
ಬೈಂದೂರು : ಗಣೇಶ ಚತುರ್ಥಿಯು ಸನಾತನ ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದೆ. , ವಿನಾಯಕ ಚತುರ್ದಶಿ ಅಥವಾ ಗಣೇಶ ಚತುರ್ಥಿ ಎಂದು ಕರೆಯಲ್ಪಡುವ ಈ ಹಬ್ಬವನ್ನು ಅತ್ಯಂತ ವೈಭವದಿಂದ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ.!
ಕಳೆದ 35 ವರ್ಷಗಳಿಂದ ಬೈಂದೂರು ತಾಲೂಕಿನ ತಗ್ಗರ್ಸೆ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ತಗ್ಗರ್ಸೆ ಇವರು ಪ್ರತಿ ವರ್ಷವೂ ಬಹಳ ಅದ್ದೂರಿಯಾಗಿ ಗಣೇಶೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದಾರೆ, ಮೂರು ದಿನಗಳ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅನೇಕ ಕ್ರೀಡಾಸ್ಪರ್ಧೆಗಳು ಕೂಡ ನಡೆಸುತ್ತಾರೆ.!
ಹಾಗೆ ಮಹಾ ಅನ್ನಸಂತರ್ಪಣೆ ಮಾಡಿ ಮೂರನೇ ದಿನ ಅದ್ದೂರಿ ಮೆರವಣಿಗೆಗಳ ಮುಖಾಂತರ ಶ್ರೀ ಗಣೇಶನನ್ನು ಧಾರ್ಮಿಕ ವಿಧಿ ವಿಧಾನದಂತೆ ವಸ್ರೆ ವಸಂದರ ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.!
ಹಾಗೆ ಪ್ರತಿ ವರ್ಷವೂ ಸಮಿತಿಯ ಸದಸ್ಯರ ಆಯ್ಕೆಯಂತೆ ಅಧ್ಯಕ್ಷರನ್ನು ಹಾಗೂ ಕಾರ್ಯದರ್ಶಿಯನ್ನು ಆಯ್ಕೆ ಮಾಡಲಾಗುತ್ತದೆ ಈ ಬಾರಿ 35 ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಮಂಜುನಾಥ್ ದೇವಾಡಿಗ ಕಾರ್ಯದರ್ಶಿಗಳಾಗಿ ಅಕ್ಷಯ್ ತಗ್ಗರ್ಸೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಟಿ ನಾರಾಯಣ ಹೆಗ್ಡೆ ಹಾಗೂ ಸಮಿತಿಯ ಉಳಿದ ಸದಸ್ಯರು ಉಪಸ್ಥಿತರಿದ್ದರು..!
ಈ ವರ್ಷ, ಸೆಪ್ಟೆಂಬರ್ 07 ಕ್ಕೆ ಗಣೇಶ್ ಚತುರ್ಥಿ ಬಂದಿದೆ. ದೇಶಾದ್ಯಂತ ಈಗಿನಿಂದಲೇ ಗಣೇಶ್ ಚತುರ್ಥಿಯ ತಯಾರಿ ಶುರುವಾಗಿದೆ..!