
ಒಟಿಪಿಯನ್ನು ಬಳಸಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಅನ್ ಲಾಕ್ ಮಾಡಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಇಂದು ಹೇಳಿದೆ…!
ಈ ಬಗ್ಗೆ ಹಬ್ಬಿರುವ ವರದಿ ಸಂಪೂರ್ಣ ಸುಳ್ಳಿನಿಂದ ಕೂಡಿದೆ ಎಂದು ಅದು ತಿಳಿಸಿದೆ…!!
ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದಿಂದ ಶಿವಸೇನೆ ಶಿಂಧೆ ಬಣದ ರವೀಂದ್ರ ವಾಯಿಕರ್ 48 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು…!
ಮತ ಎಣಿಕೆ ಕೇಂದ್ರದ ಏಜೆಂಟ್ ಆಗಿದ್ದ ಮಂಗೇಶ್ ಪಂಡಿಲ್ಕರ್ ಅವರು, ಎಣಿಕೆ ಕೇಂದ್ರದ ಅಧಿಕಾರಿಯ ಮೊಬೈಲ್ ಬಳಸಿ ಒಟಿಪಿ ಪಡೆದು ಇವಿಎಂ ಅನ್ ಲಾಕ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು…!!
ಹೀಗಾಗಿ ಚುನಾವಣಾ ಅಧಿಕಾರಿ ಈ ಸ್ಪಷ್ಟನೆ ನೀಡಿದ್ದಾರೆ…!
ಎಲಾನ್ ಮಸ್ಕ್ ಹೇಳಿದ್ದೇನು…?
ಇವಿಎಂ ಹ್ಯಾಕ್ ಗೆ ತುತ್ತಾಗುವ ಸಾಧ್ಯತೆ ಇದ್ದೇ ಇರುತ್ತದೆ, ಹೀಗಾಗಿ ಮುಂಚೆ ಚಾಲ್ತಿಯಲ್ಲಿದ್ದ ಬ್ಯಾಲೆಟ್ ಪೇಪರ್ ಚುನಾವಣೆಗೆ ಬಳಸುವುದು ಸೂಕ್ತ, ಎಂದು ಮಸ್ಕ್ ಹೇಳಿದ್ದರು, ಮಸ್ಕ್ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹಿತ ವಿಪಕ್ಷಗಳ ಹಲವಾರು ನಾಯಕರು ಬೆಂಬಲಿಸಿದ್ದರು…!
ಮಸ್ಕ್ ಗೆ ತಿರುಗೇಟು ಕೊಟ್ಟ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಎಲಾನ್ ಮಸ್ಕ್ ಅವರ ಈ ಹೇಳಿಕೆ ಅಮೆರಿಕಾದ ಇವಿಎಂ ಗಳಿಗೆ ಅನ್ವಯವಾಗಬಹುದು, ಏಕೆಂದರೆ ಅವರ ಇವಿಎಂ ಮೆಷಿನ್ ಗಳು ಇಂಟರ್ನೆಟ್ ಕನೆಕ್ಷನ್ ವ್ಯವಸ್ಥೆಯನ್ನು ಹೊಂದಿವೆ, ಆದರೆ ಭಾರತದ ಇವಿಎಂ ಗಳಿಗೆ ಇಂಟರ್ನೆಟ್ ಕನೆಕ್ಷನ್ ಇಲ್ಲ, ಇದು ತಿರುಚಲು ಅಸಾಧ್ಯ ಎಂದಿದ್ದಾರೆ…!