
ಸೂಡಾನ್ – ಅಂತರ್ಯುದ್ಧ ಪೀಡಿತ ಸೂಡಾನ್ ದೇಶದಲ್ಲಿ ಹೃದಯವಿದ್ರಾವಕ ಘಟನೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ…!
ಸೂಡಾನ್ ದೇಶದ ಓಮ್ದುರ್ಮನ್ ಎಂಬ ನಗರದಲ್ಲಿ ಮಹಿಳೆಯರು ಬದುಕಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ…!!
ಹೊಟ್ಟೆ ತುಂಬಿಸಿಕೊಳ್ಳಲು ಸೈನಿಕರ ಜೊತೆ ಮಲಗುವ ಸ್ಥಿತಿ ಇದೆ…!
ಹೊಟ್ಟೆ ಹಸಿವು, ಬಾಯಾರಿಕೆಯಾದ್ರೂ ಸೈನಿಕರ ಜೊತೆ ಲೈಂಗಿಕ ಕ್ರಿಯೆ ನಡೆಸಬೇಕು…!!
ಬಳಿಕವಷ್ಟೇ ಮಹಿಳೆಯರಿಗೆ ಆಹಾರ, ನೀರು ಸೇರಿದಂತೆ ಗ್ರಹಬಳಕೆ ಅಗತ್ಯ ಸಾಮಗ್ರಿಗಳನ್ನು ಕೊಡಲಾಗುತ್ತಿದೆ…!
ಸೂಡಾನ್ ದೇಶದ ಸೈನಿಕರು ಸಂಭೋಗದ ನಂತರವೇ ಆಹಾರ ಮತ್ತು ನೀರನ್ನು ನೀಡುವುದಾಗಿ ತಾಕೀತು ಮಾಡುತಿದ್ದಾರೆ ಎಂದು ಅಲ್ಲಿನ ಮಹಿಳೆಯರು ಆರೋಪ ಮಾಡಿದ್ದಾರೆ…!!
ಊಟ, ನೀರು ಬಯಸುವ ಮಹಿಳೆಯರು ಮೊದಲು ಸರತಿ ಸಾಲಿನಲ್ಲಿ ನಿಂತು, ಸೈನಿಕರ ಜೊತೆ ಶಾರೀರಿಕ ಸಂಬಂಧವನ್ನು ಬೆಳೆಸಬೇಕು, ಸೂಡಾನ್ ಅಂತರ್ಯುದ್ಧ ಆ ದೇಶದ ಮಹಿಳೆಯರನ್ನು ಈ ಭಯಾನಕ ದುಸ್ಥಿತಿಗೆ ತಳ್ಳಿದೆ, ಅಲ್ಲಿನ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ಜನರು ಒಂದು ಹೊತ್ತಿನ ಊಟ ಮಾಡಲು ಸಹ ಪರದಾಡುವಂತಾಗಿದೆ…!
ವೃದ್ಧ ಪೋಷಕರು ಮತ್ತು ಪುಟ್ಟ ಮಕ್ಕಳನ್ನು ಪೋಷಿಸಲು ಆಹಾರ ಅನಿವಾರ್ಯ…!!
ಸೈನಿಕರೊಂದಿಗೆ ಲೈಂಗಿಕ ಕ್ರಿಯೆಯನ್ನು ಹೊರತುಪಡಿಸಿ ಬೇರೆ ದಾರಿಯಿಲ್ಲ ಎಂದು ಅನೇಕ ಮಹಿಳೆಯರು ತಮ್ಮ ಅಸಹಾಯಕತೆಯನ್ನು ಹೇಳಿಕೊಂಡಿದ್ದಾರೆ…!
ಸೈನಿಕರ ಈ ಕ್ರೌರ್ಯ ತಾಳಲಾರದೆ ಕೆಲವರು ಪಲಾಯನ ಮಾಡುತಿದ್ದಾರೆ, ಪಲಾಯನ ಮಾಡಲು ಸಾಧ್ಯ ಆಗದೆ ಇರುವವರು ಸೈನಿಕರ ಕ್ರೌರ್ಯಕ್ಕೆ ಬಲಿಯಾಗ್ತಿದ್ದಾರೆ, ನಿತ್ಯ ಸತ್ತು ಬದುಕುತ್ತಿದ್ದಾರೆ, ಜೀವ ಉಳಿಸಿಕೊಳ್ಳಲು ಅವರು ಸೈನಿಕರಿಗೆ ಶರಣಾಗುತ್ತಿದ್ದಾರೆ…!!
ಕಳೆದ ವರ್ಷ ಏಪ್ರಿಲ್ 15 ರಂದು ಸೂಡಾನ್ ನಲ್ಲಿ ರಾಷ್ಟ್ರವ್ಯಾಪಿ ಅಂತರ್ಯುದ್ಧ ಆರಂಭವಾಗಿದೆ…!
ಸೂಡಾನ್ ಸಶಸ್ತ್ರ ಪಡೆಗಳು (SAF) ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ (RSF) ನಡುವೆ ಯುದ್ಧ ನಡೆಯುತ್ತಿದೆ…!!
ಸೂಡಾನ್ ಇಸ್ಲಾಮಿಕ್ ರಾಷ್ಟ್ರವಾಗಿದ್ದು, ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 90 ರಷ್ಟು ಮುಸಲ್ಮಾನರಿದ್ದಾರೆ…!
ಒಂದು ಕಡೆ SAF ನ ಆರ್ಮಿ ಜನರಲ್ ಅಬ್ದೆಲ್ ಫತ್ತಾಹ್ ಅಲ್ ಬುರ್ಹಾನ್, ಇನ್ನೊಂದು ಬದಿಯಲ್ಲಿ ದೇಶದ ಎರಡನೇ ಶ್ರೇಯಾಂಕದ ನಾಯಕ ಮತ್ತು RSFನ ನಾಯಕ, ಜನರಲ್ ಹಮ್ದಾನ್ ದಗಾಲೊ ಯುದ್ಧವನ್ನು ಮುನ್ನಡೆಸುತ್ತಿದ್ದಾರೆ…!!
ಯುದ್ಧದಲ್ಲಿ ಪ್ರಜೆಗಳ ಮೇಲೆ ಸೈನಿಕರ ಕ್ರೌರ್ಯತೆ, ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ ಹೆಚ್ಚಾಗಿದೆ…!
ಸೈನಿಕರು ಆಹಾರ ಮತ್ತು ನೀರಿನ ವಿಚಾರವನ್ನು ಮುಂದಿಟ್ಟುಕೊಂಡು ಮಹಿಳೆಯರನ್ನು ಹಿಂಸಿಸಲು ಶುರು ಮಾಡಿದ್ದಾರೆ…!!
ಸೂಡಾನ್ ಅಂತರ್ಯುದ್ಧದಲ್ಲಿ ಇಲ್ಲಿಯವರೆಗೆ, 15,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, 10,000 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ, ಅನೇಕರು ಸೂಡಾನ್ ತೊರೆದಿದ್ದಾರೆ, ಇಲ್ಲಿನ ಅಂತರ್ಯುದ್ಧ ಅಲ್ಲಿನ ಜನರನ್ನು ಹೀನಾಯ ಸ್ಥಿತಿಗೆ ತಳ್ಳಿ ಹಾಕಿದೆ…!