
ಬೆಂಗಳೂರು – ತುಳುನಾಡಿನ ಖ್ಯಾತ ನಟ ಹಾಗೂ ಚಲನ ಚಿತ್ರ ನಿರ್ಮಾಪಕ ರಿಷಭ್ ಶೆಟ್ಟಿ ಅಭಿನಯಿಸಿರುವ ತುಳುನಾಡಿನಲ್ಲಿ ಆಚರಿಸಲಾಗುವ ದೈವಾರಾಧನೆ, ಕೋಲ, ಕಂಬಳ ಹಾಗೂ ತುಳುವರ ಸಂಪ್ರದಾಯ ಕುರಿತ ವಿಶೇಷ ಚಲನ ಚಿತ್ರ, ಅತೀ ಹೆಚ್ಚು ಜನಮನ್ನಣೆಯನ್ನು ಪಡೆದ “ಕಾಂತಾರ” ಚಲನ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರಕಿದೆ…!
ಕಾಂತಾರ ಚಲನಚಿತ್ರದ ನಟ ರಿಷಭ್ ಶೆಟ್ಟಿ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಿಕ್ಕಿದೆ…!!
ಕೇಂದ್ರ ಪ್ರಸಾರ ಮತ್ತು ಮಾಹಿತಿ ಸಚಿವಾಲಯ ಇಂದು ಪತ್ರಿಕಾಗೋಷ್ಠಿ ನಡೆಸಿ ಹೊಸದೆಹಲಿಯಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿತು…!
ಕಾಂತಾರ ಚಲನಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ ಆಗಿರುವುದಕ್ಕೆ ಪ್ರತಿಕ್ರಿಯಿಸಿರುವ ನಟ ರಿಷಭ್ ಶೆಟ್ಟಿ, ಚಲನ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರಕಿರುವುದು ಖುಷಿಯಾಯಿತು, ಇದಕ್ಕಾಗಿ ನಮ್ಮ ಚಲನಚಿತ್ರ ತಂಡದವರಿಗೆ ಅಭಿನಂದನೆ ಸಲ್ಲಿಸುತ್ತೇನೆ, ಹಾಗೂ ಈ ಪ್ರಶಸ್ತಿಯನ್ನು ನಾನು ದೈವಕ್ಕೆ ಅರ್ಪಿಸುತಿದ್ದೇನೆ ಎಂದು ಹೇಳಿದರು…!!
ಈ ರೀತಿ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಲೇ ಈ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಇನ್ನೂ ಹೆಚ್ಚು ಮಾಡಿದೆ ಎಂದರು…!
ಕನ್ನಡದ ಸಿನಿಮಾ ಒಂದಕ್ಕೆ ಸುಮಾರು 23 ವರ್ಷಗಳ ನಂತರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರಕಿದೆ…!!
2001 ನೇ ಇಸವಿಯಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ್ದ ‘ದ್ವೀಪ’ ಎಂಬ ಚಲನಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ದೊರಕಿತ್ತು, ಅದಾದ 23 ವರ್ಷಗಳ ಬಳಿಕ ಇಂದು ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಲನಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ದೊರಕಿರುವುದು ಕನ್ನಡಿಗರ ಪಾಲಿಗೆ ಸಂತಸದ ವಿಷಯವಾಗಿದೆ…!
ಹಾಗೆಯೇ ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ KGF – 2 ಸಿನಿಮಾವನ್ನು ಅತ್ಯುತ್ತಮ ಕನ್ನಡ ಚಲನಚಿತ್ರವನ್ನಾಗಿ ಆಯ್ಕೆ ಮಾಡಲಾಗಿದೆ…!!