
ಬೆಂಗಳೂರು : ಮೊನ್ನೆ ಅಷ್ಟೇ ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನ ಹೆಚ್ಚಳ ಮಾಡಿತ್ತು, ಆದರೆ ಈಗ ದಿನದಿಂದ ದಿನಕ್ಕೆ ಏರುತ್ತಿರುವ ತರಕಾರಿಗಳ ಬೆಲೆ ಜನಸಾಮಾನ್ಯರು ಕಂಗಾಲಾಗಿದ್ದಾರೆ, ಮೊದಲೇ ಬೆಲೆ ಏರಿಕೆಯ ಬಿಸಿಯಲ್ಲಿ ಇದ್ದ ಜನರಿಗೆ , ತರಕಾರಿಗಳ ಬೆಲೆ ಕೇಳಿ ತಲೆ ತಿರುಗುವ ಸ್ಥಿತಿ ನಿರ್ಮಾಣವಾಗಿದೆ,
ಟೊಮ್ಯಾಟೋ ಸೇರಿದಂತೆ ಎಲ್ಲಾ ತರಕಾರಿಗಳ ಬೆಲೆ ಏರಿಕೆಯಾಗಿದೆ ,
ಕಳೆದ ವಾರವಷ್ಟೆ ಕೆಜಿಗೆ 50 ರೂ.ಗೆ ಸಿಗುತ್ತಿದ್ದ ಟೊಮೆಟೊ, ಈಗ ಏಕಾಏಕಿ 100 ರೂ. ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದಿದ್ದೆ.
ಈ ಎಲ್ಲಾ ತರಕಾರಿ ಬೆಲೆಯಲ್ಲಿ ಏರಿಕೆ : ಬೀನ್ಸ್ ಕೆಜಿಗೆ 229 ರೂ. ಗೆ ಏರಿಕೆಯಾಗಿದ್ದರೆ ಉಳಿದಂತೆ ಶುಂಠಿ 198 ರೂ. ಬೆಳ್ಳುಳ್ಳಿ 338 ರೂ. ನಾಟಿ ಕೊತ್ತಂಬರಿ 250 ರೂ. ಏಲಕ್ಕಿ ಬಾಳೆ 86 ರೂ. ಬಿಳಿ ಬದನೆ 100 ರೂ. ಬಜ್ಜಿ ಮೆಣಸಿನಕಾಯಿ 114 ರೂ. ಕ್ಯಾಪ್ತಿಕಾಂ 114 ರೂ. ಮೂಲಂಗಿ 70 ರೂ. ನುಗ್ಗೆಕಾಯಿ 184 ರೂ. ಹೀರೇಕಾಯಿ 100 ರೂ. ಕ್ಯಾರಟ್ 92 ರೂ. ನವಿಲುಕೋಸು 98 ರೂ. ಟೊಮೇಟೊ 100 ರೂ.
ಈ ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಹಾಗೂ ದಿನಗೂಲಿ ಕಾರ್ಮಿಕರು ಪರದಾಡುವಂತೆ ಆಗಿದೆ ದುಡಿಯುವ ಹಣ ದಿನದ ಆಹಾರ ಪದಾರ್ಥಗಳಿಗೆ ಹೋಗುತ್ತಿದೆ, ಇನ್ನು ಅವರ ಭವಿಷ್ಯದ ಚಿಂತನೆ ಹೇಗೆ ಅನ್ನೋದು ಪ್ರಶ್ನೆ.