Kolluru Sri Mookambike: ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಾಲಯದ ಇತಿಹಾಸ ಹಾಗೂ ಸ್ಥಳ ಪುರಾಣ

ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಾಲಯ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿ ಇದೆ ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳ ಪಟ್ಟಿಯಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಾಲಯ ಕೂಡ ಒಂದು ಈ ದೇವಾಲಯಕ್ಕೆ ಸಂಬಂಧಿಸಿದ ಅನೇಕ ಕಥೆಗಳು ಕೂಡ ಇವೆ ಕೇರಳ ಹಾಗೂ ತಮಿಳುನಾಡು ಅದರಲ್ಲಿಯೂ ಕೇರಳದಿಂದ ದಿನನಿತ್ಯ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಆಗಮಿಸುತ್ತಾರೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು 1200 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ ಮತ್ತು ಅನೇಕ ರಾಜರು ಈ ದೇವಾಲಯದಲ್ಲಿ ನಂಬಿಕೆ ಹೊಂದಿದ್ದರು. ಸ್ಥಳೀಯ ರಾಜರುಗಳು ಮತ್ತು ಕೆಳದಿ ರಾಜವಂಶದ ಸುಪ್ರಸಿದ್ಧ ರಾಜರುಗಳಾದ ಶಂಕಣ್ಣ ನಾಯಕ ಮತ್ತು ಶಿವಪ್ಪ ನಾಯಕ ಅವರು ದೇವಾಲಯಕ್ಕೆ ಅನೇಕ ದೇಣಿಗೆಗಳನ್ನು ನೀಡಿ ಜೀರ್ಣೋದ್ಧಾರ ಮಾಡಿದ್ದರು.

ಈ ಕ್ಷೇತ್ರವು ಪರಶುರಾಮರು ಸ್ಥಾಪಿಸಿದ ಮೋಕ್ಷದಾಯಿಕ ಸಪ್ತ ಕ್ಷೇತ್ರಗಳಲ್ಲಿ ಒಂದೆಂದು ಹೇಳಲಾಗುತ್ತದೆ

ಮೂಕಾಂಬಿಕೆಯ ಕಥೆಯನ್ನು ವೇದವ್ಯಾಸರು ತಮ್ಮ “ಸ್ಕಂಧ ಪುರಾಣ’ದಲ್ಲಿ ಬರೆದಿದ್ದಾರೆ. ಇದನ್ನು ಶಿವನು ತನ್ನ ಮಗ ಸ್ಕಂಧನಿಗೆ ಹೇಳಿದ ಕಥೆಯಂತೆ ನಿರೂಪಿಸಲಾಗಿದೆ. ಲಿಂಗಣ್ಣ ಕವಿ ಎಂಬ ಕವಿಯು ಕ್ರಿ.ಶ. 1750 ರಲ್ಲಿ ‘ಕೆಳದಿ ನೃಪ ವಿಜಯ’ ಎಂಬ ಪುಸ್ತಕವನ್ನು ಬರೆದಿದ್ದಾರೆ ಮತ್ತು ಈ ಪುಸ್ತಕದಲ್ಲಿ ಮೂಕಾಂಬಿಕಾ ದೇವಾಲಯದ ಬಹಳಷ್ಟು ಉಲ್ಲೇಖಗಳಿವೆ.

ಪೂಜ್ಯ ಕರ್ನಾಟಕ ಸಂಗೀತ ಸಂಯೋಜಕರಾದ ಮುತ್ತುಸ್ವಾಮಿ ದೀಕ್ಷಿತರ್ ಅವರು ಭಾರತದಾದ್ಯಂತ ಹಲವಾರು ದೇವಾಲಯಗಳ ವೈಭವವನ್ನು ಹಾಡಿದ್ದಾರೆ. ಅವರ ಪ್ರಸಿದ್ಧ ಸಂಯೋಜನೆ ‘ಮೂಕಾಂಬಿಕಾಂ ಆಶ್ರಯೇ ಭಾಮತೀಂ ಸತೀಂ’ – ಧನ್ಯಾಸಿ ಅದಿ

ಒಂಬತ್ತು ದಿನಗಳ ಸಂಗೀತ ಉತ್ಸವವು ಪ್ರತಿ ಜನವರಿಯಲ್ಲಿ ದೇವಾಲಯದಲ್ಲಿ ಪ್ರಾರಂಭವಾಗುತ್ತದೆ.

ಕಳೆದ 30 ವರ್ಷಗಳಿಂದ ಪ್ರಸಿದ್ಧ ಗಾಯಕರು ಯೇಸುದಾಸ್ ತಮ್ಮ ಜನ್ಮದಿನದಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸರಸ್ವತಿ ದೇವಿಯ ಕೀರ್ತನೆಗಳನ್ನು ಹಾಡಲು ಬರುತ್ತಿದ್ದಾರೆ.

ಕೊಲ್ಲೂರು ಮೂಕಾಂಬಿಕೆ ಇತಿಹಾಸ ಪ್ರಸಿದ್ಧ ಹಾಗೂ ಪುರಾಣ ಕಥೆಗಳನ್ನು ಒಳಗೊಂಡಿರುವ ಈ ದೇವಾಲಯದ ಮಹತ್ವವಿದೆ.

ಪ್ರತಿನಿತ್ಯ ದೇಶದ ನಾನಾ ಭಾಗಗಳಿಂದ ಹಾಗೂ ವಿದೇಶದಿಂದಲೂ ಕೂಡ ಈ ದೇವಾಲಯಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ ಇಲ್ಲಿ ನಡೆಯುವ ಅನೇಕ ಧಾರ್ಮಿಕ ಆಚರಣೆಗಳಿಗೆ ಮಹತ್ವವಿದೆ.

ಅಕ್ಷರ ಅಭ್ಯಾಸ ಚಂಡಿಕಾ ಯಾಗ ತುಲಾಭಾರ ದೀಪಾರಾಧನೆ ಇನ್ನು ಭಕ್ತರು ಅನೇಕ ರೀತಿಯ ಕೋರಿಕೆಗಳನ್ನ ಸಲ್ಲಿಸುತ್ತಾರೆ.
ಕೋಲಮಹರ್ಷಿಯಿಂದ ಕೊಲ್ಲೂರು (ಕೋಲಾಪುರ) ಎಂಬ ಹೆಸರು ಬಂದಿದ್ದು, ಮೂಕಾಸುರನ ಸಂಹಾರದಿಂದ ಮೂಕಾಂಬಿಕಾ ಎಂಬ ಹೆಸರು ಬಂದಿದೆ ಎಂದು ಪುರಾಣಗಳು ಹೇಳುತ್ತವೆ. ಮೂಕಾಸುರನು ಸರಸ್ವತಿ ದೇವಿಯ ತಂತ್ರಗಳಿಂದ ಮೂಕನಾಗಿ ಮಾಡುತ್ತಾರೆ. ರಾಕ್ಷಸನನ್ನು ಕೊಂದದ್ದು ಊರ ಕೊಲ್ಲೂರು ಎಂಬ ವರದಿಗಳೂ ಇವೆ. ಅನೇಕ ಕಥೆಗಳಿವೆ ಕೌಲ ವಿಭಾಗ ಬಂದು ನೆಲೆಸಿದ ಸ್ಥಳವೇ ಮುಂದೆ ಕೊಲ್ಲೂರು ಆಯಿತು ಎಂಬ ಕಥೆಯೂ ಇದೆ

ಕೊಲ್ಲೂರು ಅಥವಾ ಕೋಲಾಪುರವನ್ನು ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಮೂಲತಃ ಮಹಾರಣ್ಯಪುರ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಇದು ಹಲವಾರು ಋಷಿಗಳು ಮತ್ತು ಯೋಗಿಗಳಿಗೆ ನೆಲೆಯಾಗಿದೆ ಎಂದು ಹೇಳಲಾಗುತ್ತದೆ. ಕೊಲ್ಲೂರಿನಲ್ಲಿ ಶಕ್ತಿಯನ್ನು ಪೂಜಿಸಲು ಕೋಲ ಎಂಬ ಋಷಿಗೆ ಸಲಹೆ ನೀಡಲಾಯಿತು ಕೊಲ ಮಹರ್ಷಿಗಳು ಶಿವನನ್ನು ಕುರಿತು ಈ ಸ್ಥಳದಲ್ಲಿ ತಪಸ್ಸನ್ನು ಆಚರಿಸುತ್ತಾರೆ ನಂತರ ಶಿವನ ಪ್ರತ್ಯಕ್ಷನಾದಾಗ ಲೋಕದ ಕಲ್ಯಾಣಕ್ಕಾಗಿ ನೆಲ್ಲಿಸಬೇಕೆಂದು ಪ್ರಾರ್ಥಿಸುತ್ತಾರೆ ಆಗ ಶಿವನು ಸ್ವಯಂಭೋ ಲಿಂಗದ ರೂಪವನ್ನು ತಾಳಿ ಇಲ್ಲಿ ನೆಲೆಸಿರುತ್ತಾನೆ ಎಂದು ಹೇಳಲಾಗುತ್ತದೆ.

ಈ ದೇವಾಲಯದ ಪಕ್ಕದಲ್ಲಿಯೇ ಸೌಪರ್ಣಿಕ ನದಿಯು ಕೂಡ ಹರಿಯುತ್ತದೆ ಈ ಲೇಖನದಲ್ಲಿ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಾಲಯದ ಇತಿಹಾಸ ಹಾಗೂ ಸ್ಥಳ ಪುರಾಣದ ಬಗ್ಗೆ ತಿಳಿದುಕೊಳ್ಳೋಣ.

ದೇವಾಲಯದ ವಾಸ್ತುಶಿಲ್ಪ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವಾಸ್ತುಶೈಲಿಯು ಕೆಳದಿ ಕಾಲಕ್ಕೆ ಸೇರಿದೆ. ಇತ್ತೀಚೆಗೆ ದೇವಾಲಯವನ್ನು ನವೀಕರಿಸಲಾಯಿತು. ಚತುರ್ಭುಜ ಆಕಾರದಲ್ಲಿರುವ ಗರ್ಭಗುಡಿಯು ದ್ರಾವಿಡ ವಾಸ್ತುಶೈಲಿಯಲ್ಲಿರುವ ವಿಮಾನ ಗೋಪುರ ಎಂದು ಕರೆಯಲ್ಪಡುವ ಗೋಪುರವನ್ನು ಹೊಂದಿದೆ. ಗರ್ಭಗುಡಿಯ ಗೋಪುರವು ಶತಮಾನಗಳ ಹಿಂದೆ ಸ್ಥಳೀಯ ರಾಜರು ನೀಡಿದ ಚಿನ್ನದಿಂದ ಮುಚ್ಚಲ್ಪಟ್ಟಿದೆ. ದೇವಿಯ ಗರ್ಭಗುಡಿಯ ಸುತ್ತಲೂ ಸುಬ್ರಹ್ಮಣ್ಯ, ದಶಭುಜ ಗಣಪತಿ, ಆಂಜನೇಯ, ಚಂದ್ರಮೌಳೀಶ್ವರ, ಗೋಪಾಲಕೃಷ್ಣ ಮುಂತಾದ ಪರಿವಾರ ದೇವತೆಗಳನ್ನು ನಾವು ಕಾಣಬಹುದು. ಮೂಕಾಂಬಿಕೆಯ ಪ್ರತಿಮೆಯು ಅತ್ಯಂತ ಆಕರ್ಷಕವಾಗಿದೆ ಮತ್ತು ನಾಲ್ಕು ತೋಳುಗಳನ್ನು ಹೊಂದಿದೆ ಮೇಲಿನ ಎರಡು ತೋಳುಗಳು ಶಂಖ ಮತ್ತು ಚಕ್ರ ಮತ್ತು ಕೆಳಗಿನ ಎರಡು ತೋಳುಗಳ ಅಂಗೈಗಳನ್ನು ಹಿಡಿದಿವೆ.

ಮೂಕಾಂಬಿಕೆ , ಜಗನ್ಮಾತೆ ಆದಿಶಕ್ತಿ ತಾಯಿ ಪಾರ್ವತಿಯ ರೂಪವೇ ಶ್ರೀ ಮೂಕಾಂಬಿಕೆ ತಾಯಿ ದುಷ್ಟಸಂಹಾರಕ್ಕಾಗಿ ಸಿಸ್ಟರ ರಕ್ಷಣೆಗಾಗಿ ಅಸುರ ಶಕ್ತಿಗಳ ನಾಶ ಮಾಡಲು ತನ್ನ ವಿಶ್ವ ಶಕ್ತಿ ಸ್ವರೂಪದಿಂದ ಅಸುರ ಶಕ್ತಿಗಳನ್ನ ನಾಶ ಮಾಡಲು ತಾಯಿ ಜಗನ್ಮಾತೆ ಬರುತ್ತಾಳೆ ಲೋಕಕ್ಕೆ ಕಂಟಕನಾದ ಒಬ್ಬ ದೈತ್ಯ ರಾಕ್ಷಸನನ್ನು ಸಂಹಾರ ಮಾಡಿ ನಂತರ ತಾಯಿ ಜಗನ್ಮಾತೆ ಕೊಲ್ಲೂರಿನಲ್ಲಿ ಮೂಕಾಂಬಿಕೆಯಾಗಿ ನೆಲೆಸಿದ್ದಾಳೆ ಎನ್ನುವಂಥದ್ದು ಸ್ಥಳ ಪುರಾಣ ಆದರೆ ಆ ರಾಕ್ಷಸ ಯಾರು? ತಾಯಿ ಅವನನ್ನು ಯಾತಕ್ಕಾಗಿ ಸಂಹಾರ ಮಾಡಿದಳು ಅನ್ನೋದನ್ನ ನೋಡೋಣ.

ಮೂಕಾಂಬಿಕ ದೇವಾಲಯದ ಸ್ಥಳ ಪುರಾಣ

ಹಿಂದೆ ಮಹಿಷಾಸುರ ಎನ್ನುವಂತಹ ಒಬ್ಬ ರಾಕ್ಷಸ ಇರುತ್ತಾನೆ ಈ ರಾಕ್ಷಸ ನಿರಂತರವಾಗಿ ದೇವತೆಗಳ ಎಲ್ಲಾ ಕಾರ್ಯಗಳಿಗೂ ಅಡ್ಡಿಪಡಿಸುತ್ತಾ ಇರುತ್ತಾರೆ ನಂತರ ಋಷಿಮುನಿಗಳ ಯಾಗ ಹಾಗೂ ತಪಸ್ಸನ್ನು ಭಗ್ನ ಮಾಡುತ್ತಾನೆ ಇದು ಯಾವುದೂ ಸಾಲದು ಅಂತ ಅಷ್ಟದಿಕ್ಪಾಲಕರನ್ನು ಬಂಧಿಸಿ ದುಷ್ಟನಂತೆ ಮೆರೆಯುತ್ತಾನೆ ನಂತರ ಈತನ ಆರ್ಭಟ ಹೆಚ್ಚುತ್ತಿದ್ದಂತೆ ಲೋಕದಲ್ಲಿ ಅಶಾಂತಿ ಹೆಚ್ಚಾಗುತ್ತಿತ್ತು ಋಷಿ ಮುನಿಗಳು ತಪಸ್ಸಿಗಳು ಹಾಗೂ ದೇವಾನುದೇವತೆಗಳು ಹೋಗಿ ಶ್ರೀಹರಿ ನಾರಾಯಣನನ್ನು ಬೇಡುತ್ತಾರೆ ಈ ದುಷ್ಟನ ಸಂಹಾರಕ್ಕಾಗಿ ಏನು ಮಾಡಬೇಕು ಎಂದು ಕೇಳುತ್ತಾರೆ.

ಆಗ ಶ್ರೀಹರಿ ನಾರಾಯಣ ಈ ದುಷ್ಟನ ಸಂಹಾರ ಆದಿಶಕ್ತಿಯಿಂದ ಮಾತ್ರ ಸಾಧ್ಯ ಹಾಗಾಗಿ ತಾವೆಲ್ಲರೂ ಆದಿಶಕ್ತಿಯನ್ನು ಪ್ರಾರ್ಥಿಸಿ ಎಂದು ಹೇಳುತ್ತಾರೆ ದೇವಾನುದೇವತೆಗಳು ತಪಸ್ಸಿಗಳು ಋಷಿಮುನಿಗಳು ಜಗನ್ಮಾತೆ ಆದಿಶಕ್ತಿಯನ್ನು ಪ್ರಾರ್ಥಿಸುತ್ತಾರೆ ಹಾಗೆ ಆದಿಶಕ್ತಿ ಪ್ರತ್ಯಕ್ಷವಾದಾಗ ದೇವತೆಗಳು ತಮ್ಮ ಎಲ್ಲ ಕಷ್ಟಗಳನ್ನು ಹೇಳುತ್ತಾರೆ ದೇವತೆಗಳ ಕಷ್ಟಗಳನ್ನು ಕೇಳಿದ ದೇವಿ ಅಷ್ಟ ಭುಜ ಧಾರಿಯಾಗಿ ತನ್ನ ಇನ್ನೊಂದು ರೂಪವನ್ನು ಲೋಕಕ್ಕೆ ತೋರಿಸುತ್ತಾಳೆ ನಂತರ ತ್ರಿಮೂರ್ತಿಗಳು ತಮ್ಮೆಲ್ಲಾ ಶಕ್ತಿಗಳನ್ನು ದೇವಿಗೆ ತುಂಬುತ್ತಾರೆ ದೇವಿ ಚಾಮುಂಡೇಶ್ವರಿಯ ರೂಪದಲ್ಲಿ ಮಹಿಷಾಸುರನನ್ನು ಸಂಹರಿಸುತ್ತಾಳೆ ಅದಾದ ನಂತರ ಲೋಕದಲ್ಲಿ ಶಾಂತಿ ನೆಲೆಸುತ್ತದೆ ದೇವತೆಗಳಿಗೂ ಹಾಗೂ ಲೋಕಕ್ಕೂ ಬಂದ ಕಂಠಕ ದೂರವಾಗುತ್ತದೆ ಎಂದು ಪುರಾಣಗಳಲ್ಲಿ ಹೇಳುತ್ತಾರೆ.

ಆದರೆ ಈ ಮಹಿಷಾಸುರನ ಸೋದರಿಯ ಮಗನಾಗಿ ಕಮಾಸುರ ಎನ್ನುವಂತಹ ಇನ್ನೊಬ್ಬ ರಾಕ್ಷಸ ಹುಟ್ಟುತ್ತಾನೆ ಈ ಕಮಹಾಸುರ ಮಹಿಷಾಸುರನಿಗಿಂತ ಹೆಚ್ಚಿನ ರಾಕ್ಷಸ ಸ್ವರೂಪದವನಾಗಿದ್ದ ಇವನು ಋಷಿಮುನಿಗಳು ಮಾಡವ ಯಜ್ಞಗಳನ್ನು ನಾಶ ಮಾಡುತ್ತಿದ್ದ ಹಾಗೆ ಋಷಿಮುನಿಗಳನ್ನು ಕೊಳ್ಳುತ್ತಿದ್ದ ಅದಲ್ಲದೆ ದೇವತೆಗಳಿಗೆ ಉಪಟಳ ಕೊಡುತ್ತಿದ್ದ ಅಷ್ಟ ದಿಕ್ಕು ಪಾಲಕರನ್ನು ಓಡಿಸುತ್ತಿದ್ದ ನಂತರ ಈ ಕಮಾಸುರ ಬ್ರಹ್ಮನಿಂದ ಒಂದು ವರವನ್ನು ಪಡೆಯುತ್ತಾನೆ ತನಗೆ ಪ್ರಾಣಿಗಳಿಂದ ಪಕ್ಷಿಗಳಿಂದ ಪುರುಷರಿಂದ ಯಾರಿಂದಲೂ ಕೂಡ ಸಾವು ಬರಬಾರದು ಎಂದು ವರವನ್ನು ಪಡೆಯುತ್ತಾನೆ ನಂತರ ಇವನು ಲೋಕಕ್ಕೆ ಇನ್ನೂ ಹೆಚ್ಚಿನ ಉಪಟಳಕೊಡಲು ಪ್ರಾರಂಭಿಸುತ್ತಾನೆ ಆದರೆ ಇವನಿಗೆ ಇವನ ಗುರು ಶುಕ್ರಾಚಾರ್ಯರು ಹೇಳುತ್ತಾರೆ ನಿನ್ನ ನಾಶ ಸಂಭವಿಸುತ್ತಿದೆ ಎಂದು ಅದಾದ ನಂತರ ಕಮಸುರ ಶಿವನನ್ನು ಕುರಿತು ತಪಸ್ಸನ್ನು ಮಾಡುತ್ತಾನೆ ಕಮ್ಮಾಸುರ ತಪಸ್ಸು ಮಾಡುವಾಗ ಶಿವನ ಪ್ರತ್ಯಕ್ಷನಾಗುತ್ತಾನೆ ಆದರೆ ಅವನು ಶಿವನಲ್ಲಿ ವರವನ್ನು ಕೇಳುವಾಗ ತಾಯಿ ಸರಸ್ವತಿ ಅವನ ನಾಲಿಗೆಯ ಮೇಲೆ ನಿಂತು ಮಾತನಾಡದ ಹಾಗೆ ಮಾಡುತ್ತಾಳೆ ಆಗ ಶಿವನು ಅಲ್ಲಿಂದ ಮಾಯವಾಗುತ್ತಾನೆ ಮತ್ತೆ ಕಂಹಾಸುರ ಮೂಕನಾದ ಕಾರಣ ಮುಖಸುರನೆಂದು ಹೆಸರನ್ನು ಪಡೆಯುತ್ತಾನೆ.

ಆದರೆ ಸುಕ್ರಾಚಾರ್ಯರು ತಮ್ಮ ತಪಸ್ಸಿನ ಬಲದಿಂದ ಈ ಅಸುರನಿಗೆ ಮಾತು ಬರುವ ಹಾಗೆ ಮಾಡುತ್ತಾರೆ ಆದರೆ ಈ ರಾಕ್ಷಸ ಮತ್ತೊಮ್ಮೆ ಬ್ರಹ್ಮದೇವರ ಕುರಿತು ಬ್ರಹ್ಮನಿಂದ ಸಾವೆ ಇಲ್ಲದ ರೀತಿ ವರವನ್ನು ಪಡೆಯಬೇಕೆಂದು ಕೊಡಚಾದ್ರಿಯಾ ಬೆಟ್ಟದ ಮೇಲೆ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ಕೆಲವು ವರ್ಷಗಳು ತಪಸ್ಸು ಮಾಡಿದ ನಂತರ ಬ್ರಹ್ಮದೇವರು ಇವನ ತಪಸ್ಸಿಗೆ ಒಲಿದು ಪ್ರತ್ಯಕ್ಷರಾಗುತ್ತಾರೆ ನಂತರ ಬ್ರಹ್ಮದೇವರು ಪ್ರತ್ಯಕ್ಷರಾದರು ಮುಖಾಸುರ ತಪಸ್ಸಿನ ಧ್ಯಾನದಿಂದ ಹೊರ ಬರುವುದಿಲ್ಲ ಆಗ ಬ್ರಹ್ಮದೇವರು ತಮ್ಮ ಕಮಂಡಲದಿಂದ ನೀರನ್ನು ತೆಗೆದು ಮೋಖಾಸುರನಿಗೆ ಹಾಕುತ್ತಾರೆ ಮೂಕಾಸುರನು ಆಗ ಎಚ್ಚರವಾಗುತ್ತಾನೆ ಆದರೆ ಬ್ರಹ್ಮದೇವರು ಕಮಂಡಲದಿಂದ ಹಾಕಿದ ನೀರು ಬಿದ್ದ ಸ್ಥಳವೇ ಚಿತ್ರಮೂಲ ಅದೇ ಸೌಪರ್ಣಿಕಾ ನದಿಯಾಗಿ ಹರಿಯುತ್ತದೆ.

ನಂತರ ಮೂಕಾಸುರನ ಸಂಹಾರಕ್ಕೆ ದೇವತೆಗಳು ಮತ್ತೆ ಆದಿಶಕ್ತಿಯನ್ನು ಪ್ರಾರ್ಥಿಸುತ್ತಾರೆ ಆಗ ತ್ರಿಮೂರ್ತಿಗಳ ಸಂಪೂರ್ಣ ಶಕ್ತಿಯನ್ನು ಜಗನ್ಮಾತೆ ಪಾರ್ವತಿ ಆದಿಶಕ್ತಿಗೆ ನೀಡುತ್ತಾರೆ ಆದಿಶಕ್ತಿ ಮೂಕಾಸುರನನ್ನು ಸಂಹರಿಸುತ್ತಾಳೆ ಆಗ ಮುಖ ಸುರ ತನ್ನ ತಪ್ಪಿನ ಅರಿವಾಗಿ ದೇವಿಗೆ ಶರಣಾಗುತ್ತಾನೆ ನಂತರ ಮೂಕಾಸುರನಿಗೆ ಲೋಕದ ದುಷ್ಟರ ನಾಶಕ್ಕಾಗಿ ಸಿಸ್ಟರ್ ರಕ್ಷಣೆಗಾಗಿ ನೀನು ಈ ಲೋಕದಲ್ಲಿ ನೆಲೆಸು ಎಂದು ದೇವಿ ವರವನ್ನು ನೀಡುತ್ತಾಳೆ. ಆ ಮುಖ ಸುರ ಬ್ರಹ್ಮನಿಂದ ಹೊರ ಪಡೆದು ಹಾಗೂ ಶಿವನಿಂದ ಹೊರ ಪಡೆದ ಕಾರಣ ಅವನನ್ನು ಬ್ರಹ್ಮಲಿಂಗೇಶ್ವರ ಎಂದು ಕರೆಯುತ್ತಾರೆ .

ಆಗ ಮೂಖಾಸುರ ಜಗನ್ಮಾತೆಯಲ್ಲಿ ಪ್ರಾರ್ಥಿಸುತ್ತಾನೆ ನೀನು ಇಲ್ಲಿಯೇ ನೆಲೆಸಬೇಕೆಂದು ಆಗ ಜಗನ್ಮಾತೆ ಮೂಕಾಂಬಿಕೆಯ ರೂಪದಲ್ಲಿ ಅಂದರೆ ಮೂಕಾಸುರನನ್ನು ಸಂಹರಿಸಿದಕ್ಕಾಗಿ ಮೂಕಾಂಬಿಕೆಯಾಗಿ ಕೊಲ್ಲೂರಿನಲ್ಲಿ ನೆಲೆಸುತ್ತಾಳೆ.

ಅದಾದ ನಂತರ ಎಂಟನೇ ಸಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ತನ್ನ ತಾಯಿಗೆ ಆದ ಅವಮಾನವನ್ನು ಹಾಗೂ ತಮ್ಮ ಊರಿನವರಿಗೆ ಕೊಟ್ಟ ಸಾಪದ ವಿಮೋಚನೆಗಾಗಿ ಕೊಡಚಾದ್ರಿಯಾ ಸರ್ವಜ್ಞ ಪೀಠದಲ್ಲಿ ಬಂದು ತಪಸ್ಸನ್ನು ನಡೆಸುತ್ತಾರೆ ಆಗ ಅಲ್ಲಿ ದೇವಿಯ ಸತ್ಯ ಹಾಗೂ ಚೈತನ್ಯ ವಿರುವುದು ಆದಿಶಂಕರರಿಗೆ ತಿಳಿಯುತ್ತದೆ ನಂತರ ಸಂಕರರ ಮುಂದೆ ದೇವಿ ಮೂಕಾಂಬಿಕೆ ಪ್ರತ್ಯಕ್ಷರಾಗುತ್ತಾರೆ ನಂತರ ತಾಯಿಯ ಮುಂದೆ ಸಂಕರರು ಕೋರಿಕೆ ನೀಡುತ್ತಾರೆ ನೀವು ನನ್ನ ಜೊತೆ ನಮ್ಮ ನಾಡಿಗೆ ಬರಬೇಕೆಂದು ಆದರೆ ತಾಯಿ ಇವರ ಕೋರಿಕೆಗೆ ಒಪ್ಪುತ್ತಾರೆ ಆದರೆ ಒಂದು ಸರತ್ ಅನ್ನು ಹಾಕುತ್ತಾರೆ ನಾನು ಬರಲು ಸಿದ್ಧರಿದ್ದೇನೆ ಆದರೆ ನೀನು ಮುಂದೆ ಹೋಗುತ್ತಾ ಇರಬೇಕು ನಾನು ಹಿಂದೆ ಬರುತ್ತಾ ಇರುತ್ತೇನೆ ನೀನು ಹಿಂತಿರುಗಿ ನೋಡಿದರೆ ನಾನು ಮತ್ತೆ ಮುಂದೆ ಬರುವುದಿಲ್ಲ ಇಲ್ಲಿ ನೀನು ನೋಡಿದ್ದೀಯಾ ಅಲ್ಲಿಗೆ ನೆಲೆಸುತ್ತೇನೆ ಎಂದು ಹೇಳುತ್ತಾಳೆ.

ಆಗ ಶಂಕರರು ಒಂದು ದೇವಿಯ ವಿಗ್ರಹವನ್ನು ಹಿಡಿದು ಸಾಗುತ್ತಾರೆ ದೇವಿ ಜಗನ್ಮಾತೆಯು ಅವರ ಹಿಂದೆ ಸಾಗುತ್ತಾರೆ ಸ್ವಲ್ಪ ದೂರ ಶ್ರಮಿಸಿದಾಗ ಹಿಂದೆ ಸದ್ದು ಕೇಳಿಸುವುದಿಲ್ಲ ಶಂಕರರು ದೇವಿ ಹಿಂದೆ ಬರುತ್ತಿದ್ದಾಳ ಅಥವಾ ಬರುತ್ತಿಲ್ಲವಾ ಎಂದು ಅನುಮಾನದಿಂದ ಹಿಂತಿರುಗಿ ನೋಡುತ್ತಾರೆ ಆಗ ದೇವಿ ಹೇಳುತ್ತಾಳೆ ನಾನು ನಿನ್ನ ಹಿಂದೆಯೇ ಇದ್ದೆ ಆದರೆ ನೀನು ನನಗೆ ಕೊಟ್ಟ ಮಾತು ತಪ್ಪಿದ್ದೀಯ ಹಾಗಾಗಿ ನಾನು ಇಲ್ಲಿಯೇ ನೆಲೆಸುತ್ತೇನೆ ಎಂದು ಹೇಳುತ್ತಾಳೆ ನಂತರ ಶಂಕರ ದೇವಿಯನ್ನು ಕೊಲ್ಲೂರಿನಲ್ಲಿ ಸ್ಥಾಪಿಸುತ್ತಾರೆ ಹಾಗೆ ಶ್ರೀ ಚಕ್ರವನ್ನು ಕೂಡ ಇಲ್ಲಿ ಆದಿ ಶಂಕರಾಚಾರ್ಯರು ಸ್ಥಾಪಿಸುತ್ತಾರೆ.

ಹಾಗೆ ಸ್ವಯಂಭುಲಿಂಗದ ಹತ್ತಿರ ಶ್ರೀಚಕ್ರ ಹಾಗೂ ತಾಯಿ ಮೂಖಾಂಬಿಕೆ ಸ್ಥಾಪಿಸುತ್ತಾರೆ ನಂತರ ಲಿಖಿಲ ಕಾಲ ತಪಸ್ಸನ್ನು ಆಚರಿಸಿ ಅಲ್ಲಿಂದ ಮುಂದೆ ಸಾಗುತ್ತಾರೆ.

ಇಂದಿಗೂ ಕೂಡ ಮೂಕಾಂಬಿಕೆ ದೇವಿಯ ವಿಗ್ರಹದ ಮುಂದೆ ಒಂದು ವಿಗ್ರಹ ಚಿಕ್ಕದಾಗಿ ಇರುತ್ತದೆ ಅದೇ ಸಂಕಲರು ಸ್ಥಾಪಿಸಿದ ವಿಗ್ರಹ ಎಂದು ಹೇಳುತ್ತಾರೆ ಹಾಗೆ ಮೂಖಾಂಬಿಕೆ ಸ್ವಯಂಭುಲಿಂಗದ ಮೇಲೆ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ ನಂತರ ಅಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರು ಹಾಗೂ ಸರಸ್ವತಿ ಮಹಾಲಕ್ಷ್ಮಿ ಹಾಗೂ ತಾಯಿ ಪಾರ್ವತಿಯು ನೆನೆಸಿದ್ದಾರೆ ಎಂದು ಹೇಳಲಾಗುತ್ತದೆ.

ವಸಂತ ನವರಾತ್ರಿಯ ಸಮಯದಲ್ಲಿ , ವಾರ್ಷಿಕ ಉತ್ಸವವನ್ನು ನಡೆಸಲಾಗುತ್ತದೆ, ಮತ್ತು ಇದು ದೇವಿಯನ್ನು ಗೌರವಿಸುವ ಹಬ್ಬವಾಗಿರುವುದರಿಂದ ದೇವಾಲಯವು ಪ್ರಕಾಶಮಾನವಾಗಿ ಕಾಣುತ್ತದೆ. ಫಾಲ್ಗುಣ ಮಾಸದಲ್ಲಿ (ಮಾರ್ಚ್ – ಏಪ್ರಿಲ್), ಮೂಲಾ ನಕ್ಷತ್ರದ ದಿನದಂದು, ದೇವಿಯ ಜನ್ಮದಿನವನ್ನು ಬಹಳ ವೈಭವದಿಂದ ಮತ್ತು ವೈಭವದಿಂದ ಆಚರಿಸಲಾಗುತ್ತದೆ. ಅನೇಕ ರಾಜಕಾರಣಿಗಳು, ಚಲನಚಿತ್ರ ತಾರೆಯರು ಮತ್ತು ಇತರ ಸೆಲೆಬ್ರಿಟಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸುವ ಭಕ್ತರಲ್ಲಿ ಸೇರಿದ್ದಾರೆ.

ಕೊಲ್ಲೂರಿನ ಮೂಕಾಂಬಿಕಾ ದೇವಿ ದೇವಸ್ಥಾನವು ಮಂಗಳೂರಿನಿಂದ ಸುಮಾರು 130 ಕಿಮೀ ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನಿಂದ 440 ಕಿಮೀ ದೂರದಲ್ಲಿದೆ. ಇದು ಸೌಪರ್ಣಿಕಾ ನದಿಯ ಪಕ್ಕದಲ್ಲಿ ಪಶ್ಚಿಮ ಘಟ್ಟಗಳ ಕೊಡಚಾದ್ರಿಯ ಬೆಟ್ಟಗಳ ನಡುವೆ ಇದೆ.

ರೈಲಿನ ಮೂಲಕ ದೇವಸ್ಥಾನಕ್ಕೆ ತಲುಪಲು ಹತ್ತಿರದ ರೈಲು ನಿಲ್ದಾಣ. ಬೈಂದೂರು ಬೈಂದೂರು ರೈಲು ನಿಲ್ದಾಣದಿಂದ ಕೊಲ್ಲೂರು ಮೂಕಾಂಬಿಕ ದೇವಾಲಯಕ್ಕೆ ಸುಮಾರು 30 km ಆಗುತ್ತದೆ.

ಬಸ್ಸಿನ ಮೂಲಕ ಕುಂದಾಪುರ ಮಾರ್ಗದಲ್ಲಿ ತಲುಪಬಹುದು.

ದೇವಸ್ಥಾನವು ಪ್ರತಿದಿನವೂ ದೇವಿಗೆ ತ್ರಿಕಾಲ ಪೂಜೆಯನ್ನು ನಡೆಸುತ್ತದೆ. ಮುಂಜಾನೆ 5 ಗಂಟೆಗೆ ವಿಶೇಷ ನಿರ್ಮಾಲ್ಯ ಪೂಜಾ ಕಾರ್ಯಕ್ರಮವಿದ್ದು, ಈ ಸಂದರ್ಭದಲ್ಲಿ ಭಕ್ತರು ಸ್ವಯಂಭೂ ಲಿಂಗದ ದರ್ಶನ ಪಡೆಯಬಹುದಾಗಿದೆ.

Leave a Comment

Your email address will not be published. Required fields are marked *

Scroll to Top