸಂಬಳ ಪಡೆಯುತ್ತಿದ್ದ ದಿವ್ಯಾ ವಸಂತ, ಐಷಾರಾಮಿ ಜೀವನದ ಚಟಕ್ಕೆ ಬಿದ್ದು ಬ್ಲಾಕ್ಮೇಲ್ ದಂದೆಗೆ ಇಳಿದಿದ್ದಾಳೆ,
ಇತ್ತ ದಿವ್ಯಾ ವಸಂತ ತಾಯಿ, ಕಣ್ಣೀರಿಡುತ್ತಿದ್ದಾರೆ, ನಾನು ಮನೆ ಕೆಲಸಗಳನ್ನ ಮಾಡಿ ಮಕ್ಕಳನ್ನು ಸಾಕಿದ್ದೇನೆ ಆದರೆ ಬೇರೆಯವರ ಸಭಾಸ ಮಾಡಿ ನನ್ನ ಮಕ್ಕಳಿಗೆ ಈ ಸ್ಥಿತಿ ಬಂದಿದೆ ಎಂದು.