
ಶ್ರಂಗೇರಿ – ಶ್ರಂಗೇರಿ ಶಾರದಾಂಬೆ ದೇಗುಲವು ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ…!
ಆಗಸ್ಟ್ 15 ರಿಂದ ಇಲ್ಲಿಗೆ ಬರುವ ಭಕ್ತಾದಿಗಳಿಗೆ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲಾಗಿದೆ…!!
ಈ ಕುರಿತು ಶ್ರಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಪಿ ಎ ಮುರಳಿ ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ…!
ಶ್ರಂಗೇರಿ ದೇಗುಲಕ್ಕೆ ಆಗಮಿಸುವ ಎಲ್ಲಾ ಭಕ್ತರು ಈ ವಸ್ತ್ರಸಂಹಿತೆ ನಿಯಮವನ್ನು ಪಾಲಿಸಬೇಕು ಎಂದು ಅವರು ವಿನಂತಿಸಿದ್ದಾರೆ…!!
ಗುರುಗಳ ನಿವಾಸದಲ್ಲಿ ಪಾದಪೂಜೆ ಮತ್ತು ಗುರುಗಳ ದರ್ಶನ ಮಾಡಲು ಬರುವವರು, ನಿಗದಿತ ಉಡುಪುಗಳನ್ನು ಹೊರತುಪಡಿಸಿ, ಬೇರೆ ಉಡುಪುಗಳನ್ನು ಧರಿಸಿದವರಿಗೆ ಗುರುಗಳ ನಿವಾಸದ ಒಳಗಡೆ ಪ್ರವೇಶ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ…!
ಶ್ರೀ ಶಾರದಾಂಬೆ ದರ್ಶನಕ್ಕೆ ಬರುವವರು ನಿಗದಿತ ಉಡುಪುಗಳನ್ನು ಹೊರತುಪಡಿಸಿ ಉಳಿದ ಉಡುಪುಗಳನ್ನು ಧರಿಸಿದ ವ್ಯಕ್ತಿಗಳಿಗೆ ಮಹಾಮಂಟಪದಿಂದ ದರ್ಶನವನ್ನು ಪಡೆಯಲು ಅವಕಾಶ ಇರುವುದಿಲ್ಲ, ಅವರು ಹೊರಗಿನ ಪ್ರಾಕಾರದಿಂದ ದರ್ಶನ ಪಡೆಯಬಹುದಾಗಿದೆ…!!
ಸಾಂಪ್ರದಾಯಿಕ ಉಡುಪುಗಳನ್ನು ಧರಿಸುವುದು ಕಡ್ಡಾಯ
ಶ್ರಂಗೇರಿ ಶಾರದಾಂಬೆ ದರ್ಶನಕ್ಕೆ ಬರುವ ಪುರುಷರು, ಧೋತಿ ಅಥವಾ ಪಂಚೆ ಮತ್ತು ಶಲ್ಯ, ಮಹಿಳೆಯರು ಸೀರೆ, ಚೂಡಿದಾರ್, ಪೈಜಾಮ ಧರಿಸಬಹುದಾಗಿದೆ…!
ವಸ್ತ್ರಸಂಹಿತೆ ಕುರಿತು ಸಂಪಾದಕರ ಅಭಿಪ್ರಾಯ
ಶ್ರಂಗೇರಿ ಮಠದಲ್ಲಿ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿರುವುದು ಒಳ್ಳೆಯ ವಿಚಾರ…!
ಇದು ಉಳಿದ ದೇವಸ್ಥಾನಗಳಿಗೂ ಮಾದರಿಯಾಗಬೇಕು, ಎಲ್ಲಾ ದೇವಸ್ಥಾನಗಳಲ್ಲಿಯೂ ವಸ್ತ್ರಸಂಹಿತೆ ಜಾರಿಯಾಗಬೇಕು…!!