
ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದ್ದು ಕರ್ನಾಟಕದ ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಮಳೆ ಆಗುತ್ತಿದೆ ಉಡುಪಿ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಉಡುಪಿ ಜಿಲ್ಲೆಯ ಬೈಂದೂರು ಬ್ರಹ್ಮವಾರ ಕುಂದಾಪುರ ತಾಲೂಕಿನಲ್ಲಿ ಬಾರಿ ಪ್ರಮಾಣದಲ್ಲಿ ಹಾನಿಯಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಜುಲೈ 5 ,6 ರಂದು ಜಿಲ್ಲಾಡಳಿತ ಶಾಲೆ ಕಾಲೇಜು ಕೂಡ ರಜೆ ನೀಡಿತ್ತು, ಆದರೆ ವರುಣ ಆರ್ಭಟ ಇಂದು ಕೂಡ ಮುಂದುವರಿದಿದೆ, ಸಮುದ್ರ ತೀರಕ್ಕೆ ಹೋಗದಂತೆ ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ ಆದರೂ ಪ್ರವಾಸಿಗರು ಹುಚ್ಚಾಟವನ್ನು ಮಾಡುತ್ತಿದ್ದಾರೆ , ಮರವಂತೆ ಕಡಲ ತೀರದ ಬಳಿ ಪ್ರವಾಸಿಗರು ಹುಚ್ಚಾಟ ಮಾಡುತ್ತಿದ್ದಾರೆ.
ಕಾರವಾರದ ಈಡೂರು , ಚೆಂಡಿಯಾ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ, ಐಸ್ ಪ್ಯಾಕ್ಟರಿಗೆ ಜಲದಿಕ್ ಬಂಧನ ಸಿಬ್ಬಂದಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ, ಇನ್ನು ನೂರಾರು ಎಕ್ರೆ ಕೃಷಿ ಭೂಮಿಗಳು, ಜಲಾವೃತಗೊಂಡಿದೆ, ಸೀಬರ್ಡ್ ನೌಕಾ ನೆಲೆಯ ಅವೈಜ್ಞಾನಿಕ ಕಾಮಗಾರಿಯಿಂದ ಈ ಸಮಸ್ಯೆ ಉಂಟಾಗಿದೆ ಎಂದು ಸಾರ್ವಜನಿಕರು ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.
ಇನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಅಂಕೋಲಾ ಕುಮಟಾ
ಹೊನ್ನಾವರ ಭಾಗದಲ್ಲಿ ನಿರಂತರವಾಗಿ ಮಳೆ ಆಗುತ್ತಿರುವ ಕಾರಣ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. , ಮೊನ್ನೆ ಸುರಿದ ಮಳೆಗೆ ಅಂಕೋಲದ, ಹೊನ್ನೆಬೈಲು ಪ್ರದೇಶದಲ್ಲಿ ಸುಮಾರು 20 ಮನೆಗಳು ಜಲಾವೃತಗೊಂಡಿತು. ಜಿಲ್ಲಾಡಳಿತ ಈಗಾಗಲೇ ಸಹಾಯವಾಣಿ ಕೇಂದ್ರವನ್ನ ತೆರೆದಿದೆ ಯಾವುದೇ ಸಮಯದಲ್ಲಿ ಸಮಸ್ಯೆಗಳಾದರು ಕರೆ ಮಾಡಬಹುದು.
ಇನ್ನೂ ಎರಡು ದಿನ ಮಳೆ ಮುಂದುವರಿಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ,