
ಲಕ್ನೋ – ಮುಂದಿನ ಕೆಲವು ದಿನಗಳಲ್ಲಿ ಬರಲಿರುವ ಹಬ್ಬಗಳ ಹಿನ್ನೆಲೆಯಲ್ಲಿ ಯಾವುದೇ ಅವ್ಯವಸ್ಥೆ ಆಗದಂತೆ ಸದೃಢ ಕಾನೂನು ಮತ್ತು ಸುವ್ಯವಸ್ಥೆ, ಸೌಲಭ್ಯಗಳ ಕುರಿತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗುರುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು…!
ಈ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಅಗತ್ಯ ಸಲಹೆ, ನಿರ್ದೇಶನ ನೀಡಿದರು…!!
ಜೂನ್ 16 ರಂದು ಗಂಗಾ ದಸರಾ, ಜೂನ್ 17 ರಂದು ಬಕ್ರೀದ್, ಜೂನ್ 18 ರಂದು ಜ್ಯೇಷ್ಠ ಮಾಸದ ಮಂಗಲೋತ್ಸವ ಮತ್ತು ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಆಯೋಜಿಸಲಾಗುತ್ತದೆ…!
ಜುಲೈ ತಿಂಗಳಿನಲ್ಲಿ ಮೊಹರಂ ಮತ್ತು ಕನ್ವರ್ ಯಾತ್ರೆಯಂತಹ ಪವಿತ್ರ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದೆ…!!
ಈ ಎಲ್ಲಾ ಹಬ್ಬಗಳ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಈ ಅವಧಿಯು ಅತ್ಯಂತ ಸೂಕ್ಷ್ಮವಾಗಿದೆ…!
ಹೀಗಾಗಿ ಅಧಿಕಾರಿಗಳು 24×7 ಸಕ್ರಿಯ ಮೋಡ್ನಲ್ಲಿರಬೇಕು ಎಂದು ಸಿಎಂ ಆದಿತ್ಯನಾಥ್ ಹೇಳಿದರು…!!
ಬಕ್ರಿದ್ ದಿನದಂದು ಸಂಪ್ರದಾಯದಂತೆ ನಿಗದಿತ ಸ್ಥಳದಲ್ಲಿ ಮಾತ್ರ ನಮಾಜ್ ನಡೆಸಬೇಕು…!
ರಸ್ತೆಗಳನ್ನು ತಡೆದು ನಮಾಜ್ ನಡೆಸಬಾರದು…!!
ನಂಬಿಕೆಯನ್ನು ಗೌರವಿಸಿ ಆದರೆ ಯಾವುದೇ ಹೊಸ ಸಂಪ್ರದಾಯವನ್ನು ಪ್ರೋತ್ಸಾಹಿಸಬೇಡಿ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ…!