
ಮಳೆ ಇಲ್ಲದೆ ಬಿಸಿಲಿನಿಂದ ಕಂಗಾಲಾಗಿದ್ದ ರಾಜ್ಯದ ಜನರಿಗೆ ಇದೀಗ ವರಣದೇವ ಖುಷಿ ಕೊಟ್ಟಿದ್ದಾನೆ.
ಆದರೆ ವರುಣನ ಈ ಆರ್ಭಟಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದೆ
.ಹುಬ್ಬಳ್ಳಿ ಧಾರವಾಡ ಬೆಳಗಾವಿ ಸೇರಿ ಹಾಗೂ ರಾಜ್ಯದ ಕೆಲವು ಭಾಗಗಳಲ್ಲಿ ಭಾರಿ ಮಳೆ ಆಗುತ್ತಿದೆ.
ಹುಬ್ಬಳ್ಳಿಯಲ್ಲಿ ಒಂದೇ ಸಾರಿ ಸುರಿದ ಮಳೆಯಿಂದ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚಾರಿಕ್ಕೂ ಕೂಡ ಅಡ್ಡಿಯಾಯಿತು
ವ್ಯಾಪಾರ ಮಳೆಗೆ ಗಳಿಗೆ ನುಗ್ಗಿದ ಚರಂಡಿ ನೀರು..
ಇನ್ನು ಧಾರವಾಡದಲ್ಲಿ ಧಾರಾಕಾರ ಮಳೆ ಆಗುತ್ತಿದ್ದು ಚರಂಡಿ ಮೋರಿ ನೀರುಗಳು ಮನೆಗಳಿಗೆ ನಗುತಿದೆ ಜನಜೀವನ ಕೂಡ ಅಸ್ತವ್ಯಸ್ತವಾಗಿದೆ ಗುಡುಗು ಮಿಂಚು ಸಹಿತ ಗಾಳಿಗೆ ಸೆಂಟ್ರಿಂಗ್ ಕಟ್ಟಿಗೆಗಳು, ಖಾಸಗಿ ಬಸ್ಸಿನ ಮೇಲೆ ಬಿದ್ದು ಬಸ್ಸಿಗೆ ಹಾನಿಯಾಗಿದೆ.
ಇನ್ನು ಬೆಳಗಾವಿಯಲ್ಲಿ ಒಂದು ಗಂಟೆ ನಿರಂತರವಾಗಿ ಮಳೆಯಾಗಿದ್ದರಿಂದ ರಸ್ತೆಗಳಲ್ಲಿ ನೀರು ತುಂಬಿ ಮನೆಗಳಿಗೂ ನೀರನ್ನು ನಗುತಿದೆ.
ರಾಜ್ಯದ ಹಲವು ಭಾಗಗಳಲ್ಲಿ ಇಂದು ಸಂಜೆಯಿಂದ ಭಾರಿ ಮಳೆ ಆಗುತ್ತಿದೆ.
ಚಿಕ್ಕಮಂಗಳೂರಿನಲ್ಲಿ ಬಿರುಷಿನ ಗಾಳಿ ಒಂದಿಗೆ ಗುಡುಗು ಮಳೆ ಇನ್ನು ಭಾರಿ ಮಳೆ ಆಗುವ ಸಾಧ್ಯತೆಗಳು ಕೂಡ ಇವೆ
ಕರಾವಳಿ ಹಾಗೂ ಮಲೆನಾಡಿನಲ್ಲಿ ಇನ್ನು ಕೆಲವು ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಅವಮಾನ ಇಲಾಖೆ ಸೂಚನೆ ನೀಡಿದೆ
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ
ಸಿಡಿಲು ಬಡಿದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ನದಿ ಬದಿಯ ಶೆಡ್ನಲ್ಲಿ ಕಾರ್ಮಿಕರು ಮರಳುಗಾರಿಕೆ ಮಾಡುತ್ತಿದ್ದರು. ಈ ವೇಳೆ ಸಿಡಿಲು ಬಡಿದು ಉತ್ತರ ಪ್ರದೇಶ ಮೂಲದ ಕಾರ್ಮಿಕ ಸಾವನ್ನಪ್ಪಿದ್ದಾನೆ. ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈಗ ಸುರಿಯುತ್ತಿರುವುದು ಬೇಸಿಗೆಯ ಅಕಾಲಿಕ ಮಳೆಯಾಗಿರುವುದರಿಂದ ಇದು ಈ ಬಾರಿ ಉತ್ತಮ ಮಳೆಯಾಗುವ ಮುನ್ಸೂಚನೆ ಅಲ್ಲವೇ ಅಲ್ಲ. ಮಾನ್ಸೂನ್ ಕರ್ನಾಟಕ ಪ್ರವೇಶಿಸಲು ಇನ್ನೂ ಒಂದು ತಿಂಗಳು ಬಾಕಿಯಿದೆ. ಅಂದಹಾಗೆ, ರಾಜ್ಯದ ರಾಜಧಾನಿ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಇವತ್ತು ಸಹ ಮಳೆಯಾಗಿದೆ.