
2019ರ ಬಾಲಾಕೋಟ್ ದಾಳಿಯ ಬಗ್ಗೆ ಜಗತ್ತಿಗೆ ತಿಳಿಸುವ ಮುನ್ನ ಪಾಕಿಸ್ತಾನಕ್ಕೆ ತಾನು ಮಾಹಿತಿ ನೀಡಿದ್ದಾಗಿ ಇಂದು ಬಾಗಲಕೋಟೆಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು…!
ಪಾಕಿಸ್ತಾನದ ಕಡೆಯವರನ್ನು ಸಂಪರ್ಕಿಸುವವರೆಗೂ ಮಾಧ್ಯಮಗಳಿಗೆ ಮಾಹಿತಿ ನೀಡುವುದನ್ನು ಮುಂದಕ್ಕೆ ಹಾಕಲು ಸೇನಾಪಡೆಗಳಿಗೆ ನಿರ್ದೇಶನ ನೀಡಿದ್ದೆ ಎಂದರು…!!
ಮೋದಿಗೆ ಬಚ್ಚಿಟ್ಟುಕೊಳ್ಳುವುದು, ಹಿಂಬದಿಯಿಂದ ದಾಳಿ ಮಾಡುವುದರಲ್ಲಿ ನಂಬಿಕೆ ಇಲ್ಲ. ಮೋದಿ ಬಹಿರಂಗವಾಗಿ ಹೋರಾಡುತ್ತಾನೆ. ಎದುರಾಳಿಯ ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಮತ್ತು ಸತ್ಯವನ್ನ ಹೇಳುವುದು ನವಭಾರತದ ನೀತಿ ಎಂದು ಬಾಗಲಕೋಟೆಯ ನವನಗರದಲ್ಲಿ ಮೋದಿ ತಿಳಿಸಿದರು…!
2019ರ ಫೆಬ್ರುವರಿ 14ರಂದು ಕಾಶ್ಮೀರದ ಪುಲ್ವಾಮ ಬಳಿ ಸಿಆರ್ಪಿಎಫ್ ಯೋಧರೂ ಹೋಗುತ್ತಿದ್ದ ಟ್ರಕ್ಗಳ ಮೇಲೆ ಬಾಂಬ್ ದಾಳಿ ಆಗಿತ್ತು. ಆ ದುರ್ಘಟನೆಯಲ್ಲಿ 40 ಮಂದಿ ವೀರ ಯೋಧರು ಹುತಾತ್ಮರಾಗಿದ್ದರು . ಆ ಘಟನೆಗೆ ಪ್ರತೀಕಾರವಾಗಿ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಲು ಭಾರತೀಯ ಸೇನೆ ಯೋಜಿಸಿತ್ತು…!
ಫೆಬ್ರುವರಿ 26ರಂದು ಪಾಕಿಸ್ತಾನದ ಬಾಲಾಕೋಟ್ನಲ್ಲಿದ್ದ ಜೈಷೆ ಮೊಹಮ್ಮದ್ ಸಂಘಟನೆಯ ಉಗ್ರ ತರಬೇತಿ ಕೇಂದ್ರವನ್ನು ಗುರಿಯಾಗಿಸಿ ಭಾರತದ ಫೈಟರ್ ಜೆಟ್ಗಳು ಪಾಕಿಸ್ತಾನದ ರೇಡರ್ ಸಿಸ್ಟಮ್ಗೆ ಸೆಡ್ಡು ಹೊಡೆದು ಕೆಲವೇ ಕ್ಷಣಗಳಲ್ಲಿ ಉಗ್ರ ನೆಲೆಯನ್ನ ನಾಶ ಮಾಡಿ ಬಂದಿತ್ತು…!!
ಈ ಅನಿರೀಕ್ಷಿತ ದಾಳಿಯ ಗೆ ಪಾಕಿಸ್ತಾನ ಪ್ರತಿ ಉತ್ತರ ಕೊಡುವ ಅವಕಾಶವೇ ಸಿಗಲಿಲ್ಲ .
ಅದಾದ ಬಳಿಕ ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧ ವಿಮಾನಗಳ ಚಕಮಕಿ ನಡೆಯಿತು. ಈ ವೇಳೆ ಭಾರತದ ಪೈಲಟ್ ಅಭಿನಂದನ್ ಆಕಸ್ಮಿಕವಾಗಿ ಪಾಕಿಸ್ತಾನದ ಗಡಿಭಾಗದಲ್ಲಿ ಇಳಿದು ಶತ್ರುಗಳ ಸೆರೆ ಸಿಕ್ಕರು. ಕೆಲ ದಿನಗಳ ಬಳಿಕ ಅಭಿನಂದನ್ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಿ ಮರಳಿಸಿತು…!