
ನ್ಯೂಯಾರ್ಕ್ – ಅಮೇರಿಕಾ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿದ್ದಂತೆಯೇ ನನ್ನನ್ನು ಹತ್ಯೆ ಮಾಡಲು ಅಧ್ಯಕ್ಷ ಜೋ ಬೈಡೆನ್ ಸಂಚು ರೂಪಿಸಿದ್ದರು ಎಂದು ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಂಭೀರ ಆರೋಪ ಮಾಡಿದ್ದಾರೆ…!
2022ರಲ್ಲಿ ಮಾರ್ – ಅ – ಲಾಗೋ ರೆಸಾರ್ಟ್ ನಲ್ಲಿ ಎಫ್ ಬಿ ಐ ಶೋಧ ಕಾರ್ಯ ನಡೆಸುವ ಸಮಯದಲ್ಲಿ ನನ್ನನ್ನು ಕೂಡಿ ಹಾಕಲಾಗಿತ್ತು ಎಂದು ಟ್ರಂಪ್ ಹೇಳಿದ್ದಾರೆ…!!
ಆದರೆ ಇದು ಸುಳ್ಳು ಎಂದು ಎಫ್ ಬಿ ಐ ಹೇಳಿದೆ…!
ಈ ಕುರಿತು ಪ್ರತಿಕ್ರಿಯಿಸಿರುವ ಎಫ್ ಬಿ ಐ, ಅಲ್ಲಿ ಯಾವುದೇ ಕೊಲೆ ಯತ್ನ ನಡೆದಿಲ್ಲ, ಟ್ರಂಪ್ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿಕೆ ನೀಡಿದೆ…!!