
ಇದೀಗ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಧರ್ಮಾಧರಿತ ಜನಸಂಖ್ಯೆ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.
ದೇಶದಲ್ಲಿ ಮೊದಲು 9.84% ಮುಸ್ಲಿಮರಿದ್ದರೆ, ಈಗ ಅದು 14.09%ಕ್ಕೆ ಏರಿಕೆ!
ಅಧ್ಯಯನದ ಪ್ರಕಾರ, 1950 ರಲ್ಲಿ ಭಾರತದ ಜನಸಂಖ್ಯೆಯಲ್ಲಿ ಹಿಂದೂಗಳ 84.65% ಇದ್ದಿದ್ದರು. 2015 ರ ಹೊತ್ತಿಗೆ ಅದು 78% ಕ್ಕೆ ಇಳಿದಿದೆ.
ಇದೇ ಅವಧಿಯಲ್ಲಿ ಮುಸ್ಲಿಂ ಜನಸಂಖ್ಯೆ ಶೇ.9.84ರಿಂದ ಶೇ.14.09ಕ್ಕೆ ಏರಿಕೆಯಾಗಿದೆ ಎಂದು ಪ್ರಧಾನ ಮಂತ್ರಿ ಸಲಹಾ ಮಂಡಳಿ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ ..!
ಭಾರತದಲ್ಲಿ ಬಹುಸಂಖ್ಯಾತ ಸಮುದಾಯದ ಜನಸಂಖ್ಯೆ ಕಡಿಮೆಯಾದರೆ, ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ, ಬಹುಸಂಖ್ಯಾತ ಸಮುದಾಯವಾದ ಮುಸ್ಲಿಮರ ಜನಸಂಖ್ಯೆಯು 18.5% ರಷ್ಟು ಹೆಚ್ಚಾಗಿದೆ.
ಪಾಕಿಸ್ತಾನದಲ್ಲಿ ಮುಸ್ಲಿಂ ಜನ ಸಂಖ್ಯೆ 3.75% ಮತ್ತು ಅಫ್ಘಾನಿಸ್ತಾನದಲ್ಲಿ 0.29% ಹೆಚ್ಚಾಗಿದೆ.
1971 ರಲ್ಲಿ ಬಾಂಗ್ಲಾದೇಶ ಪ್ರತ್ಯೇಕ ದೇಶವಾದ ನಂತರ ಪಾಕಿಸ್ತಾನವು ಬಹುಸಂಖ್ಯಾತ ಧಾರ್ಮಿಕ ಪಂಥದ 3.75% ಮತ್ತು ಒಟ್ಟು ಮುಸ್ಲಿಂ ಜನಸಂಖ್ಯೆಯ 10% ಹೆಚ್ಚಳ ಕಂಡಿತು.
ಮ್ಯಾನ್ಮಾರ್, ನೇಪಾಳದಲ್ಲೂ ಕುಸಿತ
ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆಯ ಕುಗ್ಗುವಿಕೆ ಶೇ. 7.8ರಷ್ಟಿದ್ದರೆ, ಮ್ಯಾನ್ಮಾರ್ನಲ್ಲಿ ಶೇ. 10ರಷ್ಟು ಕುಸಿತವಾಗಿದೆ. ಇದು ನೆರೆಹೊರೆಯ ರಾಷ್ಟ್ರದಲ್ಲಿ ಎರಡನೇ ಅತ್ಯಂತ ಮಹತ್ವದ ಕುಸಿತವಾಗಿದೆ. ಭಾರತವನ್ನು ಹೊರತುಪಡಿಸಿ, ನೇಪಾಳದ ಬಹುಸಂಖ್ಯಾತ ಸಮುದಾಯವಾದ ಹಿಂದೂಗಳ ಜನಸಂಖ್ಯೆಯ ತನ್ನ ಪಾಲಿನಲ್ಲಿ ಶೇ. 3.6ರಷ್ಟು ಕುಸಿತವನ್ನು ಕಂಡಿದೆ.
167 ದೇಶಗಳ ಮೌಲ್ಯಮಾಪನ
ಮೇ 2024ರಲ್ಲಿ ಬಿಡುಗಡೆಯಾದ ಈ ಅಧ್ಯಯನವು ಪ್ರಪಂಚದಾದ್ಯಂತ 167 ದೇಶಗಳಲ್ಲಿನ ಪ್ರವೃತ್ತಿಯನ್ನು ಮೌಲ್ಯಮಾಪನ ಮಾಡಿದೆ. ಭಾರತದ ಕಾರ್ಯಕ್ಷಮತೆಯು ದೊಡ್ಡ ಜಾಗತಿಕ ಪ್ರವೃತ್ತಿಗಳೊಂದಿಗೆ ಸ್ಥಿರವಾಗಿದೆ ಎನ್ನುತ್ತಾರೆ ಅಧ್ಯಯನಕಾರರು. ಅಲ್ಪಸಂಖ್ಯಾತರು ಭಾರತದಲ್ಲಿ ಕೇವಲ ರಕ್ಷಿಸಲ್ಪಟ್ಟಿಲ್ಲ, ನಿಜವಾಗಿಯೂ ಬೆಳೆಯುತ್ತಿದ್ದಾರೆ ಎಂಬುದನ್ನು ಈ ಅಂಕಿ ಅಂಶಗಳು ತೋರಿಸಿವೆ ಎನ್ನುತ್ತಾರೆ ತಜ್ಞರು.
ಪ್ರಧಾನಿಗಳ ಆರ್ಥಿಕ ಸಲಹಾ ಸಮಿತಿಯ ಅಧ್ಯಯನ ವರದಿಯ ಪೌರತ್ವ ತಿದ್ದುಪಡಿ ಕಾಯ್ದೆಗೆ (CAA)ಬಲ ನೀಡಲಿದೆ.
ಯಾಕೆಂದರೆ ನೆರೆಯ ರಾಷ್ಟ್ರಗಳಲ್ಲಿ ಬಹುಸಂಖ್ಯಾತರ ಜನಸಂಖ್ಯೆಯ ಪಾಲು ಹೆಚ್ಚುತ್ತಿರುವ ಪರಿಣಾಮ, ಅಲ್ಪಸಂಖ್ಯಾಕರಾದ ಹಿಂದೂಗಳು, ಸಿಕ್ಖರು ಮತ್ತು ಕ್ರೈಸ್ತರು ಆಶ್ರಯಕ್ಕಾಗಿ ಭಾರತಕ್ಕೆ ವಲಸೆ ಬರುತ್ತಿದ್ದಾರೆ.
ಅವರಿಗೆ ಭಾರತೀಯ ಪೌರತ್ವ ನೀಡುವುದು ಅತ್ಯಗತ್ಯವಾಗಿದೆ. 2019ರಲ್ಲಿ ಜಾರಿಗೆ ತಂದ ಸಿಎಎಗೆ ಎರಡು ತಿಂಗಳ ಹಿಂದೆಯಷ್ಟೇ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಚುನಾವಣೆಯ ನಂತರ ಬಿಜೆಪಿ ಗದ್ದುಗೆಯನ್ನು ಹಿಡಿದು ಸಿಎಎ ಅನ್ನು ಸಂಪೂರ್ಣವಾಗಿ ಜಾರಿಗೆ ತರಲಿದೆ ಎಂದು ತಿಳಿದು ಬಂದಿದೆ
ಆರ್ಥಿಕ ಸಲಹಾ ಮಂಡಳಿಯು ಪ್ರಧಾನಿಗೆ (ಇಎಸಿ-ಪಿಎಂ) ನೀಡಿರುವ ವರದಿ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಬಿಜೆಪಿ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ವಾಗ್ದಾಳಿ ನಡೆಸಿದ್ದು, ದೇಶವು ಕಾಂಗ್ರೆಸ್ ಆಡಳಿತಕ್ಕೆ ಸಿಕ್ಕಿಬಿಟ್ಟರೆ ಹಿಂದೂಗಳಿಗೆ ದೇಶವೇ ಇರುವುದಿಲ್ಲ ಎಂದಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, ‘1950 ಮತ್ತು 2015 ರ ನಡುವೆ ಹಿಂದೂಗಳ ಜನಸಂಖ್ಯೆಯು ಶೇ 7.8 ರಷ್ಟು ಕಡಿಮೆಯಾಗಿದ್ದು, ಮುಸ್ಲಿಂ ಜನಸಂಖ್ಯೆಯು ಶೇ 43 ರಷ್ಟು ಹೆಚ್ಚಾಗಿದೆ. ದಶಕಗಳ ಕಾಂಗ್ರೆಸ್ ಆಡಳಿತವು ನಮಗೆ ಮಾಡಿದ್ದು ಇದನ್ನೇ. ಕಾಂಗ್ರೆಸ್ಗೆ ದೇಶವನ್ನು ಬಿಟ್ಟರೆ, ಹಿಂದುಗಳಿಗೆ ದೇಶವೇ ಇಲ್ಲದಂತೆ ಆಗುತ್ತದೆ ಎಂದು ಹೇಳಿದ್ದಾರೆ.
ಈ ಅಧ್ಯಯನ ವರದಿ ಬಂದ ನಂತರ ರಾಷ್ಟ್ರೀಯ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಹಿಂದೂ ಜನಸಂಖ್ಯೆಯ ಇಳಿಕೆಗೆ ಕಾಂಗ್ರೆಸ್ ಹೊಣೆಯಾಗಿದ್ದು, ಪಕ್ಷದ ಮುಸ್ಲಿಂ ತುಷ್ಟೀಕರಣದ ರಾಜಕೀಯದಿಂದಾಗಿ ಮುಸ್ಲಿಂ ಜನಸಂಖ್ಯೆ ಏರಿಕೆಯಾಗಿದೆ ಎಂದು ದೂರಿದರು.
ಬಾಂಗ್ಲಾ ಮುಸ್ಲಿಮರು ರೋಹಿಂಗ್ಯ ಒಲಸಿಗರಿಂದ ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ ಇದಕ್ಕೆ ಕಾರಣ ಕಾಂಗ್ರೆಸ್ ಎಂದು ಬಿಜೆಪಿ ಆರೋಪಿಸುತ್ತಿದೆ.