
ಚೆನ್ನೈ : ನಾವು ಸಾಮಾಜಿಕ ಜಾಲತಾಣಗಳಲ್ಲಿ ಚೀನಾದವರು ಹಾವು ತಿಂದರೂ ಚೇಳುತಿದ್ದರು ಎಂದು ನೋಡುತ್ತಿರುತ್ತೇವೆ ಆದರೆ ತಮಿಳುನಾಡಿನಲ್ಲಿ ಒಬ್ಬ ವ್ಯಕ್ತಿ ಹಾವನ್ನ ಹಿಡಿದು ಕರಿದು ತಿಂದಿದ್ದಾನೆ.
ತಮಿಳುನಾಡಿನ ವ್ಯಕ್ತಿಯೊಬ್ಬ ಹಾವನ್ನು ಹಿಡಿದು, ಅದರ ಚರ್ಮ ಸುಲಿದು ಎಣ್ಣೆಯಲ್ಲಿ ಕರಿದು ತಿಂದಿರುವ ವಿಲಕ್ಷಣ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಆತನನ್ನು ವನ್ಯಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.
ತಿರುಪತ್ತೂರು ಜಿಲ್ಲೆಯ ಪೆರುಮಾಪಟ್ಟು ಪ್ರದೇಶದ ವ್ಯಕ್ತಿ ರಾಜೇಶ್ ಕುಮಾರ್ (30) ಹಾವನ್ನೇ ಖಾದ್ಯ ಮಾಡಿಕೊಂಡು ಸೇವನೆ ಮಾಡಿ ವಿಕೃತಿ ಮೆರೆದ ವ್ಯಕ್ತಿ.
ಹಾವನ್ನು ಕೊಂದು ಅದರ ಚರ್ಮವನ್ನು ಸೊಲಿಯುವ ವಿಡಿಯೋವನ್ನು ಚಿತ್ರಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲ ಬಾರಿ ವೈರಲ್ ಆಗಿದೆ , ವಿಡಿಯೋ ನೋಡಿದ ಕೆಲವರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಡಿಯೋ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ಹಾವನ್ನು ಕರಿದು ತಿಂದಿದ್ದಾಗಿ ಒಪ್ಪಿಕೊಂಡಿದ್ದಾನೆ.
ಇದೀಗ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಜೈಲಿಗಟ್ಟಲಾಗಿದೆ.