
ಮಹಾರಾಷ್ಟ್ರದ ಪುಣೆಯಲ್ಲಿ ಆಂದೋಲನದ ಮೂಲಕ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ ಹಿಂದೂ ಜನಜಾಗೃತಿ ಸಮಿತಿ…!
ಭಾರತವು ಸಾಧು ಸಂತರ ಪುಣ್ಯ ನೆಲವಾಗಿದೆ, ಸಂತರು ಜಗತ್ತಿನಾದ್ಯಂತ ಸಂಚಾರ ನಡೆಸಿ ಭಾರತೀಯ ಸಂಸ್ಕೃತಿ, ಧರ್ಮ, ಜ್ಞಾನ, ಕಲೆ, ಸದಾಚಾರವನ್ನು ಕಲಿಸಿ ಸಮಾಜದ ಜನರು ಆದರ್ಶದ ಜೀವನವನ್ನು ನಡೆಸಲು ಪ್ರೋತ್ಸಾಹಿಸುತಿದ್ದಾರೆ, ಹೀಗಿರುವಾಗ ನಟ ಅಮೀರ್ ಖಾನ್ ಹಾಗೂ ಅವರ ಮಗ ಜುನೈದ್ ಖಾನ್ ಜೂನ್ 14ರಂದು ಬಿಡುಗಡೆ ಆಗಲಿರುವ
“ಮಹಾರಾಜ್” ಚಲನಚಿತ್ರದಲ್ಲಿ ಸಾಧು ಸಂತರನ್ನು ದುರಾಚಾರಿಗಳು, ಗೂಂಡಾಗಳು ಎಂದು ಬಿಂಬಿಸಿ ಸಂತರ ತೇಜೋವಧೆ ಮಾಡಲಾಗಿದ್ದು, ಆದ್ದರಿಂದ ಈ ಚಲನ ಚಿತ್ರದ ಮೇಲೆ ತಕ್ಷಣ ನಿಷೇಧ ಹೇರಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಪುಣೆಯಲ್ಲಿ ಆಂದೋಲನದ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ…!
ಅಮೀರ್ ಖಾನ್ ಮತ್ತು ಜುನೈದ್ ಖಾನ್ ಮದರಸಾಗಳಲ್ಲಿ ಮೌಲ್ವಿಗಳಿಂದ ಹುಡುಗಿಯರ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಚಲನ ಚಿತ್ರವನ್ನು ನಿರ್ಮಿಸುವ ಧೈರ್ಯ ತೋರಿಸುತ್ತಾರೆಯೇ…?, ಸಣ್ಣ ಮಕ್ಕಳ ಬುದ್ಧಿ ಭ್ರಮಣೆ ಮಾಡಿ ಜಿಹಾದಿ ಕ್ರತ್ಯಕ್ಕಾಗಿ ಪ್ರಚೋದನೆ ಮಾಡಿ ಅವರಿಂದ ಜಿಹಾದಿ ಕ್ರತ್ಯಗಳನ್ನು ಮಾಡಿಸಿಕೊಳ್ಳಲಾಗುತ್ತದೆ, ಈ ಬಗ್ಗೆ ಬಾಲಿವುಡ್ ಚಲನ ಚಿತ್ರವನ್ನು ನಿರ್ಮಿಸುವುದೇ…? ಎಂದು ಹಿಂದೂ ಜನಜಾಗೃತಿ ಸಮಿತಿ ಪ್ರಶ್ನಿಸಿದೆ…!!
ಅಂತಹ ವಿಷಯಗಳ ಮೇಲೆ ಚಲನಚಿತ್ರಗಳನ್ನು ಮಾಡಲು ಧೈರ್ಯವಿಲ್ಲದ ಬಾಲಿವುಡ್, ಹಿಂದೂ ಸಂತರು ಹಾಗೂ ಧಾರ್ಮಿಕ ಆಚರಣೆಗಳನ್ನು ಸುಲಭವಾಗಿ ಗುರಿಯಾಗುತ್ತದೆ, ಹಿಂದೂಗಳು ಸಹಿಷ್ಣುಗಳಾಗಿ ರುವುದರಿಂದ ‘ಸೆಕ್ಯುಲರಿಸಂ’ ಹೆಸರಿನಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗುತ್ತಿದೆ ಇದನ್ನು ಸಹಿಸಲು ಸಾಧ್ಯವಿಲ್ಲ, ಸರ್ಕಾರ ಕೂಡಲೇ ಈ ಚಲನಚಿತ್ರವನ್ನು ನಿಷೇಧಿಸಬೇಕು, ಅಲ್ಲದೆ ಧರ್ಮ, ದೇವತೆ, ಸಂತರ ಅವಹೇಳನ ತಡೆಯಲು ದೇಶದಾದ್ಯಂತ ‘ಧರ್ಮ ನಿಂದನೆ ತಡೆ ಕಾನೂನು’ ಜಾರಿ ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ…!