
ಧಾರ್ (ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಧಾರ್ ಜಿಲ್ಲೆಯ ಪಿತಂಪುರದಲ್ಲಿ ಹಿಂದೂ ಯುವತಿ ಹೋಟೆಲ್ ಕೊಠಡಿಯಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸೋಮವಾರ ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಮೂಲಕ ಈ ವಿಷಯ ಬೆಳಕಿಗೆ ಬಂದಿದೆ.
ಮಾಹಿತಿಯ ಪ್ರಕಾರ, ಮೃತ (24) ವರ್ಷದ ಹಿಂದೂ ಯುವತಿಯೆಂದು ತಿಳಿದು ಬಂದಿದೆ , ಆದರೆ ಹೋಟೆಲ್ ಕೋಣೆಯನ್ನು ಆಕೆಯ ಬುಕ್ ಮಾಡುವಾಗ ಪ್ರಿಯಕರ ಜುನೈದ್ ಮೊಹಮದ್ ಹೆಸರಿನಲ್ಲಿ ಕಾಯ್ದಿರಿಸಲಾಗಿದೆ.
ಘಟನೆಯ ದಿನದಂದು ಮೃತಪಟ್ಟ ಯುವತಿ ಜುನೈದ್ ಜೊತೆ ಹೋಟೆಲ್ ರೂಮಿನಲ್ಲಿ ವಾಸ್ತವ ಹೂಡಿದ್ದರೂ ಎಂದು ಹೇಳಲಾಗುತ್ತಿದೆ ಯುವತಿ ಮತ್ತು ಯುವಕ ಭಾನುವಾರ ಹೋಟೆಲ್ ರೂಮಿಗೆ ಬಂದಿದ್ದರು.
ಹೋಟೆಲ್ ಸಿಬ್ಬಂದಿಗೆ ಅನುಮಾನ ಬಂದ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಗಿಲು ಒಡೆದು ನೋಡಿದಾಗ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಜೊತೆಗೆ ಇದ್ದ ಮುಸ್ಲಿಂ ಯುವಕ ಮದುವೆ ಆಗಲು ನಿರಾಕರಿಸಿದ್ದಾನೆಂದು ಆತ್ಮಹತ್ಯೆ’ ಎಂದು ಪೊಲೀಸರು ಹೇಳುತ್ತಾರೆ.
ಸಿಎಸ್ಪಿ ಅಮಿತ್ ಕುಮಾರ್ ಮಿಶ್ರಾ ಪ್ರಕಾರ, ನೇಣು ಬಿಗಿದ ಶವದ ಬಗ್ಗೆ ಮಾಹಿತಿ ಸಿಕ್ಕಿದೆ. ಪೊಲೀಸ್ ಠಾಣೆ ಪ್ರಭಾರಿ ಸಂತೋಷ್ ಕುಮಾರ್ ದುಧಿ ಹೋಟೆಲ್ ಕೊಠಡಿ ತಲುಪಿದರು. ಪೊಲೀಸರು ಕೊಠಡಿಯ ಬಾಗಿಲು ಮುರಿದು ನೋಡಿದಾಗ 24 ವರ್ಷದ ಯುವತಿಯ ಶವ ಫ್ಯಾನ್ಗೆ ದುಪಟ್ಟಾ ಸಹಾಯದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹುಡುಗಿ ಜುನೈದ್ ಎಂಬ ಯುವಕನೊಂದಿಗೆ ಹೋಟೆಲ್ನಲ್ಲಿ ತಂಗಿದ್ದಳು ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ, ಯುವಕ ಮತ್ತು ಯುವತಿ ಮಹುಗಾಂವ್ ಜಿಲ್ಲೆಯ ಇಂದೋರ್ ನಿವಾಸಿಗಳು. ಹುಡುಗಿ ಹಿಂದೂ ಸಮುದಾಯಕ್ಕೆ ಸೇರಿದವಳು. ಮ್ಹೋವ್ನ ಕಾಲೇಜಿನಲ್ಲಿ ಒಟ್ಟಿಗೆ ಓದುತ್ತಿದ್ದ ಅವರು ಪ್ರೀತಿಸುತ್ತಿದ್ದರು. ಅವರು ಐದು ವರ್ಷಗಳಿಂದ ಸಂಬಂಧದಲ್ಲಿದ್ದರು.
ಜುನೈದ್ ಹುಡುಗಿಯನ್ನು ಲೈಂಗಿಕವಾಗಿ ಬಳಸಿಕೊಂಡು ಮದುವೆಯಾಗಲು ನಿರಾಕರಿಸಿದ್ದಾನೆ ಯುವತಿ ಜುನೈದ್ಗೆ ಮದುವೆಗೆ ಒತ್ತಡ ಹೇರುತ್ತಿದ್ದಳು ಎಂದು ಹೇಳಲಾಗುತ್ತಿದೆ; ಆದಾಗ್ಯೂ, ಜುನೈದ್ ಮದುವೆಯಾಗಲು ಸಿದ್ಧರಿರಲಿಲ್ಲ. ಜುನೈದ್ ವರ್ತನೆಯಿಂದ ಕೋಪಗೊಂಡ ಬಾಲಕಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎದ್ದು ಸ್ಥಳಿಯರು ಹೇಳುತ್ತಿದ್ದಾರೆ.
ಸದ್ಯ ಯುವತಿಯ ಜೊತೆಗಿದ್ದ ಯುವಕ ನಾಪತ್ತೆಯಾಗಿದ್ದಾನೆ ಯುವಕನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಇದು ಲವ್ ಜಿಹಾದ್ ಎಂದು ಹಿಂದೂ ಸಂಘಟನೆಗಳು ಆರೋಪಿಸಿದೆ.