
ಆಂಧ್ರಪ್ರದೇಶ – ಅಂಗಾಂಗ ವ್ಯಾಪಾರ ಮಾಡುವ ಗ್ಯಾಂಗ್ ಒಂದು ಗುಂಟೂರಿನ ಬಡ ಅಟೋ ರಿಕ್ಷಾ ಚಾಲಕನೊಬ್ಬನಿಗೆ ಮೋಸ ಮಾಡಿದೆ…!
ಕಿಡ್ನಿಯನ್ನು ಮಾರಿದರೆ 30 ಲಕ್ಷ ರೂಪಾಯಿ ಕೊಡುವುದಾಗಿ ಭರವಸೆ ನೀಡಿದ್ದ ಗ್ಯಾಂಗ್ ನಂತರ ಹೇಳಿದಷ್ಟು ಹಣ ನೀಡದೆ ವಂಚನೆ ಎಸಗಿದೆ…!!
ಕೇವಲ 1.1 ಲಕ್ಷ ರೂಪಾಯಿ ಹಣವನ್ನು ನೀಡಿ, ತನ್ನ ಕಿಡ್ನಿಯನ್ನು ಕೊಂಡ ಗ್ಯಾಂಗ್ ತನಗೆ ಮೋಸ ಮಾಡಿದೆ ಎಂದು ಮೋಸ ಹೋದ ಅಟೋ ಚಾಲಕ ಆರೋಪ ಮಾಡಿದ್ದಾನೆ…!
ಗುಂಟೂರು ಪಟ್ಟಣದ ಜಿ ಮಧು ಬಾಬು ಎಂಬಾತ ಮೋಸ ಹೋದ ವ್ಯಕ್ತಿ…!!
ಆತನಿಗೆ ಸುಮಾರು 31 ವರ್ಷ ಪ್ರಾಯ, ಇನ್ನೂ ಸಣ್ಣ ವಯಸ್ಸು…!
ಮಧು ಬಾಬು ಅವರ ಆರ್ಥಿಕ ಸ್ಥಿತಿ ಚೆನ್ನಾಗಿ ಇರಲಿಲ್ಲ…!!
ಅವರ ತಂದೆ ಆರ್ಥಿಕ ಸಮಸ್ಯೆಯಿಂದ ಸಾಲ ತೀರಿಸಲು ಆಗದೆ ಆತ್ಮಹತ್ಯೆ ಮಾಡಿಕೊಂಡಿದ್ದರು…!
ಸಾಲ ತೀರಿಸಲಾಗದೆ ಜಿ ಮಧು ಬಾಬು ತನ್ನ ಕಿಡ್ನಿಯನ್ನು ಮಾರಲು ಮುಂದಾಗಿದ್ದರು…!!
ಜೂನ್ 15, 2024 ರಂದು ಕಿಡ್ನಿಯನ್ನು ದಾನ ಮಾಡಿದ್ದು, ಆರಂಭದಲ್ಲಿ 30 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿದ್ದ, ಕಿಡ್ನಿಯನ್ನು ಕಲೆಕ್ಟ್ ಮಾಡಿಕೊಂಡ ತಂಡ ಬರೀ 1.1 ಲಕ್ಷ ರೂಪಾಯಿ ನೀಡಿದೆ…!
ವಿಜಯವಾಡದ ವಿಜಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ…!!
ತನಗೆ ಮೋಸ ಮಾಡಿದ ಗ್ಯಾಂಗ್ ಅನ್ನು ಬಂಧಿಸುವಂತೆ ಕೋರಿ ಮಧು ಬಾಬು ಪೋಲಿಸರಿಗೆ ದೂರು ನೀಡಿದ್ದಾರೆ…!
ಈ ಗ್ಯಾಂಗ್ ಅನೇಕರಿಗೆ ಇದೇ ರೀತಿಯಲ್ಲಿ ಮೋಸ ಮಾಡಿದೆ ಎಂದು ಅನುಮಾನ ವ್ಯಕ್ತಪಡಿಸಿರುವ ಪೋಲಿಸರು, ತನಿಖೆ ಆರಂಭಿಸಿದ್ದಾರೆ…!!