
ಎಡಪಂಥೀಯ ಮೈತ್ರಿಕೂಟ ಮುನ್ನಡೆ…!
ಅತಂತ್ರ ಫಲಿತಾಂಶ, ಯಾವುದೇ ಪಕ್ಷಕ್ಕೂ ಸಿಗದ ಸ್ಪಷ್ಟ ಬಹುಮತ…!!
ಪ್ಯಾರಿಸ್ – ಈ ಬಾರಿ ಫ್ರಾನ್ಸ್ ಸಾರ್ವತ್ರಿಕ ಚುನಾವಣೆಯಲ್ಲಿ ಬಲಪಂಥೀಯ ಪಕ್ಷ ಗೆಲ್ಲುವ ಎಂದೇ ನಿರೀಕ್ಷೆ ಇತ್ತು…!
ಈ ನಿರೀಕ್ಷೆ ಬುಡಮೇಲಾಗಿದೆ…!!
577 ಸ್ಥಾನಗಳನ್ನು ಹೊಂದಿರುವ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹುಮತಕ್ಕೆ ಅಗತ್ಯವಿರುವ 289 ಸ್ಥಾನಗಳನ್ನು ಗಳಿಸಲು ಯಾವುದೇ ಪಕ್ಷಕ್ಕೂ ಸಾಧ್ಯವಾಗಿಲ್ಲ…!
ನ್ಯೂ ಪಾಪ್ಯುಲರ್ ಫ್ರಂಟ್ ಎಂಬ ಎಡ ಪಕ್ಷಗಳ ಮೈತ್ರಿಕೂಟ ಗರಿಷ್ಠ 182 ಸ್ಥಾನಗಳನ್ನು ಗೆದ್ದಿದೆ…!!
ಹಾಲಿ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಅವರ ಸೆಂಟ್ರಿಸ್ಟ್ ಪಕ್ಷ 168 ಸ್ಥಾನಗಳನ್ನು ಗೆದ್ದಿದೆ…!!
ಬಲಪಂಥೀಯ ರಾಸ್ಸೆಂಬ್ಲೆಮೆಂಟ್ ನ್ಯಾಷನಲ್ ಮತ್ತು ಅದರ ಮಿತ್ರಪಕ್ಷಗಳು 143 ಸ್ಥಾನಗಳನ್ನು ಪಡೆದಿವೆ…!
ಬಲಪಂಥೀಯ ಮೈತ್ರಿಕೂಟ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ…!!
ಇದರಿಂದಾಗಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದೇ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ…!
ಫ್ರಾನ್ಸ್ನ ಹಲವೆಡೆ ಹಿಂಸಾಚಾರ
ಸಂಸತ್ ಚುನಾವಣೆಯ ಫಲಿತಾಂಶದ ನಂತರ ಫ್ರಾನ್ಸ್ನ ಹಲವೆಡೆ ಹಿಂಸಾಚಾರ ಭುಗಿಲೆದ್ದಿವೆ…!