ಪುರಾಣಗಳಲ್ಲಿ ಧರ್ಮ ಗ್ರಂಥಗಳಲ್ಲಿ ಹೇಳಿರುವ 14 ಲೋಕಗಳ ಮಹತ್ವ.?

ನಮ್ಮ ಸನಾತನ ಧರ್ಮದ ಪುರಾಣಗಳಲ್ಲಿ ಮತ್ತು ಅಥರ್ವವೇದದಲ್ಲಿ , ಹದಿನಾಲ್ಕು ಲೋಕಗಳ ಬಗ್ಗೆ ವಿವರಿಸಿದ್ದಾರೆ ಚತುರ್ದಶ ಭವನಗಳು ಎಂದು ಕರೆಯುತ್ತಾರೆ. ಭೂಮಿಯ ಮೇಲಿನ ಲೋಕಗಳನ್ನ ಊರ್ದ್ವಲೋಕವೆಂದು ಕರೆಯುತ್ತಾರೆ ಭೂಮಿಯ ಕೆಳಗಿನ ಲೋಕವನ್ನ ಅಥರ್ವ ಲೋಕ ಎಂದು ಕರೆಯುತ್ತಾರೆ.


ಲೋಕಗಳನ್ನ ಸೃಷ್ಟಿ ಸ್ಥಿತಿ ಲಯ ಗಳಿಗೂ ಈ 14 ಲೋಕಗಳಿಗೂ ತುಂಬಾ ಮಹತ್ವವಿದೆ. ಈ 14 ಲೋಕಗಳು ಮಾನವನು ಜೀವನದಲ್ಲಿ ಏನೇನು ಮಾಡಬೇಕು ಏನೇನು ಮಾಡಬಾರದು ಅನ್ನೋದನ್ನು ಕೂಡ ನಮಗೆ ಮಾರ್ಗದರ್ಶನ ನೀಡುತ್ತದೆ. ಭಗವಂತನ ವಿಶ್ವರೂಪ ದರ್ಶನದಲ್ಲಿಯೂ ಕೂಡ 14 ಲೋಕಗಳು ತೋರಿಸಿದ್ದಾನೆ.
ಈ 14 ಲೋಕಗಳು ಯಾವ ಯಾವುದು ಇಲ್ಲಿ ಯಾರ್ಯಾರು ವಾಸವಿರುತ್ತಾರೆ ಹಾಗೂ ಇವುಗಳ ಮಹತ್ವ ಏನು ಎನ್ನುವುದನ್ನು ನಾವು ತಿಳಿದುಕೊಳ್ಳೋಣ
.

01 ಸತ್ಯಲೋಕ

ಮೊದಲನೇದಾಗಿ ಸತ್ಯ ಲೋಕ ಇಲ್ಲಿ ಸೃಷ್ಟಿಕರ್ತ ಬ್ರಹ್ಮ ಹಾಗೂ ಅವನ ಪತ್ನಿ ತಾಯಿ ಸರಸ್ವತಿ ನೆಲೆಸಿರುತ್ತಾರೆ ಇಲ್ಲಿ ಇರುವವರಿಗೆ ನಾವು ಭೇದನೆ ಸಂಕಟ ಹಾಗೂ ವಯಸ್ಸು ಹಸಿವು ಬಾಯಾರಿಕೆ ಯಾವುದು ಆಗುವುದಿಲ್ಲ.
ಇಲ್ಲಿ ಬ್ರಹ್ಮಾಂಡದ ಸಕಲ ಜ್ಞಾನಗಳು ಹಾಗೂ ಶಾಸ್ತ್ರಗಳು ಕೂಡ ಇಲ್ಲಿ ದೊರೆಯುತ್ತದೆ ಎಂದು ಹೇಳುತ್ತಾರೆ ಹಾಗೂ ಬ್ರಹ್ಮಾಂಡದ ಸತ್ಯ ರಹಸ್ಯಗಳನ್ನ ಸಾರುವ ಲೋಕ ಎಂದು ಹೇಳುತ್ತಾರೆ.
ಹಾಗೂ ತಪಸ್ಸು ಮಾಡಿದ ಎಷ್ಟು ಮಹಾತ್ಮರ ಆತ್ಮಗಳು ಇಲ್ಲಿ ನೆಲೆಸಿದೆ ಎಂದು ಹೇಳುತ್ತಾರೆ.

02 ತಪ-ಲೋಕ

ಇಲ್ಲಿ ನಾಲ್ವರು ಬಾಲಕರು ಇರುತ್ತಾರೆ ಈ ನಾಲ್ವರ ಹೆಸರು (ಶನಕ, ಶನಂದನ, ಸನಾತನ, ಸನತ್ ಕುಮಾರ, ) ಸಕಲ ಜ್ಞಾನಗಳನ್ನು ಬಲ್ಲವರು ಎಂದು ಕರೆಯುತ್ತಾರೆ ಇವರನ್ನು ಮಹಾ ವಿಷ್ಣುವಿನ ಸ್ವರೂಪ ಎಂದು ಪುರಾಣಗಳಲ್ಲಿ ಹೇಳಿದ್ದಾರೆ, ಇವರನ್ನು ನೋಡಲು ಚಿಕ್ಕ ಬಾಲಕರಂತೆ ಕಂಡರು ಇವರು ವಿಶ್ವದ ಸರ್ವ ಜ್ಞಾನವನ್ನು ತಿಳಿದ ಮಹಾಮೇಧಾವಿಗಳು. ದೇವತೆಗಳು ಕೂಡ ಇವರಿಗೆ ತಲೆಬಾಗಿ ನಮಸ್ಕರಿಸುತ್ತಾರೆ . ಈ ನಾಲ್ವರಿಗೆ ಇರುವ ಜ್ಞಾನ ಹಾಗೂ ವರದ ಬಲದಿಂದ ಯಾವ ಲೋಕಕ್ಕೆ ಯಾವಾಗ ಬೇಕಾದರೂ ಬರಬಹುದು ಹಾಗೂ ಹೋಗಬಹುದು ಇವರು ಈ ತಪೋಲೋಕದಲ್ಲಿ ತಪಸ್ ಮಾಡುವುದರಿಂದ ಈ ಲೋಕಕ್ಕೆ ತಪೋಲೋಕ ಎಂದು ಹೆಸರು.
ಈ ತಪಲೋಕವು ಬ್ರಹ್ಮ ಲೋಕದಿಂದ 12 ಕೋಟಿ ಯೋಜನೆಗಳಷ್ಟು ದೂರದಲ್ಲಿದೆ ಪುರಾಣಗಳ ಪ್ರಕಾರ ಒಂದು ಯೋಜನಾ ಅಂದರೆ 12.8 ಕಿಲೋಮೀಟರ್.

03 ಜನ-ಲೋಕ

ಈ ಜನ ಲೋಕವನ್ನ ಸಪ್ತಋಷಿಗಳ ಲೋಕ ಎಂದು ಕರೆಯುತ್ತಾರೆ
ಇದು ತಪಲೋಕದಿಂದ 8 ಕೋಟಿ ಯೋಜನೆಯಷ್ಟು ದೂರದಲ್ಲಿದೆ. ಪುರಾಣಗಳ ಪ್ರಕಾರ ಇಲ್ಲಿ ನಾಲ್ಕು ಜನ ಬ್ರಹ್ಮನ ಮಾನಸಿಪುತ್ರರು ಇದ್ದಾರೆ ಎಂದು ಹೇಳಲಾಗುತ್ತದೆ ಹಾಗೆ ಇಲ್ಲಿ ಅನೇಕ ಮುನಿ ತಪಸ್ಸಿಗಳು ಹಾಗೂ ಮಹಾತ್ಮರು ಸರ್ವಜ್ಞನ ಬಲ್ಲವರು ಇದ್ದಾರೆ ಎಂದು ಹೇಳುತ್ತಾರೆ.

04 ಮಹರ್ಲೋಕ

ಮಹರ್ಲೋಕ ಇದು ಜನಲೋಕದಿಂದ 2 ಕೋಟಿ ಯೋಜನೆಯೆಷ್ಟು ದೂರದಲ್ಲಿದೆ. ಇಲ್ಲಿ ಅನೇಕ ಜನ ಸಾಧು ಸಂತರು ಹಾಗೂ ಯೋಗಿಗಳು ಹಾಗೂ ಮುನಿ ತಪಸ್ಸಿಗಳು ಇಲ್ಲಿ ಇರುತ್ತಾರೆ. ಇವರು ಸತ್ಯ ಲೋಕಕ್ಕೆ ಹಾಗೂ ಭೂಲೋಕಕ್ಕೆ ಆಗಾಗ ಬಂದು ಹೋಗುತ್ತಾರೆ ಹಾಗೆ ಇವರಿಗೆ ಎಲ್ಲಾ ಲೋಕಗಳಿಗೂ ಭೇಟಿ ನೀಡುವ ಅವಕಾಶಗಳು ಕೂಡ ಭಗವಂತ ಕೊಟ್ಟಿರುತ್ತಾನೆ. ಇಲ್ಲಿ ವಾಸಿಸುವವರ ಒಟ್ಟು ಆಯುಷ್ಯ ಬ್ರಹ್ಮನಿಗೆ ಒಂದು ಹಗಲಿಗೆ ಸಮ ಎಂದು ಹೇಳುತ್ತಾರೆ

05 ಸ್ವರ್ಲೋಕ

ಸ್ವರ್ಗ ಲೋಕ ಈ ಲೋಕದ ಅಧಿಪತಿ ಇಂದ್ರ, ಹಾಗೂ ಈ ಲೋಕದಲ್ಲಿ ಇಂದ್ರನ ಜೊತೆ 35ಕ್ಕೂ ಅಧಿಕ ದೇವತೆಗಳು ಕೂಡ ವಾಸಿ ಇರುತ್ತಾರೆ ಎಂದು ಹೇಳುತ್ತಾರೆ. ಇದು ಉರ್ದುವ ಲೋಕಗಳಲ್ಲಿ ಅತ್ಯಂತ ಸುಂದರವಾಗಿರುವ ಲೋಕ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಪುಣ್ಯ ಮಾಡಿ ಮರಣ ಹೊಂದಿದವರು ಸ್ವರ್ಗಕ್ಕೆ ಹೋಗುತ್ತಾರೆ ಎಂದು ಹೇಳುತ್ತಾರೆ ಅಂತವರು ಇದೇ ಸ್ವರ್ಗ ಲೋಕಕ್ಕೆ ಬರುತ್ತಾರೆ ಅವರಿಗೆ ಇಲ್ಲಿ ಬೇಕಾದ ಎಲ್ಲಾ ಸುಖಗಳು ಕೂಡ ದೊರೆಯುತ್ತದೆ. ಇಲ್ಲಿ ಐರಾವತ ಕಾಮಧೇನು ಹಾಗೂ ಕಲ್ಪವೃಕ್ಷ ಕೂಡ ಇದೆ ಹಾಗೂ ಯಕ್ಷ ಕಿನ್ನರ ಕಿಂಬರುಷರು ಹಾಗೂ ದೇವತೆಗಳು ಗಂಧರ್ವರು ಎಲ್ಲರೂ ಇಲ್ಲಿ ಇರುತ್ತಾರ. ಹಾಗೆ ಈ ಸ್ವರ್ಗ ಲೋಕದ ರಾಜಧಾನಿಯ ಹೆಸರು ಅಮರಾವತಿ ಎಂದು ಕರೆಯುತ್ತಾರೆ. ಅಮರರು ಎಂದರೆ ಸಾವೆ ಇಲ್ಲದವರು ಎಂದು ಅರ್ಥ ಹಾಗೆ ಇಲ್ಲಿ ಸಾವಿ ಇಲ್ಲದ ಸೂರರು ವಾಸ ಮಾಡುತ್ತಾರೆ.

06 ಭುವರ್ಲೋಕ

ಭುವರ್ಲೋಕ ಇಲ್ಲಿ ಸಿದ್ದರು ಹಾಗೂ ಕೆಲವರು ಆಕಾಶ ಜೀವಗಳು ಚಲಿಸುವ ಲೋಕ ಎಂದು ಕರೆಯುತ್ತಾರೆ ಇದು ಭೂಮಿಯ ವಾತಾವರಣದ ಮೇಲ್ಮೈಯಲ್ಲಿಯೇ ಬರುವ ಲೋಕವಾಗಿದೆ ನಕ್ಷತ್ರ ಪುಂಜಗಳು ಹಾಗೂ ಧೂಮಕೇತುಗಳನ್ನು ಹಾಗೂ ಸೌರವ್ಯೂಹದಲ್ಲಿ ಗ್ರಹಗಳ ಮಧ್ಯದಲ್ಲಿ ಖಾಲಿ ಜಾಗವನ್ನು ಹೊಂದಿರುವ ಲೋಕವಾಗಿದೆ. ಹಾಗೂ ಈ ಲೋಕದಲ್ಲಿ ಏಳು ಸಣ್ಣ ಸಣ್ಣ ಲೋಕಗಳು ಕೂಡ ಇವೆ (ಧ್ರುವ ಲೋಕ, ಸಪ್ತ ಋಷಿ ಲೋಕ, ಕ್ಷೇತ್ರಲೋಕ, ಸೌರಮಂಡಲ, ಸೂರ್ಯಲೋಕ, ಚಂದ್ರಲೋಕ , ಹಾಗೂ ಕೊನೆಯ ಲೋಕ ರಾಹು ಕೇತು ಲೋಕ)
ರಾಹು ಕೇತು ಲೋಕಗಳ ಕೆಳಗೆ ಅಂತರಕ್ಷಾ ಲೋಕ ಎನ್ನುವುದು ಕೂಡ ಒಂದು ಇದೆ ಇಲ್ಲಿ ದಟ್ಟ ಹೋಗೆ ಮೋಡಗಳು ಪಿಸಾಚಿ ಪೇಟೆಗಳು ಅತೃಪ್ತ ಆತ್ಮಗಳು ಇಲ್ಲಿ ವಾಸವಿರುತ್ತದೆ ಎಂದು ಹೇಳುತ್ತಾರೆ,

07 ಭೂಲೋಕ

ಭೂಲೋಕ ಇಲ್ಲಿ 84 ಲಕ್ಷ ಜೀವ ರಾಶಿಗಳು ವಾಸಿಸುತ್ತದೆ.
ಭೂಲೋಕ ಸದಾ ಕಾಲದ ನಿಯಂತ್ರಣದಲ್ಲಿರುವ ಲೋಕ ಈ ಲೋಕದಲ್ಲಿ ಜನಿಸಿದ ಪ್ರತಿ ಜೀವಿಗಳಿಗೂ ಮರಣ ನೋವು ವೇದನೆ ಅನ್ನೋದು ಶತಸಿದ್ಧ. ಈ ಲೋಕದಲ್ಲಿ ಪಾಪ ಮಾಡಿದವರಿಗೆ ನರಕ ಪ್ರಾಪ್ತಿಯಾಗುತ್ತದೆ ಹಾಗೂ ಸಾಧನೆ ಮಾಡಿದವರಿಗೆ ಭಗವಂತನ ನಿತ್ಯ ನಿವಾಸ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ.

08 ಅತಳಲೋಕ

ಅತಳಲೋಕ ಇದನ್ನ ಬಾಲಾಸುರ ಎಂಬ ರಾಕ್ಷಸನು ಆಳುತ್ತಾನೆ , ಇವನು ಮಾಯಾ ಸುರನ ಮಗನಾಗಿದ್ದಾನೆ

09 ವಿತಳಲೋಕ

ವಿತಳಲೋಕ ಈ ಲೋಕವನ್ನು ಶಿವನ ಸ್ವರೂಪದ ಲೋಕ ಎಂದು ಹೇಳುತ್ತಾರೆ ಹಾಗೆ ಇದನ್ನ ಹತಕೇಶ್ವರ ಲೋಕ ಎಂದು ಕರೆಯುತ್ತಾರೆ. ಹಾಗೂ ಇಲ್ಲಿ ಹ್ಯಾರ್ಕಿ ಎಂಬ ಹೆಸರಿನ ಒಂದು ನದಿಯು ಕೂಡ ಹರಿಯುತ್ತದೆ ಈ ನದಿಯಲ್ಲಿ ಚಿನ್ನವೂ ಕೂಡ ಹರಿಯುತ್ತದೆ. ಅದಕ್ಕಾಗಿ ಈ ಲೋಕ ಚಿನ್ನದಿಂದ ಕೂಡಿದೆ.

10 ಸುತಳಲೋಕ

ಸುತಳಲೋಕ ಇಲ್ಲಿ ಅಸುರರ ರಾಜ ಬಲಿಚಕ್ರವರ್ತಿ ಇರುತ್ತಾನೆ ಇವನು ಅಸುರರ ರಾಜನಾದರೂ ಮಹಾನ್ ಭಗವತ್ ಭಕ್ತನಾಗಿದ್ದ , ನಮಗೆ ಬಲಿ ಚಕ್ರವರ್ತಿ ಹಾಗೂ ವಾಮನ ನ ಕಥೆ ಎಲ್ಲರಿಗೂ ಗೊತ್ತಿದೆ, ಬಲಿಯು 100ನೇ ಅಶ್ವಮೇಧ ಯಾಗವನ್ನು ಮಾಡುವಾಗ ಭಗವಂತ ಮಹಾ ವಿಷ್ಣು ವಾಮನ ಅವತಾರ ತಾಳಿ ಬಂದು ಬಲಿಯಿಂದ ದಾನವನ್ನು ಕೇಳುತ್ತಾನೆ ಆಗಬಲಿ ದಾನವನ್ನು ಕೊಡಲು ಸಿದ್ದನಾಗುತ್ತಾನೆ ಭಗವಂತ ಆಕಾಶ ಭೂಮಿ ಎರಡು ಪಾದವನ್ನು ಇಡುತ್ತಾನೆ ಇನ್ನು ಮೂರನೇ ಪಾದ ಎಲ್ಲಿಡಲಿ ಎಂದು ಕೇಳಿದಾಗ ಆಗಬಲಿ ತನ್ನ ತಲೆಯ ಮೇಲೆ ಇಡು ಎಂದು ಹೇಳುತ್ತಾನೆ. ಆಗ ಭಗವಂತ ಬಲಿಯ ತಲೆಯ ಮೇಲೆ ಕಾಲಿಟ್ಟು ಅವನನ್ನ ಸುತಳ ಲೋಕಕ್ಕೆ ತಳ್ಳಿದ ಎಂದು ಹೇಳುತ್ತಾರೆ.

11 ತಲಾತಳಲೋಕ

ತಲಾತಳಲೋಕ ಇಲ್ಲಿ ಮಾಯಾ ಸುರ ಎನ್ನುವ ರಾಜನಿದ್ದಾನೆ ಇವನು ತಂತ್ರ ವಿದ್ಯೆ ಮಂತ್ರ ವಿದ್ಯೆ ಅರಿತವನ್ನು ಆಗಿದ್ದಾನೆ ಇವನು ತನ್ನ ಮಾಯಾವಿದ್ಯೆಯಿಂದ ಇಂಧನ ಇಂದ್ರಜಾಲಕ್ಕೆ ಸವಾಲಸಗಿದ್ದಾನೆ

12 ಮಹಾತಳಲೋಕ

ಮಹಾತಳಲೋಕ ಇದು ಸಪ್ತರ್ಷಿಗಳಲ್ಲಿ ಒಬ್ಬರಾದ ಕಶ್ಯಪ ಮಹರ್ಷಿಯ ಮಡದಿ ಕದ್ರುವಿನ ಮಕ್ಕಳದ ಸರ್ಪಗಳು ವಾಸಮಾಡುತ್ತದೆ .

13 ರಸಾತಳಲೋಕ

ರಸಾತಳಲೋಕ ಈ ಲೋಕ ತುಂಬಾ ಭಯಂಕರವಾದ ಅಂತಹ ಲೋಕ ಇಲ್ಲಿ ತುಂಬಾ ಕೆಟ್ಟ ಪೇಟೆಗಳು ಹಾಗೂ ಭೂತಗಣಗಳು ಇಲ್ಲಿ ಅಧಿಕಾರವನ್ನು ನಡೆಸುತ್ತದೆ ಇವರು ಯಾವಾಗಲೂ ಅಷ್ಟದಿಕ್ಪಾಲಕರೊಂದಿಗೆ ದೇವತೆಗಳೊಂದಿಗೆ ಸಂಘರ್ಷದಲ್ಲಿ ಇರುತ್ತಾರೆ ಇರುತ್ತಾರೆ. ಇಲ್ಲಿರುವ ಪಾಪ ಪುಣ್ಯ ಕರ್ಮದ ಲೆಕ್ಕಾಚಾರ ಇರುವುದಿಲ್ಲ ಇಲ್ಲಿ ಕೆಟ್ಟ ಮೃಗಗಳ ರೀತಿ ವರ್ತಿಸುವ ಭೂತ ಗಣಗಳು ಇರುತ್ತದೆ

14 ಪಾತಾಳಲೋಕ

ಪಾತಾಳಲೋಕ ಇದು ಕೊನೆಯ ಲೋಕ ಇದು ಅಥರ್ವ ಲೋಕಗಳಲ್ಲಿ ಕೊನೆದು ಈ ಲೋಕವನ್ನು ಸರ್ಪ ರಾಜ ವಾಸುಕಿ ನಿಯಂತ್ರಿಸುತ್ತಾನೆ ಎಂದು ಹೇಳುತ್ತಾರೆ .
ಒಮ್ಮೆ ನಾರದರು ಈ ಲೋಕಕ್ಕೆ ಬಂದು ವೀಕ್ಷಣೆ ಮಾಡಿ ಬ್ರಹ್ಮ ಲೋಕಕ್ಕೆ ಹೋಗಿ ಹೇಳುತ್ತಾರೆ ಪಾತಾಳ ಲೋಕ ಅತ್ಯಂತ ಸುಂದರವಾದ ಲೋಕ ಇಲ್ಲಿ ಸೂರ್ಯನ ಕಿರಣಗಳು ಬೀಳುವುದರಿಂದ ಇಲ್ಲಿರುವ ಸರ್ಪಗಳ ತಲೆ ಮೇಲಿನ ಮಣಿಗಳು ವಜ್ರದಂತೆ ಹೊಳೆಯುತ್ತದೆ.
ಹಾಗೆ ಈ ಲೋಕದ ಕೆಳಗಡೆ ನರಕ ಇದೆ ಎಂದು ಹೇಳುತ್ತಾರೆ ಗರುಡ ಪುರಾಣದಲ್ಲಿ ಹೇಳಿರುವಂತೆ ರೌರವ ನರಕ ಹಾಗೂ ಇನ್ನು ಮುಂತಾದ ನರಕಗಳು ಇಲ್ಲಿ ಇದೆ ಎಂದು ಹೇಳುತ್ತಾರೆ

ಜಾಹಿರಾತುಗಳಿಗಾಗಿ ಸಂಪರ್ಕಿಸಿ : nithyadhvani@gmail.com

Leave a Comment

Your email address will not be published. Required fields are marked *

Scroll to Top