
ಹೊಸದಿಲ್ಲಿ – ಬಿಜೆಪಿ ರಾಜ್ಯಸಭಾ ಸಂಸದ ಹಾಗೂ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಸೋಮವಾರ ರಾತ್ರಿ ನಿಧನ ಹೊಂದಿದರು…!
ಅವರಿಗೆ 72 ವರ್ಷ ವಯಸ್ಸಾಗಿತ್ತು…!!
ಕಳೆದ 7 ತಿಂಗಳಿನಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು…!
ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಏಮ್ಸ್ ಆಸ್ಪತ್ರೆಯಲ್ಲಿ ಅವರು ತನ್ನ ಕೊನೆಯ ಉಸಿರು ಎಳೆದರು…!!
ಸುಶೀಲ್ ಕುಮಾರ್ ಮೋದಿ ಅವರು ಬಿಹಾರದ ಉಪಮುಖ್ಯಮಂತ್ರಿಯಾಗಿ 2005 – 2013 ರ ತನಕ, 2017 – 2020 ರ ವರೆಗೆ ಕಾರ್ಯನಿರ್ವಹಿಸಿದ್ದರು…!
1952ರ ಜ. 5ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದ್ದ ಅವರು, ಪಾಟ್ನಾ ವಿಶ್ವವಿದ್ಯಾಲಯದಿಂದ 1973ರಲ್ಲಿ ಬಿಎಸ್ಸಿ ಹಾನರ್ಸ್ ನಲ್ಲಿ ಸಸ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಆನಂತರ ಅವರು, ಪಾಟ್ನಾ ವಿಶ್ವವಿದ್ಯಾಲಯದಲ್ಲೇ ಎಂಎಸ್ಸಿ ಸಸ್ಯಶಾಸ್ತ್ರ ಕೋರ್ಸ್ ಗೆ ದಾಖಲಾಗಿದ್ದರು. ಅದು 1974ರಲ್ಲಿ ದೇಶಾದ್ಯಂತ ಜಯಪ್ರಕಾಶ್ ನಾರಾಯಣ್ ಅವರ ಆಂದೋಲನ ಹೊಸ ಕ್ರಾಂತಿಯನ್ನು ಹುಟ್ಟುಹಾಕಿತ್ತು. ಆ ಆಂದೋಲನದತ್ತ ಮುಖ ಮಾಡಿದ ಅವರು ತಮ್ಮ ಸ್ನಾತಕೋತ್ತರ ಕೋರ್ಸ್ ಅನ್ನು ಅರ್ಧಕ್ಕೇ ಬಿಟ್ಟು ಆಂದೋಲನಕ್ಕೆ ಸೇರಿದ್ದರು.
ಕಾಲೇಜಿನಲ್ಲಿದ್ದಾಗಲೇ ಸಹಪಾಠಿಯಾಗಿದ್ದ ಕೇರಳ ಮೂಲದ ಕ್ರೈಸ್ತ ವಿದ್ಯಾರ್ಥಿನಿಯಾದ ಜೆಸ್ಸಿ ಜಾರ್ಜ್ ಎಂಬ ಯುವತಿಯನ್ನು ಮದುವೆಯಾಗಿದ್ದರು. ಅವರಿಗೆ, ಉತ್ಕರ್ಷ್ ತಥಾಗಠ್ ಹಾಗೂ ಅಕ್ಷಯ್ ಅಮೃತಾಂಶು ಎಂಬ ಇಬ್ಬರು ಮಕ್ಕಳಿದ್ದಾರೆ. ಅವರ ಪತ್ನಿ ಜೆಸ್ಸಿಯವರು ಕಾಲೇಜೊಂದರಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸುಶೀಲ್ ಮೋದಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಪಾಟ್ನಾದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ…!!
ಸುಶೀಲ್ ಕುಮಾರ್ ಮೋದಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ…!