
ಬ್ರಿಟನ್ – ಲಂಡನ್ ನ ಲಿವರ್ ಪೂಲ್ ನಗರದಲ್ಲಿನ ಡ್ಯಾನ್ಸ್ ಸ್ಕೂಲ್ನಲ್ಲಿ ಮಕ್ಕಳು ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದ ಸಮಯದಲ್ಲಿ ಏಕಾಏಕಿ ದಾಳಿ ಮಾಡಿದ ಮುಸ್ಲಿಂ ಬಾಲಕನೊಬ್ಬ ಮೂವರು ಬಾಲಕಿಯರನ್ನು ಹತ್ಯೆ ಮಾಡಿದ್ದು, 9 ವಿದ್ಯಾರ್ಥಿಗಳನ್ನು ಗಂಭೀರವಾಗಿ ಗಾಯಗೊಳಿಸಿದನು…!
ಈ ಘಟನೆಯಲ್ಲಿ ಇಬ್ಬರು ವಯಸ್ಕರೂ ಕೂಡಾ ಗಾಯಗೊಂಡಿದ್ದರು…!!
ಈ ಘಟನೆಯನ್ನು ಖಂಡಿಸಿ ಬ್ರಿಟನ್ ದೇಶದಾದ್ಯಂತ ಭಾರೀ ಪ್ರತಿಭಟನೆ ಆರಂಭವಾಗಿದೆ…!
6 ರಿಂದ 11 ವರ್ಷಗಳ ಒಳಗಿನ ಬಾಲಕ ಹಾಗೂ ಬಾಲಕಿಯರು ‘ಟೇಲರ್ ಸ್ವಿಫ್ಟ್ ಯೋಗ ಮತ್ತು ನೃತ್ಯ ಕಾರ್ಯಾಗಾರ’ದಲ್ಲಿ ಭಾಗಿಯಾಗಿದ್ದರು…!!
ಈ ವೇಳೆ ಶಾಲೆಗೆ ಚಾಕು ಸಮೇತವಾಗಿ ನುಗ್ಗಿದ 17 ವರ್ಷ ಬಾಲಕ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದ…!
ಈ ಘಟನೆಯಲ್ಲಿ ಮೂವರು ಬಾಲಕಿಯರು ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿದ್ದರು…!!
ಈ ಕೃತ್ಯದ ಹಿಂದೆ ಭಯೋತ್ಪಾದನೆಯ ಉದ್ದೇಶ ಇಲ್ಲ ಎಂದು ಪೊಲೀಸರು ಹೇಳಿದ್ದರಾದರೂ, ಬ್ರಿಟನ್ನಲ್ಲೇ ಜನಿಸಿದ್ದ ಈ ಬಾಲಕನ ಮೂಲ ಇದೀಗ ಉದ್ವಿಘ್ನತೆಗೆ ಕಾರಣವಾಗಿದೆ…!
ಬಂಧಿತ ಆರೋಪಿ ಬಾಲಕ ಇಸ್ಲಾಂ ಧರ್ಮೀಯನಾಗಿದ್ದು, ಆತ ಸ್ಥಳೀಯ ಮಸೀದಿಯೊಂದಕ್ಕೆ ಭೇಟಿ ನೀಡುತ್ತಿದ್ದ ಎಂಬ ಮಾಹಿತಿ ಬ್ರಿಟನ್ನಾದ್ಯಂತ ಹರಿದಾಡುತ್ತಿದೆ…!!
ಈ ಮಾಹಿತಿಯನ್ನು ಪೊಲೀಸರು ಖಚಿತಪಡಿಸಿಲ್ಲವಾದರೂ ಬಲಪಂಥೀಯರು ರೊಚ್ಚಿಗೆದ್ದಿದ್ದಾರೆ…!!
ಸ್ಥಳೀಯ ಮಸೀದಿ ಮೇಲೆ ದಾಳಿ ನಡೆಸಿದ ಬಲಪಂಥೀಯರು ತಮ್ಮ ಕೈಗೆ ಸಿಕ್ಕ ವಸ್ತುಗಳನ್ನು ಮಸೀದಿ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು…!
ಬಲಪಂಥೀಯ ಪ್ರತಿಭಟನಾಕಾರರು ಮಸೀದಿ ಮೇಲೆ ಕಲ್ಲೆಸೆತ ಮಾಡಿದ್ದಷ್ಟೇ ಅಲ್ಲದೆ, ಪೊಲೀಸರ ವಾಹನಗಳನ್ನೂ ಜಖಂಗೊಳಿಸಿದರು…!
ಜೊತೆಯಲ್ಲಿ ‘ನಮ್ಮ ದೇಶವನ್ನು ನಮಗೆ ವಾಪಸ್ ಕೊಡಿ’ ಎಂಬ ಘೋಷ ವಾಕ್ಯ ಕೂಗುತ್ತಾ ಪ್ರತಿಭಟನೆಯನ್ನು ನಡೆಸಿದರು…!!
ಇದಾದ ಬಳಿಕ ಮೃತ ಬಾಲಕಿಯರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿ ಎಲ್ಲ ಪ್ರತಿಭಟನಾಕಾರರೂ ಮೌನ ಮೆರವಣಿಗೆ ನಡೆಸಿದರು…!