
ಈ ತಿಂಗಳು ಆರಂಭದಿಂದ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು ಕೆಲವು ಭಾಗದಲ್ಲಿ ಹೆಚ್ಚು ಹಾಗೂ ಕೆಲವು ಭಾಗದಲ್ಲಿ ಸಾಧಾರಣ ಮಳೆಯಾಗಿತ್ತು. ಗುಡುಗು ಗಾಳಿ ಸಹಿತ ಭಾರಿ ಮಳೆ ಕೆಲವು ಜಿಲ್ಲೆಗಳಲ್ಲಿ ಆಗಿತ್ತು ಮಳೆರಾಯನ ಆರ್ಭಟಕ್ಕೆ ಜನಜೀವನವೂ ಕೂಡ ಅಸ್ತವ್ಯಸ್ತಗೊಂಡಿತ್ತು .
ಕಳೆದ ಬುಧವಾರ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೆಲವು ಭಾಗಗಳಲ್ಲಿ ಮಳೆ ಗಾಳಿಯ ಆರ್ಭಟಕ್ಕೆ ಮರಗಳು ಬಿದ್ದು ಸುಮಾರು ನೂರಕ್ಕೂ ಅಧಿಕ ವಿದ್ಯುತ್ ಕಂಬಗಳು ತುಂಡಾಗಿತ್ತು ಎರಡರಿಂದ ಮೂರು ದಿನ ಬೈಂದೂರಿನ ಭಾಗದಲ್ಲಿ ವಿದ್ಯುತ್ ಸಂಪರ್ಕ ಕೂಡ ಇರಲಿಲ್ಲ. ಮೆಸ್ಕಾಂ ಲೈನ್ ಮ್ಯಾನ್ ಹಾಗೂ ಅಧಿಕಾರಿಗಳು ಎಲ್ಲಾ ಸಿಬ್ಬಂದಿಗಳು ನಿರಂತರವಾಗಿ ಕೆಲಸ ಮಾಡಿ ಜನರಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಿದ್ದಾರೆ.
ಹಾಗೂ ಕೆಲವು ಜಿಲ್ಲೆಗಳಲ್ಲಿ ಸಿಡಿಲು ಗುಡಿಗೆಗೆ ಜೀವ ಹಾನಿಯೂ ಕೂಡ ಆಗಿದೆ.
ಹುಬ್ಬಳ್ಳಿ ಧಾರವಾಡ ಬೆಳಗಾವಿ ಕೊಡಗು ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಹಾನಿಯೂ ಕೂಡ ಆಗಿತ್ತು.
ಇಷ್ಟೊಂದು ಆರ್ಭಟಿಸಿದ ಮಳೆರಾಯ ಇದೀಗ ಒಂದೇ ಸಾರಿ ತಣ್ಣಗಾಗಿದ್ದಾನೆ ಮತ್ತೆ ಬಿಸಿಲಿನ ತಾಪ ಜನರಿಗೆ ತಟ್ಟುತಿದೆ.
ಆದರೆ ಇದೀಗ ಅವಮಾನ ಇಲಾಖೆ ಒಂದು ಮುನ್ಸೂಚನೆ ನೀಡಿದೆ
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು.
ಮೇ 31ರಿಂದ ಜೂನ್ 4 ರವರೆಗೆ ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿಯೂ ಉತ್ತಮ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಜೂನ್ ಮೊದಲ ವಾರದದಲ್ಲಿ ದಕ್ಷಿಣ ಕರಾವಳಿ ಉತ್ತಮ ಮಳೆಯಾಗಲಿದೆ. ಜೂನ್ 2ರ ನಂತರ ಉತ್ತರ ಕರಾವಳಿಯಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ನೀಡಿದೆ.