
ಉತ್ತರ ಪ್ರದೇಶ – ಒಂದು ಕಾಲದಲ್ಲಿ ಉತ್ತರ ಪ್ರದೇಶ ರಾಜ್ಯದಲ್ಲಿ ಪ್ರಬಲ ಪಕ್ಷವಾಗಿದ್ದ ಬಹುಜನ ಸಮಾಜವಾದಿ ಪಕ್ಷ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೇಳ ಹೆಸರಿಲ್ಲದ ಹಾಗೆ ಧೂಳಿಪಟವಾಗಿದೆ…!
ಎಷ್ಟೆಂದರೆ, ಉತ್ತರ ಪ್ರದೇಶದಲ್ಲಿ ಸ್ಪರ್ಧೆ ಮಾಡಿದ್ದ 79 ಕ್ಷೇತ್ರಗಳಲ್ಲಿಯೂ ಹೀನಾಯವಾಗಿ ಸೋತು ಮಕಾಡೆ ಮಲಗಿದೆ…!!
ದೇಶಾದ್ಯಂತ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿ ಎಸ್ ಪಿ 424 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು…!
ಒಂದರಲ್ಲೂ ಗೆಲುವು ಸಾಧಿಸಲಿಲ್ಲ, ಬಹುತೇಕ ಕಡೆ ಠೇವಣಿ ಸಹ ಬರಲಿಲ್ಲ…!!
2019 ರ ಲೋಕಸಭಾ ಚುನಾವಣೆಯಲ್ಲಿ ಶೇಕಡಾ 19 ರಷ್ಟು ಮತಗಳಿಕೆ ಪಡೆದು 10 ಸ್ಥಾನಗಳನ್ನು ಉತ್ತರಪ್ರದೇಶದಲ್ಲಿ ಬಿ ಎಸ್ ಪಿ ಗೆದ್ದಿತ್ತು, ಆದರೆ ಈ ಬಾರಿ ಒಂದೇ ಒಂದು ಸ್ಥಾನವನ್ನು ಕೂಡ ಗೆಲ್ಲಲು ಬಿ ಎಸ್ ಪಿ ಗೆ ಸಾಧ್ಯ ಆಗಲಿಲ್ಲ…!