
ಕುಂದಾಪುರ: ಕಂಟಪೂರ್ತಿ ಕುಡಿದು ಬಂದು ಹುಚ್ಚಾಟಮೆರಿದು ಕತ್ತಿಯಿಂದ ಪತ್ನಿಯ ಕುತ್ತಿಗೆಯನ್ನು ಕುಯ್ದ ವಿಕೃತಿ ಮೆರೆದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ನಡೆದಿದೆ.
ಪತ್ನಿ ಅನಿತಾ (38) ಅವರ ಮೇಲೆ ಪತಿ ಲಕ್ಷ್ಮಣ ಹಲ್ಲೆ ಮಾಡಿ ಕತ್ತಿಯಿಂದ ಕುತ್ತಿಗೆ ಕೊಯ್ದು ನೃತ್ಯ ಮಾಡಿ ವಿಕೃತಿ ಮೆರೆದಿದ್ದಾನೆ.
ಲಕ್ಷ್ಮಣ ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿದ್ದ ಪತ್ನಿಯ ಕುತ್ತಿಗೆ ಕುಯ್ದು ಮಾರಣಾಂತಿಕವಾಗಿ ಗಾಯಗೊಳಿಸಿದ್ದಾನೆ. ಮನೆಯ ಅಡುಗೆ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅನಿತಾಳನ್ನು ಮನೆಯಲ್ಲೇ ಬಿಟ್ಟು ಮನೆಯ ಬಾಗಿಲ ಚಿಲಕ ಹಾಕಿ ಹಾಲ್ ನಲ್ಲಿ ಕೈಯಲ್ಲಿ ಕತ್ತಿ ಹಿಡಿದು ನರ್ತನೆ ಮಾಡಿ ಅಟ್ಟಹಾಸ ಮೆರೆದಿದ್ದಾನೆ.
ಸ್ವಲ್ಪ ಸಮಯದ ನಂತರ ಅಕ್ಕ ಪಕ್ಕದ ಮನೆಯವರಿಗೆ ವಿಷಯ ತಿಳಿದು ಬಂದು ನೋಡಿದಾಗ ಬಾಗಿಲು ಹಾಕಿತ್ತು ಆದರೆ ಅಡುಗೆ ಮನೆಯಲ್ಲಿ ಅನಿತಾ ಅವರು ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ ಇರೋದನ್ನ ಕಂಡು ಬಾಗಿಲನ್ನು ಒಡೆದು ಅನಿತಾ ಅವರನ್ನು
ಗಂಭೀರವಾಗಿ ಗಾಯಗೊಂಡು ನೆರಳಾಡುತ್ತಿರುವ ಅನಿತಾ ಅವರನ್ನು ಸ್ಥಳೀಯರು ಹಾಗೂ ಸಾರ್ವಜನಿಕರು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಅನಿತಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬಸ್ರೂರು ಕಾಶಿ ಮಠ, ರೆಸಿಡೆನ್ಶಿಯಲ್ ಬ್ಲಾಕ್ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸೊರಬ ತಾಲೂಕು ಮೂಲದ ದಂಪತಿ, ಕಾಶಿ ಮಠದ ತೋಟ ನೋಡಿಕೊಳ್ಳಲು ವಾಸವಾಗಿದ್ದರು.
ತೋಟ ಹಾಗೂ ಕೃಷಿ ಚಟುವಟಿಕೆಗಳನ್ನು ನೋಡಿಕೊಳ್ಳಲು ಕಳೆದ ನಾಲ್ಕು ತಿಂಗಳ ಹಿಂದೆ ಅಷ್ಟೇ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿಗೆ ಬಂದಿದ್ದರು.
ಸ್ಥಳೀಯರು ಬಂದು ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಇತ್ತ ಮೈಮೇಲೆ ಪ್ರಜ್ಞೆ ಇಲ್ಲದ ರೀತಿ ಕೈಯಲ್ಲಿ ಕತ್ತಿ ಹಿಡಿದು ಲಕ್ಷ್ಮಣ ನೃತ್ಯ ಮಾಡುತ್ತಿದ್ದ ಇದನ್ನು ನೋಡಿ ಸ್ಥಳೀಯರು ಭಯಭೀತರಾಗಿ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ.
ನಂತರ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ಬಂದು ಸುಮಾರು ಒಂದುವರೆ ಗಂಟೆಯ ತನಕ ಒದ್ದಾಟ ನಡೆಸಿ ದುಷ್ಟ ಲಕ್ಷ್ಮಣನನ್ನು ಸೆರೆಹಿಡಿದಿದ್ದಾರೆ
ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಇಂದು ಆಶಾಡ ಅಮಾವಾಸ್ಯೆ ಆಗಿರುವುದರಿಂದ ಈ ವ್ಯಕ್ತಿಯ ವರ್ತನೆ ನೋಡಿ ಸ್ಥಳೀಯರು ಭಯಭೀತರಾಗಿದ್ದಾರೆ