ಶ್ರೀ ಕೃಷ್ಣ ಧರ್ಮ ಯುದ್ಧದಲ್ಲಿ ಧರ್ಮವನ್ನು ಗೆಲ್ಲಿಸಿದ ಧರ್ಮಕ್ಕೆ ಗೆಲುವನ್ನು ತಂದುಕೊಟ್ಟ ಮಹಾ ದೈವಪರುಷ ಸಾಕ್ಷಾತ್ ಮಹಾವಿಷ್ಣುವಿನ ಅವತಾರವೆಂದೆ ಹೇಳಲಾಗುತ್ತದೆ ಧರ್ಮ ಅಧರ್ಮಗಳ ವ್ಯತ್ಯಾಸವನ್ನು ಮನಕುಲಕ್ಕೆ ತಿಳಿಸಿ ಅಧರ್ಮದ ವಿರುದ್ಧ ಧರ್ಮ ಯಾವ ರೀತಿ ಗೆಲ್ಲುತ್ತದೆ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟ ಹಾಗೆ ಮಾನವನ ಮನಸ್ಸಿನ ಸಹಸ್ರ ಪ್ರಶ್ನೆಗಳಿಗೆ ಗೊಂದಲಗಳಿಗೆ ಉತ್ತರ ಸಿಗುವಂತೆ ಭಗವದ್ಗೀತೆಯನ್ನು ಜಗತ್ತಿಗೆ ಕೊಟ್ಟ ಹಾಗೆ ಕೃಷ್ಣನ ಬಾಲ್ಯದಿಂದ ಹಿಡಿದು ಕೃಷ್ಣನ ಕೊನೆಯ ಜೀವನದ ಕ್ಷಣದವರೆಗೂ ಅನೇಕ ಘಟನೆಗಳನ್ನು ಮಹಾಭಾರತದಲ್ಲಿ ಭಗವಾನ್ ವೇದವ್ಯಾಸ್ಯರು ರಚಿಸಿದ್ದಾರೆ.
ಹಾಗೆ ಕೃಷ್ಣನ ಜನ್ಮಾಷ್ಟಮಿಯನ್ನು ಕೃಷ್ಣಭಕ್ತರು ಆನಂದದಿಂದ ಆಚರಿಸುತ್ತಾರೆ ಇವತ್ತಿನ ಈ ಲೇಖನದಲ್ಲಿ ಗೋಕುಲಾಷ್ಟಮಿಯ ದಿನದಂದು ಮೊಸರು ಕುಡಿಕೆಯನ್ನು ಯಾಕೆ ಒಡೆಯುತ್ತಾರೆ ಇದರ ಮಹತ್ವ ಏನು ಅನ್ನೋದನ್ನ ನೋಡೋಣ.
ಕೃಷ್ಣ ಜನ್ಮಾಷ್ಟಮಿ ಹಾಗೂ ಗೋಕುಲಷ್ಟಮಿ ತುಂಬಾ ಮಹತ್ವದ ಹಬ್ಬವಾಗಿದೆ ಕೃಷ್ಣನ ಜನ್ಮದಿನದ ಮರುದಿನ ಈ ಹಬ್ಬವನ ಆಚರಣೆ ಮಾಡಲಾಗುತ್ತದೆ ಗೋಕುಲಷ್ಟಮಿಯ ದಿನದಂದು ಮೊಸರು ಕುಡಿಕೆ ದೇಶದಾದ್ಯಂತ ಆಚರಿಸಲಾಗುವ ಪ್ರಸಿದ್ಧ ಹಿಂದೂ ಹಬ್ಬವಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ಈ ಹಬ್ಬವನ್ನು ದೊಡ್ಡ ಹಬ್ಬವಾಗಿ ಆಚರಿಸಲಾಗುತ್ತದೆ. ಇದು ಕೃಷ್ಣ ಜನ್ಮಾಷ್ಟಮಿಯ ಮರುದಿನ ಬರುತ್ತದೆ, ಇದನ್ನು ಗೋಕುಲಾಷ್ಟಮಿ ಎಂದೂ ಕರೆಯುತ್ತಾರೆ, ಇದು ಶ್ರೀಕೃಷ್ಣನ ಜನ್ಮಾಚರಣೆಯ ಒಂದು ಹಬ್ಬವಾಗಿದೆ ಹಾಗೂ ಕೃಷ್ಣನ ಬಾಲ ಲೀಲೆಗಳನ್ನು ತೋರಿಸುವಂತಹ ಒಂದು ಮಹತ್ವದ ಆಚರಣೆ ಆಗಿದೆ.
ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸನಾತನ ಹಿಂದೂ ಧರ್ಮದಲ್ಲಿ ವೈಭವದಿಂದ ಹಾಗೂ ಭಕ್ತಿ ಭಾವದಿಂದ ಆಚರಿಸಲಾಗುತ್ತದೆ ಮಧ್ಯರಾತ್ರಿಯಿಂದಲೇ ಆಚರಣೆಯ ಎಲ್ಲಾ ತಯಾರಿಗಳನ್ನು ಶುರು ಮಾಡಿ ಬಾಲಕೃಷ್ಣನ ಹೆಜ್ಜೆಗಳನ್ನ ಮನೆಯ ಸುತ್ತ ರಂಗೋಲಿ ಹಾಕಿ, ಕ್ರಷ್ಣನಿಗೆ ಪ್ರಿಯವಾದ ಆಹಾರ ಪದಾರ್ಥಗಳನ್ನ ಬಡಿಸಿ ಬಾರಿ ವೈಭವದಿಂದ ಆಚರಿಸುತ್ತಾರೆ ಅದೇ ರೀತಿ ಗೋಕುಲ್ ಅಷ್ಟಮಿ ಎಂದು ಕರೆಯುವ ಕೃಷ್ಣ ಜನ್ಮಾಷ್ಟಮಿಯ ಮರುದಿನ ಬರುತ್ತದೆ ಈ ದಿನದಂದು ಮೊಸರು ಕುಡಿಕೆಯನ್ನು ಹೊಡೆಯುವ ಒಂದು ಸಾಂಪ್ರದಾಯಿಕ ಆಚರಣೆಯಾಗಿದೆ.
ಈ ವರ್ಷ ಗೋಕುಲಾಷ್ಟಮಿ ದಿನಾಂಕ ಮತ್ತು ಸಮಯ 2024 ರಲ್ಲಿ.
ಮೊಸರು ಕುಡಿಕೆ ಆಗಸ್ಟ್ 27, ಮಂಗಳವಾರದಂದು ಆಚರಿಸಲಾಗುತ್ತದೆ. ಆಗಸ್ಟ್ 26 ರ ಸೋಮವಾರದಂದು ಕೃಷ್ಣ ಜನ್ಮಾಷ್ಟಮಿ ಇರುತ್ತದೆ, ಅಷ್ಟಮಿ ತಿಥಿಯು ಆಗಸ್ಟ್ 26 ರಂದು 3:39 AM ನಿಂದ ಪ್ರಾರಂಭವಾಗಿ ಆಗಸ್ಟ್ 27 ರಂದು 2:19 AM ಕ್ಕೆ ಕೊನೆಗೊಳ್ಳುತ್ತದೆ.
ಮೊಸರು ಕುಡಿಕೆ ಮಹತ್ವ ಮೊಸರು ಕುಡಿಕೆ ಆಚರಣೆಯು ಕೃಷ್ಣನ ಬಾಲ್ಯದ ಲೀಲೆಗಳನ್ನು ನೆನಪಿಸುತ್ತದೆ. ದಂತಕಥೆಯ ಪ್ರಕಾರ, ಬಾಲ ಕೃಷ್ಣನಿಗೆ ಮೊಸರು ಮತ್ತು ಬೆಣ್ಣೆ ತುಂಬಾ ಇಷ್ಟವಾಗಿತ್ತು ಕೃಷ್ಣ ಬೆಳಿತಾ ಬೆಳಿತಾ ಅವನಿಗೆ ಈ ಹಾಲಿನ ಉತ್ಪಾದನೆಗಳು, ಮೊಸರು, ಬೆಣ್ಣೆ, ಮಜ್ಜಿಗೆ ಇವೆಲ್ಲವೂ ತುಂಬಾ ಇಷ್ಟವಾದ ತೊಡಗಿತು ಅವನು ಮತ್ತು ಅವನ ಸ್ನೇಹಿತರು ಅವುಗಳನ್ನು ನೆರೆಹೊರೆಯ ಮನೆಗಳಿಂದ ಚೇಷ್ಟೆಯಿಂದ ಕದಿಯಲು ಪ್ರಾರಂಭಿಸಿದರು.
ಅಕ್ಕ ಪಕ್ಕದ ಮನೆಯವರು ಹಾಗೂ ಹಳ್ಳಿಯ ಜನರು ಕೃಷ್ಣ ಹಾಗೂ ಕೃಷ್ಣನ ಸ್ನೇಹಿತರು ಕದಿಯುತ್ತಿರುವುದನ್ನು ತಿಳಿದು ಹಳ್ಳಿಯ ಮಹಿಳೆಯರು ಮೊಸರು ಮತ್ತು ಬೆಣ್ಣೆಯ ಮಡಕೆಗಳನ್ನು ಚಾವಣಿಯ ಮೇಲೆ ನೇತು ಹಾಕಲು ಪ್ರಾರಂಭಿಸಿದರು, ಅವುಗಳನ್ನು ಕೃಷ್ಣನಿಗೆ ಹಾಗೂ ಪ್ರಶ್ನೆನ ಸ್ನೇಹಿತರಿಗೆ ಸಿಗದ ಹಾಗೆ ಮಾಡಿದರು ಆದಾಗ್ಯೂ, ಕೃಷ್ಣ ಮತ್ತು ಅವನ ಸ್ನೇಹಿತರು ಒಂದು ಬುದ್ಧಿವಂತ ಪರಿಹಾರವನ್ನು ರೂಪಿಸಿದರು ಅವರು ಮಡಕೆಗಳನ್ನು
ತೆಗೆಯಲು ಒಬ್ಬರ ಮೇಲೆ ಒಬ್ಬರು ನಿಂತು ತೆಗೆಯಲು ಪ್ರಯತ್ನಿಸಿದರು ನಂತರ ಅದರಲ್ಲಿದ್ದ ಮೊಸರನ್ನು ತಿಂದು ಮಡಿಕೆಯನ್ನು ಹೊಡೆಯುತ್ತಿದ್ದರು ಶ್ರೀ ಕೃಷ್ಣನ ಈ ಬಾಲ ಲೀಲೆಯನ್ನೇ ಇಂದಿಗೂ ಕೂಡ ಗೋಕುಲಾಷ್ಟಮಿ ಎಂದು ಆಚರಿಸಲಾಗುತ್ತದೆ.
ಹಾಗಾಗಿ ಗೋಕುಲಷ್ಟಮಿಯ ದಿನದಂದು ಹೆಚ್ಚಿನ ಪ್ರದೇಶಗಳಲ್ಲಿ ಊರಿನ ಜನರು ಹಾಗೂ ಯುವಕರ ತಂಡ ಸೇರಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯನ್ನು ಮಾಡುತ್ತಾರೆ ಇದರಲ್ಲಿ ಒಂದು ಮಡಿಕೆಯ ಒಳಗಡೆ ಮೊಸರನ್ನು ಹಾಕಿ ಎತ್ತರದಲ್ಲಿ ಕಟ್ಟಿ ಇಡುತ್ತಾರೆ ನಂತರ ಒಂದೊಂದು ಯುವಕರ ಗುಂಪು ಒಬ್ಬರ ಮೇಲೆ ಒಬ್ಬರು ಹತ್ತಿ ಮೊಸರಿನ ಮಡಿಕೆಯನ್ನು ಹೊಡೆಯಲು ಪ್ರಯತ್ನಿಸುತ್ತಾರೆ.
ಅದಲ್ಲದೆ ಕೆಲವು ಭಾಗಗಳಲ್ಲಿ ಒಬ್ಬೊಬ್ಬರಾಗಿ ಮೊಸರಿನ ಮಡಿಕೆಯನ್ನು ಹೊಡೆಯಲು ಪ್ರಯತ್ನಿಸುತ್ತಾರೆ ಆಗ ಆ ಮಡಿಕೆಗೆ ಒಂದು ಹಗ್ಗವನ್ನು ಕಟ್ಟಿ, ಇವರ ಕೈಗೆ ಸಿಗದ ಹಾಗೆ ಅದನ್ನು ಮೇಲೆ ಕೆಳಗೆ ಇಳಿಯುತ್ತಿರುತ್ತಾರೆ ಹಾಗೆ ಮಡಿಕೆಯನ್ನ ಒಡೆಯುಲು ಪ್ರಯತ್ನಿಸುವ ವ್ಯಕ್ತಿಗೆ ಬಣ್ಣದ ನೀರುಗಳನ್ನು ಹಾಗೂ ನೀರುಗಳನ್ನು ಹಾಕುತ್ತಿರುತ್ತಾರೆ.
ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನಗಳನ್ನು ನೀಡಲಾಗುತ್ತದೆ ಈ ಆನಂದಮಯ ಕೃಷ್ಣ ಲೀಲೆಯ ಕಾರ್ಯಕ್ರಮವನ್ನು ನೋಡಲು ಜನಸಾಗರವೇ ಸೇರುತ್ತದೆ ಹಾಗೆ ಸೇರಿದ ಜನರಲ್ಲಿ ಸಂತೋಷ ಪಡುತ್ತಾರೆ.
ಮೊಸರು ಕುಡಿಕೆ ಹೊಡೆಯುವುದರ ವೈಜ್ಞಾನಿಕ ಮಹತ್ವ
ಮೊಸರು ಕುಡಿಕೆ ಆಚರಣೆ ಹಾಗೂ ಹೊಡೆಯುವ ವೈಜ್ಞಾನಿಕ ಮಹತ್ವಗಳು ಏನೆಂದರೆ ದೈಹಿಕವಾಗಿ ಬಲ ಹಾಗೂ ಶಕ್ತಿ ಸಿಗುತ್ತದೆ ಹಾಗೂ ಮನಸ್ಸು ಉಲ್ಲಾಸದಿಂದ ಇರುವುದರಿಂದ ದೇಹದ ನಾಡಿಗಳು ಶುದ್ಧವಾಗಿ ರಕ್ತವನ್ನು ನಿಯಂತ್ರಿಸುತ್ತದೆ ಹಾಗೂ ದೈಹಿಕ ವ್ಯಯಮವಾಗುವುದರಿಂದ ಇದು ಮಾನಸಿಕ ಒತ್ತಡಗಳನ್ನು ನಿವಾರಿಸುತ್ತದೆ.
ಮೊಸರು ಕುಡಿಕೆ ಆಚರಣೆ ಮಾಡೋದು ಹೇಗೆ
ಹೌದು ಸ್ನೇಹಿತರೆ ಈ ಲೇಖನವನ್ನು ಓದಿದ ನಂತರ ನಿಮಗೂ ಕೂಡ ಈ ಮೊಸರು ಕುಡಿಕೆ ಹಬ್ಬವನ್ನ ಆಚರಿಸಬೇಕು ಎಂದು ಅನಿಸಿರಬಹುದು ಆದರೆ ಈ ಮೊಸರು ಕುಡಿಕೆ ಆಚರಣೆ ಹೇಗೆ ಮಾಡುವುದು ಇದಕ್ಕೆ ಬೇಕಾಗುವ ಸಾಮಗ್ರಿಗಳೇನು ಅನ್ನೋದನ್ನ ನೋಡೋಣ.
ಒಂದು ಶುದ್ಧವಾದ ಸ್ವಚ್ಛವಾದ ಮಣ್ಣಿನ ಮಡಿಕೆಯನ್ನು ತರಬೇಕು ಹಾಗೆ ಆ ಮಡಿಕೆಗೆ ಹಗ್ಗವನ್ನು ಕಟ್ಟಿ ಸ್ವಲ್ಪ ಎತ್ತರವಾಗಿ ಕಟ್ಟಬೇಕು ನಂತರ ಆ ಮಡಿಕೆಯ ಒಳಗೆ ಮೊಸರನ್ನ ಹಾಕಿ ಕಟ್ಟಿಡಬೇಕು
ನಂತರ ಮಡಿಕೆಯನ್ನು ಹೊಡೆಯಲು ಒಬ್ಬೊಬ್ಬರಾಗಿ ಅಥವಾ ಗುಂಪುಗಳಾಗಿ ಪ್ರಯತ್ನಿಸಬೇಕು ಮಡಿಕೆ ಒಡೆದು ಅದರಿಂದ ಮೊಸರು ಚೆಲುವ ಹಾಗೆ ಮಾಡಿದವರು ಗೆದ್ದ ಹಾಗೆ.
ಆಧುನಿಕವಾಗಿ ನಾವು ನೋಡುವುದಾದರೆ ಮಡಿಕೆಯನ್ನು ಹೊಡೆಯುವಾಗ ಅಕ್ಕಪಕ್ಕ ನಿಂತಿರುವವರು ನೀರನ್ನು ಚೆಲ್ಲೋದು ಬಣ್ಣಗಳನ್ನು ಚೆಲ್ಲೋದು ಮಾಡುತ್ತಾರೆ ಇದರಿಂದ ಒಡೆಯುವವರಿಗೆ ಏಕಾಗ್ರತೆ ಹಾಳಾಗಿ ಅವರ ಗುರಿ ತಪ್ಪುತ್ತದೆ ಇದಿಷ್ಟು ಮೊಸರು ಕುಡಿಕೆಯ ಬಗ್ಗೆ ಮಾಹಿತಿ.
ಸ್ನೇಹಿತರೆ ಧಾರ್ಮಿಕ ಆಚರಣೆಗಳನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಬೇಕೆಂದು ಶಾಸ್ತ್ರ ಹಾಗೂ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಆಡಂಬರ ಅಥವಾ ಮನರಂಜನೆಗಾಗಿ ಹಬ್ಬಗಳನ್ನ ಆಚರಣೆಗಳನ್ನು ಮಾಡಬಾರದು ಎಂದು ಹಿರಿಯರು ಹೇಳುತ್ತಾರೆ.