
ಗಂಗಾವತಿ – ಜೈ ಶ್ರೀ ರಾಮ್ ಎಂದಿದ್ದಕ್ಕೆ ಹಿಂದೂ ಯುವಕನ ಮೇಲೆ ಮುಸ್ಲಿಂ ಗೆಳೆಯನಿಂದ ಹಲ್ಲೆ…!
ಕೊಪ್ಪಳ – ಬಾರ್ನಲ್ಲಿ ಸಾರಾಯಿ ಗ್ಲಾಸಿಗೆ ನೀರು ಹಾಕುವ ವೇಳೆ ಜೈ ಶ್ರೀರಾಮ್ ಎಂದು ಹೇಳಿದ್ದಕ್ಕೆ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆದ ಘಟನೆ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಮಂಗಳ ವಾರ ರಾತ್ರಿ ನಡೆದಿದೆ…!
ಇಲ್ಲಿಯ ಸನ್ಶೈನ್ ಬಾರ್ ನಲ್ಲಿ ಕುಮಾರ್ ರಾಠೋಡ್ ಎಂಬಾತ ಮದ್ಯಪಾನ ಮಾಡುತ್ತಿದ್ದ…!!
ಅದೇ ಸಂದರ್ಭದಲ್ಲಿ ಆತನಿದ್ದ ಟೇಬಲ್ಗೆ ಪರಿಚಯಸ್ಥ ಫಿರೋಜ್ಖಾನ್ ಬಂದ, ಇಬ್ಬರೂ ಮದ್ಯಪಾನ ಮಾಡಲು ಆರಂಭಿಸಿದರು, ಸಾರಾಯಿ ಗ್ಲಾಸ್ಗೆ ನೀರು ಹಾಕು ಎಂದು ಫಿರೋಜ್ ಖಾನ್ ಹೇಳಿದಾಗ ಕುಮಾರ್ ರಾಠೋಡ್ ಜೈ ಶ್ರೀರಾಮ್ ಎಂದು ಹೇಳಿ ಗ್ಲಾಸ್ಗೆ ನೀರು ಹಾಕಿದ್ದಾನೆ…!
ಆಗ ಫಿರೋಜ್ಖಾನ್ ಜೈ ಶ್ರೀರಾಮ್ ಘೋಷಣೆ ಏಕೆ ಕೂಗಿದೆ ಎಂದು ಆಕ್ಷೇಪಿಸಿದಾಗ ಇಂದು ಹನುಮ ಜಯಂತಿ ಇರುವುದರಿಂದ ಶ್ರೀ ರಾಮನನ್ನು ಸ್ಮರಿಸಿ ನೀರು ಹಾಕಿದ್ದೇನೆ ಎಂದು ಕುಮಾರ್ ಹೇಳಿದ್ದಕ್ಕೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಇಬ್ಬರೂ ಹೊಡೆದಾಡಿಕೊಂಡಿದ್ದಾರೆ…!!
ಫಿರೋಜ್ಖಾನ್ ಮತ್ತು ಇತರ 25 ಜನ ಸೇರಿ ನನ್ನ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆಂದು ಗ್ರಾಮೀಣ ಪೊಲೀಸ್ ಠಾಣೆಗೆ ಕುಮಾರ್ ರಾಠೋಡ್ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ…!