
ಹೈದರಾಬಾದ್ನಲ್ಲಿ ಮೊದಲ ಬಾರಿಗೆ ಖಾತೆ ತೆರೆಯಲು ಯೋಜನೆ ರೂಪಿಸಿರುವ ಬಿಜೆಪಿ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಎದುರು ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ…!
ಕಳೆದ 40 ವರ್ಷಗಳಿಂದ ಓವೈಸಿ ಮನೆತನದ ಭದ್ರಕೋಟೆಯಾಗಿರುವ, ಶೇಕಡಾ 59 ರಷ್ಟು ಮುಸ್ಲಿಂ ಸಮುದಾಯದ ಜನರಿರುವ ಹೈದರಾಬಾದ್ನಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಮಹಿಳಾ ಅಭ್ಯರ್ಥಿ ಮಾಧವಿ ಲತಾ ಅವರನ್ನು ಕಣಕ್ಕಿಳಿಸಿದೆ…!!
ಹೈದರಾಬಾದ್ನಲ್ಲಿ ಓವೈಸಿ ಎದುರು ಮಹಿಳೆಯನ್ನು ಕಣಕ್ಕಿಳಿಸಿರುವ ಬಿಜೆಪಿ…! ಯಾರು ಈ ಮಾಧವಿ ಲತಾ…?
ಆರ್ಎಸ್ಎಸ್ನ ಕಟ್ಟಾ ಕಾರ್ಯಕರ್ತೆ, ಹೋರಾಟಗಾರ್ತಿ, ಭರತನಾಟ್ಯ ಕಲಾವಿದೆ ಮಾಧವಿ ಲತಾ ಅವರನ್ನು ಭಾರತೀಯ ಜನತಾ ಪಾರ್ಟಿ ಚುನಾವಣಾ ಅಖಾಡಕ್ಕೆ ಇಳಿಸಿದೆ…!
ನಿಜಾಮ್ ಕಾಲೇಜಿನಲ್ಲಿ ಸಾರ್ವಜನಿಕ ಆಡಳಿತದಲ್ಲಿ ಪದವಿ ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಧವಿ ಲತಾ ಅವರು ಪಡೆದಿದ್ದಾರೆ…!!
2019 ರಲ್ಲಿ ತ್ರಿವಳಿ ತಲಾಖ್ ವಿರುದ್ಧ ಹಾಗೂ ಮುಸ್ಲಿಂ ಮಹಿಳೆಯರ ಹಕ್ಕುಗಳ ಪರವಾಗಿ ದೊಡ್ಡ ಮಟ್ಟದಲ್ಲಿ ಮಾಧವಿ ಲತಾ ಧ್ವನಿ ಎತ್ತಿದ್ದರು…!
ಅಲ್ಪ ಸಂಖ್ಯಾತರ ಮತಗಳೇ ಹೆಚ್ಚಿರುವ ಹೈದರಾಬಾದ್ ನಲ್ಲಿ ಓವೈಸಿಯನ್ನು ಸೋಲಿಸಬಲ್ಲರೇ ಮಾಧವಿ ಲತಾ…?
ಹೈದರಾಬಾದ್ ಕ್ಷೇತ್ರವು 1984 ರಿಂದ AIMIM ಹಿಡಿತದಲ್ಲಿದೆ. ಮೊದಲು ಸಲಾವುದ್ದೀನ್ ಓವೈಸಿ ಮತ್ತು ನಂತರ ಅವರ ಮಗ ಅಸಾದುದ್ದೀನ್ ಓವೈಸಿ ಇಲ್ಲಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ. ನಾಲ್ಕು ಬಾರಿ ಸಂಸದರಾಗಿದ್ದ ಅಸಾದುದ್ದೀನ್ ಓವೈಸಿ ಅವರು 2019 ರಲ್ಲಿ ಬಿಜೆಪಿಯ ಭಗವಂತ್ ರಾವ್ ಅವರನ್ನು 2.5 ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು…!
ಶೇಕಡಾ 59 ರಷ್ಟು ಮುಸ್ಲಿಂ ಸಮುದಾಯದ ಮತಗಳು ಇರುವ ಕ್ಷೇತ್ರದಲ್ಲಿ ಬಿಜೆಪಿ ಮಾಡಿರುವ ಈ ಪ್ರಯೋಗ ಯಶಸ್ವಿಯಾಗುತ್ತಾ ಕಾದುನೋಡಬೇಕಾಗಿದೆ…!!