
ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಪೂಜೆಯ ವಸ್ತುವಾಗಿ ಬಳಸುವ ಕರ್ಪೂರವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಮ್ಮಲ್ಲಿ ಮಂಗಳಾರತಿ ದೇವರ ಪೂಜೆಯಲ್ಲಿ ಕರ್ಪೂರವನ್ನು ಬಳಸುವುದರಿಂದ ಇಷ್ಟಾರ್ಥಗಳು ಈಡೇರುತ್ತವೆ . ಮತ್ತು ಅದರ ಸುಗಂಧವು ಮನೆಯನ್ನು ಶುದ್ಧಗೊಳಿಸುತ್ತದೆ. ಇದರೊಂದಿಗೆ, ಮನೆಯ ನಕಾರಾತ್ಮಕ ಶಕ್ತಿಯು ಕೊನೆಗೊಳ್ಳುತ್ತದೆ. ಅದಕ್ಕಾಗಿಯೇ ಹಿಂದೂ ಧರ್ಮದಲ್ಲಿ ಕರ್ಪೂರವನ್ನು ಬಳಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರೊಂದಿಗೆ, ಪ್ರತಿ ಪೂಜೆಯ ಕೊನೆಯಲ್ಲಿ ಕರ್ಪೂರದ ಆರತಿಯನ್ನು ಖಂಡಿತವಾಗಿಯೂ ಮಾಡಲಾಗುತ್ತದೆ. ಇದರೊಂದಿಗೆ ಕರ್ಪೂರವನ್ನು ಅನೇಕ ಧಾರ್ಮಿಕ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಏಕೆಂದರೆ ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಕರ್ಪೂರವನ್ನು ಕೇವಲ ಪೂಜೆಯಲ್ಲಿ ಮಾತ್ರವಲ್ಲದೇ ಹಲವಾರು ಔಷಧಿಗಳಿಗೆ ಕೂಡ ಬಳಕೆ ಮಾಡಲಾಗುತ್ತದೆ. ಇದನ್ನು ವೆಪೋರಬ್, ಮಲಾಮ್ ಮತ್ತು ಕೆಲವೊಂದು ತೈಲಗಳಲ್ಲಿ ಸಹ ಬಳಕೆ ಮಾಡಲಾಗುತ್ತದೆ.
ಕರ್ಪೂರ’ ದೀಪವನ್ನು ಹಚ್ಚುವುದರಿಂದ ಅಶ್ವಮೇಧಯಾಗದ ಪುಣ್ಯವು ಸಿಗುತ್ತದೆ.
ಅಶ್ವಮೇಧಯಾಗದ ವೈಶಿಷ್ಟ್ಯ
ಅಶ್ವಮೇಧವು ಎಲ್ಲಕ್ಕಿಂತ ದೊಡ್ಡ ಯಾಗವಾಗಿದೆ. ಅಶ್ವವು (ಕುದುರೆ) ಶಕ್ತಿ ಮತ್ತು ವೇಗದ ಪ್ರತೀಕವಾಗಿದೆ. ‘ಪ್ರಜಾಪತಿಯ ಎಲ್ಲ ಶಕ್ತಿಯು ಅಶ್ವದಲ್ಲಿ ಒಟ್ಟುಗೂಡಿರುತ್ತದೆ’ ಎಂದು ಹೇಳುತ್ತಾರೆ. ಅಶ್ವಮೇಧಯಾಗದಿಂದ ಉತ್ಪನ್ನವಾಗುವ ಶಕ್ತಿಯನ್ನು ವಿರಾಟಪುರುಷರೂಪಿ ಶಿವರೂಪಿ ಈಶ ತತ್ತ್ವದೊಂದಿಗೆ ತುಲನೆ ಮಾಡಲಾಗುತ್ತದೆ.
ಕರ್ಪೂರ ರೀತಿಗಳು:
ಸಾಮಾನ್ಯವಾಗಿ ಆರತಿಗೆ ಬಳಸುವ ಕರ್ಪೂರವನ್ನು ಸ್ಪುರಣಕ್ಕೆ ಬಳಸುತ್ತಾರೆ. ಬಿಳಿ ಕರ್ಪೂರ ಮತ್ತು ಹಸಿರು ಕರ್ಪೂರದ ಎರಡು ವಿಧಗಳು ಜನಪ್ರಿಯವಾಗಿವೆ. ಆದರೆ, ಕರ್ಪೂರದಲ್ಲಿ ಹದಿನೈದು ವಿಧಗಳಿವೆ (ಜಾತಿಗಳು), ಅವುಗಳೆಂದರೆ:
ಘನ ಸಾರಂ,ಭೀಮಸೇನಂ, ಈಶಾವಾಸಂ,ಉದಯ ಭಾಸ್ಕರಂ,ಕಮ್ಮ ಕರ್ಪೂರ, ಘಟಿಕಂ,ತುರು ದಹಂ, ತುಷಾರಂ,ಹಿಮ ರಸಂ,ಹರತಿ,ಸುದ್ಧ
ಇವೆಲ್ಲವೂ ಕಾಪುರಂ, ಕಪ್ಪಾರಂ ಇತ್ಯಾದಿ ಸಮಾನಾರ್ಥಕ ಪದಗಳಾಗಿಯೂ ಬಳಕೆಯಲ್ಲಿವೆ.
ಕರ್ಪೂರದ ಮರ

ಕರ್ಪೂರದ ವೈಜ್ಞಾನಿಕ ಮಹತ್ವ :
ಕಪರ್ ವಾಸನೆಯಿಂದ ಬ್ಯಾಕ್ಟಿರಿಯಾ, ವೈರಸ್, ಸಣ್ಣ ಕೀಟಗಳು ನಾಶವಾಗುತ್ತವೆ ಎಂದು ವೈಜ್ಞಾನಿಕ ಸಂಶೋಧನೆಯಿಂದ ಸಾಬೀತಾಗಿದೆ. ಹೀಗಾಗಿ ಪರಿಸರ ಸ್ವಚ್ಛವಾಗಿ ಉಳಿದು ರೋಗಗಳು ದೂರವಾಗುತ್ತವೆ.
ಆರೋಗ್ಯ ಪ್ರಯೋಜನಗಳು
ಪಚ್ಚೆ ಕರ್ಪೂರ ಹಾಗೂ ಬೆಲ್ಲವನ್ನು ಸ್ವಲ್ಪ ಮಿಶ್ರಣ ಮಾಡಿ ತೆಗೆದುಕೊಂಡರೆ ಅಸ್ತಮಾದಿಂದ ಪರಿಹಾರ ಕಾಣಬಹುದು.
ಬಿಸಿ ನೀರಿನಲ್ಲಿ ಒಂದಷ್ಟು ಬೇವಿನ ಎಲೆಗಳು ಹಾಗೂ ಕರ್ಪೂರವನ್ನು ಹಾಕಿ ನಿಮ್ಮ ಮನೆಯಲ್ಲಿ ಸಿಂಪಡಿಸಿದರೆ ನೊಣಗಳು, ಕ್ರಿಮಿ ಕೀಟಗಳು ಹಾಗೂ ಸೊಳ್ಳೆಗಳಿಂದ ಮುಕ್ತಿ ಹೊಂದಬಹುದು. ಹಾಗೆಯೇ ನಿಮ್ಮ ಮನೆಯು ಸುಗಂಧ ಭರಿತವಾಗಿ ಕೂಡಿರುತ್ತದೆ.
ಉಗುರಿನ ಸಮಸ್ಯೆಗಳಿಗೆ ಪರಿಹಾರ
ಉಗುರಿನಲ್ಲಿ ಫಂಗಸ್ ಸಮಸ್ಯೆಯಿದ್ದರೆ ಕರ್ಪೂರದಿಂದ ಪರಿಹಾರ ಸಿಗುತ್ತದೆ. ಸಮಸ್ಯೆಯಿರುವ ಸ್ಥಳದಲ್ಲಿ ಕರ್ಪೂರವನ್ನು ಹಚ್ಚಿಕೊಂಡರೆ ಬಹು ಬೇಗನೆ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
ಕೂದಲು ಸಮಸ್ಯೆಗೆ ಪರಿಹಾರ
ಕೂದಲು ಉದುರುವಿಕೆ ಸಮಸ್ಯೆ ಪ್ರತಿಯೊಬ್ಬರನ್ನು ಕಾಡುತ್ತದೆ. ಅದಕ್ಕೆ ಹಲವಾರು ಕಾರಣಗಳಿರುತ್ತದೆ. ಆದರೆ ಕರ್ಪೂರದ ಎಣ್ಣೆ ಇದಕ್ಕೆ ಉತ್ತಮ ಪರಿಹಾರ. ಕರ್ಪೂರದ ಎಣ್ಣೆಯನ್ನು ನಿಯಮಿತವಾಗಿ ತಲೆಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆಯಾಗುತ್ತದೆ.
ಹಾಗೆ ಜ್ವರಕ್ಕೂ ಕೂಡ ಕರ್ಪೂರ ರಾಮಬಾಣ ಜೋರಾಗಿ ಜ್ವರ ಬಂದರೆ ತುಳಸಿ ಎಲೆಗಳನ್ನು ಅರೆದು ಪಚ್ಚ ಕರ್ಪೂರದ ಜೊತೆ ಸೇರಿಸಿ ತಲೆಗೆ ಹಚ್ಚಿದರೆ ಜ್ವರ ಕಮ್ಮಿಯಾಗುತ್ತದೆ.
ವಿಶೇಷ ಸೂಚನೆ:
ಔಷಧಿಗಳಿಗೆ ಉಪಯೋಗಿಸುವ ಕರ್ಪೂರ ಬೇರೆ.
ಪೂಜೆಗಳಿಗೆ ಉಪಯೋಗಿಸುವ ಕರ್ಪೂರ ಬೇರೆ.
ಪೂಜೆಗೆ ಉಪಯೋಗಿಸುವ ಅಂಗಡಿಯಲ್ಲಿ ಸಿಗುವ ಕರ್ಪೂರವನ್ನು ಔಷಧಿಗಳಿಗೆ ಉಪಯೋಗಿಸಬೇಡಿ.
ಅಂಗಡಿಯಲ್ಲಿ ಸಿಗುವ ಪೂಜೆಗೆ ಉಪಯೋಗಿಸುವ ಕರ್ಪೂರದಲ್ಲಿ ರಾಸಾಯನಿಕ ಬೆರೆಸಿರುತ್ತಾರೆ ಇದನ್ನು ಔಷಧಿಗಳಿಗೆ ಉಪಯೋಗಿಸಿದರೆ ಸಮಸ್ಯೆಗಳು ಆಗಬಹುದು.
ಔಷಧಿಗೆ ಉಪಯೋಗಿಸುವ ಕರ್ಪೂರ ಪಚ್ಚ ಕರ್ಪೂರ