ಮಹಾಲಯ ಅಮಾವಾಸ್ಯೆಯ ಮಹತ್ವ
ಪಿತ್ರ ಋಣ ತೀರಿಸಲು ಪೂರ್ವಜರ ಕೃಪಾಕಟಾಕ್ಷವನ್ನು ಪಡೆಯಲು ಹಾಗೂ ಪೂರ್ವಜರ ಆಶೀರ್ವಾದವನ್ನು ಪಡೆಯಲು ಪಿತೃಪಕ್ಷದ ಸಮಯದಲ್ಲಿ ಸಾಧ್ಯಧಿ ಕರ್ಮಗಳನ್ನ ಮಾಡಿ ಅವರಿಗೆ ಆಹಾರವನ್ನು ನೀಡುತ್ತಾರೆ.
ಮಹಾಲಯ ಅಮಾವಾಸ್ಯೆ ಮಹಾಲಯ ಪಕ್ಷದ 15 ದಿನಗಳ ಅವಧಿಯ ಕೊನೆಯ ದಿನದಂದು ಬರುವ ಈ ಅಮಾವಾಸ್ಯೆಗೆ ಮಹಾಲಯ ಅಮಾವಾಸ್ಯೆ ಎಂದು ಕರೆಯುತ್ತಾರೆ ಈ ದಿನದಂದು ಪಿತಪಕ್ಷದ 15 ದಿನಗಳಲ್ಲಿ ಪೂರ್ವಜರಿಗೆ ತರ್ಪಣ ಸಲ್ಲಿಸಲು ಸಾಧ್ಯವಾಗದೇ ಇರುವವರು ಪಿತೃಪಕ್ಷದ ಈ ಕೊನೆಯಲ್ಲಿ ಬರುವ ಮಹಾಲೆಯ ಅಮಾವಾಸ್ಯೆ ಎಂದು ಪಿತೃಗಳಿಗೆ ಪಿತೃ ದರ್ಪಣವನ್ನು ಮಾಡುತ್ತಾರೆ.
ಈ ಅಮಾವಾಸ್ಯೆಯನ್ನು ಸರ್ವ ಪಿತ್ರ ಅಮಾವಾಸ್ಯೆ ಎಂದು ಕರೆಯುತ್ತಾರೆ ಪಿತೃಪಕ್ಷ ಹಿಂದೂ ಧರ್ಮದಲ್ಲಿ ಬಹಳ ಮುಖ್ಯವಾದ ಹಾಗೂ ಪ್ರಮುಖವಾದ ಆಚರಣೆಗಳಲ್ಲಿ ಒಂದು ಈ ಲೇಖನದಲ್ಲಿ ಮಹಾಲಯ ಅಮಾವಾಸ್ಯೆಯ ಮಹತ್ವವನ್ನು ಹಾಗೂ ಕಾರ್ಯವನ್ನು ನೋಡೋಣ.
ಒಂದು ನಂಬಿಕೆಯ ಪ್ರಕಾರ ಹಿಂದೂ ಧರ್ಮ ಗ್ರಂಥಗಳಲ್ಲಿ ಉಲ್ಲೇಖವಿರುವಂತೆ ಅಮಾವಾಸ್ಯೆ ದಿನದಂದು ಸೂರ್ಯ ಚಂದ್ರ ಕನ್ಯಾ ರಾಶಿ ಪ್ರವೇಶ ಮಾಡುತ್ತಾರೆ ಈ ದಿನದಂದು ಪೂರ್ವಜರು ತಮ್ಮ ವಾಸಸ್ಥಾನದಿಂದ ಮಸ್ತ್ತ್ಯ ಲೋಕಕ್ಕೆ ಹಿಂತಿರುಗಿ ತಮ್ಮ ಕುಟುಂಬಸ್ಥರ ಮನೆಗಳತ್ತ ಬರುತ್ತಾರೆ ಎಂದು ನಂಬಲಾಗಿದೆ.
ಹಿಂದೂ ಧರ್ಮದಲ್ಲಿ ಪ್ರತಿ ಅಮಾವಾಸ್ಯೆ ಯಲ್ಲಿಯೂ ಅಗಲಿದ ಪೂರ್ವಜರಿಗಾಗಿ ನೀರನ್ನು ಸಮರ್ಪಿಸುವಂಥದ್ದು ಅಥವಾ ಹಾಲು ಬಾಳೆಹಣ್ಣನ್ನು ಸಮರ್ಪಿಸುವಂತದ್ದು ಒಂದು ಸಂಪ್ರದಾಯವಿದೆ ಇದು ಎಲ್ಲಾ ಭಾಗದಲ್ಲಿ ಇಲ್ಲ ಆದರೆ ಕೆಲವು ಭಾಗಗಳಲ್ಲಿ ಈ ಸಂಪ್ರದಾಯವಿದೆ ಆದರೆ ಅದರಲ್ಲಿಯೂ ಮಹಾಲಯ ಅಮಾವಾಸ್ಯೆಯ ಸಂದರ್ಭದಲ್ಲಿ ಪೂರ್ವಜರಿಗೆ ಅಥವಾ ತೀರಿಹೋದ ಪೂರ್ವಜರಿಗಾಗಿ ಪಿತೃ ತರ್ಪಣ ನೀಡುವಂತಹ ಸಂಪ್ರದಾಯವಿದೆ.
ಧಾರ್ಮಿಕ ವಿಧಿ ವಿಧಾನಗಳಂತೆ ಶ್ರದ್ಧಾ ಕರ್ಮಗಳನ್ನು ನೆರವೇರಿಸುತ್ತಾರೆ ಪಿತೃಗಳ ಆತ್ಮಕ್ಕೆ ತೃಪ್ತಿ ನೀಡುತ್ತಾರೆ.
ಹಾಗೆ ತೀರಿಹೋದ ಹಿರಿಯರಿಗಾಗಿ ಪ್ರತಿ ವರ್ಷವೂ ವಾರ್ಷಿಕ ಶ್ರದ್ಧಾ ಮಾಡುತ್ತಾರೆ ಆದರೆ ಹೆಚ್ಚಿನವರಿಗೆ ಅವರು ತೀರಿಹೋದ ದಿನಗಳು ನೆನಪು ಇರದ ಕಾರಣ ನೆನಪು ಇಲ್ಲದವರು ಪಿತೃಪಕ್ಷದ ಕೊನೆಯ ಮಹಾಲಯ ಅಮಾವಾಸ್ಯೆ ದಿನದಂದು ಶ್ರದ್ಧವನ್ನು ಮಾಡಬಹುದು.
ಒಂದು ಸಣ್ಣ ಪುರಾಣ ಕಥೆ
ಮಹಾಭಾರತದ ಒಂದು ಕಥೆಯ ಪ್ರಕಾರ ಮಹಾಭಾರತದಲ್ಲಿ ಮಹಾಯೋಧ ಹಾಗೂ ಧಾನ ಶೂರ ಕರ್ಣ ಮರಣ ಹೊಂದಿದಾಗ ನಂತರ ಮರಣ ಹೊಂದಿದ ಕರ್ಣನ ಆತ್ಮ ಸ್ವರ್ಗವನ್ನು ಪ್ರವೇಶ ಮಾಡುತ್ತದೆ ಸ್ವರ್ಗ ಪ್ರವೇಶ ಮಾಡಿದ ಕರ್ಣನಿಗೆ ಚಿನ್ನ ಹಾಗೂ ವಜ್ರಗಳನ್ನು ಅರ್ಪಿಸಲಾಗುತ್ತದೆ ಚಿನ್ನ ಹಾಗೂ ವಜ್ರವನ್ನು ಅರ್ಪಿಸಿದ್ದನ್ನು ಕಂಡು ಕರುಣನು ಗೊಂದಲಪಡುತ್ತಾನೆ ನಂತರ ತುಂಬಾ ದುಃಖದಿಂದ ನನಗೆ ಯಾಕೆ ಇದನ್ನು ಅರ್ಪಿಸುತ್ತಿದ್ದೀರಾ ಇದನ್ನು ನೀಡುತ್ತಿದ್ದೀರಿ ಎಂದು ಧರ್ಮರಾಜ ಯಮನನ್ನು ಕೇಳುತ್ತಾನೆ.
ಆಗ ಕರ್ಣನ ಪ್ರಶ್ನೆಗೆ ಧರ್ಮರಾಜನಾದಂತಹ ಯಮ ಉತ್ತರವನ್ನು ನೀಡುತ್ತಾನೆ ಕರ್ಣ ನೀನು ನಿನ್ನ ಜೀವನದ ಅವಧಿಯಲ್ಲಿ ಇತರರಿಗೆ ಕೇಳಿದ್ದು ಎಲ್ಲವನ್ನು ಕೊಟ್ಟಿದ್ದೀಯಾ, ವಜ್ರ ಬಂಗಾರ ಭೂಮಿ ಎಲ್ಲವನ್ನು ನೀನು ನೀಡಿದ್ದೀಯ ಆದರೆ ನೀನು ನಿನ್ನ ಪೂರ್ವಜರಿಗೆ ಯಾವುದೇ ರೀತಿಯ ಆಹಾರವನ್ನು ನೀಡಲಿಲ್ಲ ಅವರಿಗೆ ತರ್ಪಣವನ್ನು ನೀನು ಸಮರ್ಪಿಸಲಿಲ್ಲ ಅದಕ್ಕಾಗಿ ನಿನಗೆ ಇಲ್ಲಿ ನೀನು ಏನು ದಾನ ಮಾಡಿದ್ದೀಯಾ ಅದನ್ನು ನೀಡಲಾಗಿದೆ ಎಂದು ಯಮರಾಜನು ಕರುಣೆಗೆ ವಿವರಿಸುತ್ತಾನೆ.
ನಂತರ ಕರ್ಣನಿಗೆ ದುಃಖವಾಗುತ್ತದೆ ಹಾಗೂ ಯಮನಲ್ಲಿ ಹೇಳುತ್ತಾನೆ ಧರ್ಮರಾಜನಾದಂತಹ ಯಮನೇ ನಾನು ನನ್ನ ಜೀವಂತದ ಅವಧಿಯಲ್ಲಿ ನನ್ನ ಪೂರ್ವಜರು ಯಾರೆಂದು ತಿಳಿದುಕೊಳ್ಳಲೇ ಇಲ್ಲ ಹಾಗೂ ನನಗೂ ಅವರ ಬಗ್ಗೆ ತಿಳಿಯಲೇ ಇಲ್ಲ ಹಾಗಿದ್ದ ಮೇಲೆ ನಾನು ಹೇಗೆ ಅವರಿಗೆ ತರ್ಪಣವನ್ನು ನೀಡುವುದು ಎಂದು ಕೇಳುತ್ತಾನೆ.
ಆಗ ಕರ್ಣನ ಈ ಮಾತನ್ನು ಯೋಚಿಸಿದ ಯಮರಾಜ ಕರ್ಣನಿಗೆ 15 ದಿನಗಳ ಅವಧಿಗೆ ಮಹಾಲಯ ಪಕ್ಷದಲ್ಲಿ ಭೂಮಿಗೆ ಹಿಂದುಳಿಗಲು ಅನುಮತಿಯನ್ನು ನೀಡುತ್ತಾನೆ. ನೀನು ಭೂಮಿಗೆ ತರಲಿ ನಂತರ ಆ 15 ದಿನದ ಅವಧಿಯಲ್ಲಿ ನೀನು ನಿನ್ನ ಪಿತೃಗಳಿಗೆ ತರ್ಪಣವನ್ನು ಅರ್ಪಿಸಿ ನಂತರ ಮತ್ತೆ ಸ್ವರ್ಗಕ್ಕೆ ಹಿಂತಿರುಗು ಎಂದು ಹೇಳುತ್ತಾನೆ ಆಗ ಕರ್ಣನು ಕೂಡ ಭೂಮಿಗೆ ಬಂದು ಪಿತೃಗಳಿಗೆ ಮಾಡಬೇಕಾದ ಎಲ್ಲಾ ಕರ್ತವ್ಯ ಕಾರ್ಯಗಳನ್ನು ಮಾಡಿ ಸ್ವರ್ಗಕ್ಕೆ ಪುನಃ ಹೋಗುತ್ತಾನೆ.
ಈ ಕಥೆಯಿಂದ ತಿಳಿಯುವುದು ಏನೆಂದರೆ ಪಿತ್ರ ಕಾರ್ಯವನ್ನ ಮಾಡದಿದ್ದರೆ ಸ್ವರ್ಗದಲ್ಲಿಯೂ ಕೂಡ ನೆಮ್ಮದಿ ಸಿಗುವುದಿಲ್ಲ ಹಾಗೂ ಶಾಂತಿ ಸಿಗುವುದಿಲ್ಲ ಅನ್ನುವಂತಹ ಒಂದು ಸಂದೇಶ ಸಿಗುತ್ತದೆ.
ಮಹಾಲಯ ಪಕ್ಷದ ಈ 15 ದಿನದ ಅವಧಿ ಮಾನವರಿಗೆ ಪುಣ್ಯಕರವಾದಂತಹ ದಿನ ಹಾಗೂ ಪಿತೃಗಳ ಆಶೀರ್ವಾದವನ್ನು ಪಡೆಯಲು ಶುಭ ಗಳಿಗೆ ಎಂದು ಹೇಳಲಾಗುತ್ತದೆ.
ಮಹಾಲಯ ಅಮಾವಾಸ್ಯೆ ಆಚರಣೆ
ಮಹಾಲಯ ಅಮಾವಾಸ್ಯೆಯ ದಿನದಂದು ದರ್ಪಣವನ್ನು ನೀಡಿದರೆ ಹಾಗೂ ತಮ್ಮ ಪೂರ್ವಜರಿಗೆ ಆಹಾರವನ್ನು ನೀಡುವುದರಿಂದ ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದೆಂದು ಹೇಳಲಾಗಿದೆ. ಅನ್ನದಿಂದ ಪಿಂಡವನ್ನು ಮಾಡಿ ಅದನ್ನು ಧರ್ಮಯ ಮೇಲೆ ಇಟ್ಟು ಆ ಪಿಂಡದ ಮೇಲೆ ಕಪ್ಪು ಎಳ್ಳನ್ನು ಹಾಕಿ ಪಿತೃಗಳನ್ನು ಪ್ರಾರ್ಥಿಸಿ ಪಿಂಡವನ್ನು ಕಾಗೆಗೆ ನೀಡಬೇಕು ನಂತರ ಬ್ರಾಹ್ಮಣರಿಗೆ ಅಥವಾ ಧರ್ಮನಿಷ್ಠ ರಿಗೆ ಭೋಜನವನ್ನು ನೆರವೇರಿಸಬೇಕು ಹಾಗೂ ಒಂದು ಎಡೆಯ ಮೇಲೆ ಆಹಾರವನ್ನು ಬೆಡಸಿ ಅದನ್ನು ಪೂರ್ವಜರಿಗೆ ಅರ್ಪಿಸುತ್ತಿದ್ದೇವೆ ಎಂದು ಗೋವಿಗೆ ನೀಡಬೇಕಾಗುತ್ತದೆ ಇದರಿಂದ ಪೂರ್ವಜರು ಸಂತೃಪ್ತರಾಗಿ ಆಶೀರ್ವದಿಸುತ್ತಾರೆ.
ಮಹಾಲಯ ಅಮಾವಾಸ್ಯೆ ಯನ್ನು ಆಚರಿಸುವುದರಿಂದ ಸಿಗುವ ಲಾಭಗಳು.
ಮಹಾಲಯ ಅಮಾವಾಸ್ಯೆಯ ದಿನದಂದು ಪೂರ್ವಜರಿಗೆ ಸಲ್ಲಿಸಿದ ಆಹಾರದಿಂದ ಪೂರ್ವಜರು ತೃಪ್ತಿ ಹೊಂದಿ ಅವರು ಮೋಕ್ಷವನ್ನು ಪಡೆಯುತ್ತಾರೆ ಎಂದು ನಂಬಿಕೆ.
ನಮ್ಮ ಜೀವನದಲ್ಲಿ ನಾವು ಅನುಭವಿಸುತ್ತಿರುವ ಹಲವಾರು ಕಷ್ಟ ದುಃಖಗಳು ದೂರವಾಗಿ ನೆಮ್ಮದಿಯ ಜೀವನ ದೊರೆಯುತ್ತದೆ.
ಪೂರ್ವಜರ ಆಶೀರ್ವಾದದಿಂದ ಜೀವನದಲ್ಲಿ ಬರುವಂತಹ ಮುಂದಿನ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ಮಾಡುವ ಉದ್ಯೋಗದಲ್ಲಿ ಯಶಸ್ಸನ್ನು ಪೂರ್ವಜರು ತಂದುಕೊಡುತ್ತಾರೆ.
ಮಹಾಲಯ ಅಮಾವಾಸ್ಯೆ 2024 ದಿನಾಂಕ ಹಾಗೂ ಸಮಯ.
ಮಹಾಲಯ ಅಮಾವಾಸ್ಯೆ ದಿನದಂದು ಪಿತೃಗಳಿಗೆ ಆಹಾರವನ್ನು ನೀಡಿ ಪಿತೃಗಳ ಆಶೀರ್ವಾದವನ್ನು ಪಡೆಯಲಾಗುತ್ತದೆ ಅನ್ನುವಂತಹ ವಿಷಯ ನಮಗೆ ಗೊತ್ತಿದೆ ಆದರೆ ಅಮಾವಾಸ್ಯೆಯ ದಿನದಂದು ಯಾವ ಸಮಯದಲ್ಲಿ ಪಿತೃಗಳಿಗೆ ಆಹಾರವನ್ನು ಹಾಗೂ ಪಿಂಡವನ್ನು ಇಡಬೇಕಾಗುತ್ತದೆ ನೀಡಬೇಕಾಗುತ್ತದೆ ಅನ್ನೋದು ನಾವು ತಿಳಿದುಕೊಳ್ಳೋಣ.
ಸರ್ವ ಪಿತೃ ಅಮಾವಾಸ್ಯೆ ಎಂದೇ ಕರೆಯಲ್ಪಡುವ ಮಹದೇಯ ಅಮಾವಾಸ್ಯೆಯು ಹಿಂದೂ ಧರ್ಮದಲ್ಲಿ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಮಹತ್ವವನ್ನು ಹೊಂದಿದೆ ಪೂರ್ವಜರಿಗೆ ಮೋಕ್ಷ ನೀಡಲು ಹಾಗೂ ಪೂರ್ವದಿಂದ ಆಶೀರ್ವಾದವನ್ನು ಪಡೆಯಲು ಮಾಡುವ ಕರ್ಮಗಳಿಗೆ ಮುಹೂರ್ತ ಹಾಗೂ ಸಮಯವೂ ಕೂಡ ಬಹು ಮುಖ್ಯವಾಗಿದೆ.
ಈ ವರ್ಷ ಮಹಾಲಯ ಅಮಾವಾಸ್ಯೆ ಅಮಾವಾಸ್ಯೆ ತಿಥಿ ಆರಂಭ ಅಕ್ಟೋಬರ್ 1-2024 ರ ರಾತ್ರಿ 9.39ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 3 12:18ಕ್ಕೆ ಮುಕ್ತಾಯಗೊಳ್ಳುತ್ತದೆ,
ಕುಟುಪ್ ಮುಹೂರ್ತ 11:52am -12:39 Pm
ರೋಹಿಣಿ ಮೂರ್ತ 12: 39pm -01:26Pm
ಮಹಾಲಯ ಅಮಾವಾಸ್ಯೆ ಅಕ್ಟೋಬರ್ 2 ಬುಧವಾರ
ಈ ದಿನ ಚತುರ್ದಶಿ ಅಮಾವಾಸ್ಯೆ ಅಥವಾ ಪೌರ್ಣಿಮಾ ಸ್ಥಿತಿಯೆಂದು ಮರಣ ಹೊಂದಿದ ಹಿರಿಯವರಿಗೆ ತರ್ಪಣ ನೀಡಲಾಗುತ್ತದೆ.