
ಪ್ರೀತಿ ನಿರಾಕರಿಸಿದ್ದಕ್ಕೆ ಫಯಾಜ್ ನ ವಿಕ್ರತಿ…!
ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಹುಬ್ಬಳ್ಳಿ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಹೀರೆಮಠ್ ಅವರ ಪುತ್ರಿ ನೇಹಾ ಹೀರೆಮಠ್ ಎಂಬಾಕೆಯನ್ನು ಫಯಾಜ್ ಎಂಬಾತ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಿನ್ನೆ ನಡೆದಿದೆ…!
ನೇಹಾ ಹೀರೆಮಠ್ ಪ್ರೀತಿ ನಿರಾಕರಿಸಿದಳು ಎನ್ನುವ ಕಾರಣಕ್ಕೆ ಫಯಾಜ್ ಕೊಲೆ ಮಾಡುವ ಹೇಯ ಕೃತ್ಯಕ್ಕೆ ಕೈ ಹಾಕುತ್ತಾನೆ ಎನ್ನುವುದು ಆತನ ಮಾನಸಿಕ ಸ್ಥಿತಿಯನ್ನು ಬಿಂಬಿಸುತ್ತದೆ…!!
ತಾನು ಪ್ರೀತಿ ಮಾಡುತ್ತಿದ್ದೇನೆ ಎನ್ನುವ ಏಕೈಕ ಕಾರಣಕ್ಕೆ ನೇಹಾ ಸಹ ನನ್ನನ್ನು ಪ್ರೀತಿಸಬೇಕು ಎನ್ನುವುದು ಫಯಾಜ್ ನ ಹಠವಾಗಿತ್ತಂತೆ…!
ನಿಜವಾಗಿಯೂ ನೇಹಾಳನ್ನು ಫಯಾಜ್ ಪ್ರೀತಿಸಿದ್ದೇ ಆಗಿದ್ದರೆ ಅವನು ನೇಹಾಳಾ ಕೊಲೆ ಮಾಡುತಿದ್ದನೇ…??
ಇದು ಪ್ರೀತಿಯಲ್ಲ ಬದಲಿಗೆ ಪ್ರೀತಿಯ ಜಾಲ ಬೀಸಿ ಮೋಸ ಮಾಡುವುದು ಫಯಾಜ್ ನ ಉದ್ದೇಶವಾಗಿತ್ತು ಅನ್ನುವುದು ಸಾಕ್ಷಿಕರಿಸುತ್ತದೆ…!
ಹುಬ್ಬಳ್ಳಿಯಲ್ಲಿ ನಿನ್ನೆ ನಡೆದ ಘಟನೆ ಸಮಾಜದ ಎಲ್ಲಾ ವರ್ಗಗಳ ಜನರಲ್ಲಿ ಭಯ ಹುಟ್ಟಿಸಿದ್ದು ಅಷ್ಟೇ ಅಲ್ಲದೆ ತಮ್ಮ ಹೆಣ್ಣು ಮಕ್ಕಳು ಎಷ್ಟರ ಮಟ್ಟಿಗೆ ಸೇಫ್ ಎಂದು ಪೋಷಕರು ವಿಚಾರ ಮಾಡುವಂತಾಗಿದೆ…!!
ಪ್ರೀತಿ ನಿರಾಕರಿಸಿದ್ದಕ್ಕೆ ನೇಹಾಳನ್ನು ಬರ್ಬರವಾಗಿ ಫಯಾಜ್ ಹತ್ಯೆ ಮಾಡಿದನ್ನು ಗಮನಿಸಿದರೆ ಇದು ಲವ್ ಜಿಹಾದ್ ನ ಮತ್ತೊಂದು ಮುಖವೇ ಆಗಿದೆ ಎಂದು ಇಂದು ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಳಿ ಬಂದ ಕೂಗು ನಿಜಕ್ಕೂ ಹೌದೆನಿಸುತಿತ್ತು…!
ನೇಹಾ ಹತ್ಯೆ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ
ಹುಬ್ಬಳ್ಳಿಯಲ್ಲಿ ನಿನ್ನೆ ನಡೆದ ನೇಹಾ ಹತ್ಯೆಯನ್ನು ಖಂಡಿಸಿ ರಾಜ್ಯದಾದ್ಯಂತ ಇಂದು ಪ್ರತಿಭಟನೆಗಳು ನಡೆದಿವೆ, ಆರೋಪಿಯನ್ನು ಗಲ್ಲಿಗೆ ಏರಿಸಬೇಕು ಎಂಬ ಕೂಗು ಎಲ್ಲೆಡೆ ಕೂಗಿ ಬಂದಿದೆ…!
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಹಿಂದೂ ಸಂಘಟನೆಗಳು ಇಂದು ರಾಜ್ಯಾದ್ಯಂತ ಇಂದು ಪ್ರತಿಭಟನೆ ನಡೆಸಿವೆ…!!
ಹಂತಕನನ್ನು ಎನ್ ಕೌಂಟರ್ ಮಾಡಿ – ಮುತಾಲಿಕ್
ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಸಿಎಂಗೆ ನಿಜವಾಗಿಯೂ ಕಳಕಳಿ ಅನ್ನುವುದು ಇದ್ದರೆ, ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿಸಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ…!
ಕಿಮ್ಸ್ ಶವಾಗಾರಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲ ಎನ್ನುವಂತಾಗಿದೆ. ಐಸಿಸ್ ಮಾದರಿಯಲ್ಲಿ ಕುತ್ತಿಗೆಗೆ ಚಾಕು ಹಾಕಿದ್ದಾನೆ. ಚಾಕು ಹಾಕಲು ಎಲ್ಲಿಯೋ ತರಬೇತಿ ಪಡೆದಿದ್ದಾನೆ. ಕಾಂಗ್ರೆಸ್ ಬೆಳೆಸಿದ ವಿಷ ಬೀಜವಿದು ಎಂದು ಆರೋಪಿಸಿದರು…!!
ಲವ್ ಜಿಹಾದ್ ಎಂದ ಬಿಜೆಪಿ, ವೈಯುಕ್ತಿಕ ಕಾರಣ ಎಂದ ಸರ್ಕಾರ
ವಿಪಕ್ಷ ಬಿಜೆಪಿ ಇದನ್ನು ಲವ್ ಜಿಹಾದ್ ಎಂದು ಕರೆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿ ದೂರವಾಗಲು ಯತ್ನಿಸಿದಾಗ ಯುವಕ ಈ ಕೃತ್ಯ ಎಸಗಿದ್ದಾನೆ ಎಂಬ ಮಾಹಿತಿ ಇದೆ, ಇಂತಹ ಘಟನೆಗಳು ಆಕಸ್ಮಿಕವಾಗಿ ಸಂಭವಿಸುತ್ತವೆ ಎಂದು ಹೇಳಿಕೆ ನೀಡಿದ್ದಾರೆ, ವೈಯಕ್ತಿಕ ಕಾರಣಕ್ಕೆ ನೇಹಾ ಕೊಲೆಯಾಗಿದ್ದು, ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ…!
ನೇಹಾ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ ಕೇಂದ್ರ ಸಚಿವ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸೇರಿದಂತೆ ಹಲವು ಗಣ್ಯರು ಮೃತ ಯುವತಿಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು…!
ಆರೋಪಿಗೆ ಕಠಿಣ ಶಿಕ್ಷೆಗೆ ಒಳಪಡಿಸಿ – ನೇಹಾಳಾ ತಂದೆ ನಿರಂಜನ್ ಹೀರೆಮಠ್ ಆಗ್ರಹ
ಸರ್ಕಾರ ಹಾಗೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು, ನನ್ನ ಮಗಳಿಗೆ ಆದ ಅನ್ಯಾಯ ಬೇರೆ ಹೆಣ್ಣು ಮಕ್ಕಳಿಗೆ ಆಗಬಾರದು ಎಂದು ಯುವತಿ ತಂದೆ ನಿರಂಜನ ಹಿರೇಮಠ ಆಗ್ರಹಿಸಿದ್ದಾರೆ…!