
ದುಬೈ (ಯುನೈಟೆಡ್ ಅರಬ್ ಎಮಿರೇಟ್ಸ್) – ಏಪ್ರಿಲ್ 16 ರಂದು ಬಂದ ಭಾರೀ ಮಳೆಯಿಂದಾಗಿ ದುಬೈ ನಗರದಾದ್ಯಂತ ಪ್ರವಾಹ ಪರಿಸ್ಥಿತಿ ಉಂಟಾಗಿದೆ…!
ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಮತ್ತು ಮೆಟ್ರೋ ರಸ್ತೆಗಳು ಎಲ್ಲೆಂದರಲ್ಲಿ ನೀರು ಹೊಳೆಯಂತೆ ಹರಿಯುತ್ತಿದೆ…!!
ಮಳೆ ಬಂದ ಮರುದಿನವೂ ಕೂಡ ಈ ನೆರೆ ನೀರು ಕಡಿಮೆ ಆಗಲಿಲ್ಲ, ಮಳೆಯಿಂದಾಗಿ ಇಲ್ಲಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ, ಅನೇಕ ವಿಮಾನಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ, ಸರ್ಕಾರವು ಅಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ನೀಡಿದೆ, ನಾಗರಿಕರು ಅಗತ್ಯವಿದ್ದರೆ ಮಾತ್ರ ಹೊರಗೆ ಬರುವಂತೆ ಸೂಚನೆ ನೀಡಲಾಗಿದೆ…!
ಹಾಗೆಯೇ ಬಹರೈನ್, ಓಮನ್, ಅಬುಧಾಬಿ ಮತ್ತು ಶಾರ್ಜಾದಲ್ಲೂ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು ಪ್ರವಾಹಕ್ಕೆ ಸಿಲುಕಿ ಓಮನ್ನಲ್ಲಿ ಹದಿನೆಂಟು ಜನರು ಸಾವನ್ನಪ್ಪಿದ್ದಾರೆ…!!