ನಾಗರ ಪಂಚಮಿ 2024: ಸನಾತನ ಹಿಂದೂ ಧರ್ಮದಲ್ಲಿ ನಾಗದೇವತೆಗಳಿಗೆ ವಿಶೇಷವಾದಂತಹ ಸ್ಥಾನವನ್ನು ನೀಡಲಾಗಿದೆ ಶ್ರೀ ಮಹಾವಿಷ್ಣು ಆದಿಶೇಷನ ಮೇಲೆ ಮಲಗಿರುತ್ತಾನೆ ಶಿವನು ತನ್ನ ಕಂಠಕ್ಕೆ ನೀಲಕಂಠನನ್ನು ಸುತ್ತಿಕೊಂಡಿದ್ದಾನೆ ಇನ್ನು ವಿಘ್ನೇಶ್ವರ ತನ್ನ ಹೊಟ್ಟೆಗೂ ಕೂಡ ಸರ್ಪವನ್ನು ಸುತ್ತಿಕೊಂಡಿದ್ದಾನೆ ಹಾಗೆ ಅನೇಕ ದೇವಾದಿ ದೇವತೆಗಳಲ್ಲಿಯೂ ಅವರ ಅವತಾರಗಳಲ್ಲಿಯೂ ಸರ್ಪಗಳ ಮಹತ್ವವನ್ನು ವಿವರಿಸಲಾಗಿದೆ.
ನಾಗ ಪಂಚಮಿ ಎಂದರೇನು?
‘ನಾಗ್’ ಎಂಬ ಪದದ ಅರ್ಥ ಸರ್ಪ/ಹಾವು/ಕೋಬ್ರಾ. ಪಂಚಮಿ ಎಂಬ ಪದವು ಚಂದ್ರನ ಚಕ್ರದಲ್ಲಿ ಬೆಳೆಯುತ್ತಿರುವ ಚಂದ್ರನ (ಶುಕ್ಲ ಪಕ್ಷ) ಅಥವಾ ಕ್ಷೀಣಿಸುತ್ತಿರುವ ಚಂದ್ರನ (ಕೃಷ್ಣ ಪಕ್ಷ) ಐದನೇ ದಿನ ಎಂದರ್ಥ, ಪ್ರತಿ ಹಂತವು 15 ದಿನಗಳವರೆಗೆ ಇರುತ್ತದೆ. ಇದು ಹಿಂದೂಗಳಿಂದ ಹಾವುಗಳನ್ನು (ನಿರ್ದಿಷ್ಟವಾಗಿ ನಾಗರಹಾವು) ಪೂಜಿಸುವ ವಿಶೇಷ ದಿನವಾಗಿದೆ.
ಪ್ರಕೃತಿ ಮತ್ತು ಪ್ರಾಣಿಗಳನ್ನು ಪೂಜಿಸುವುದು ಹಿಂದೂ ತತ್ವಶಾಸ್ತ್ರದ ಶಾಶ್ವತ ಭಾಗವಾಗಿದೆ. ಹಿಂದೂ ದೇವತೆಗಳು ಹೆಚ್ಚಾಗಿ ವಾಹನ ಅಥವಾ ವಾಹನವಾಗಿ ಪ್ರಾಣಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಈ ವಾಹನಗಳನ್ನು ಹಿಂದೂಗಳು ಗೌರವಿಸುತ್ತಾರೆ ಮತ್ತು ಪೂಜಿಸುತ್ತಾರೆ
ವೇದಾ ಉಪನಿಷತ್ ಪುರಾಣಗಳಲ್ಲಿಯೂ ಸರ್ಪಗಳ ಬಗ್ಗೆ ಹಾಗೂ ನಾಗದೇವತೆಗಳ ಬಗ್ಗೆ ಸಂಪೂರ್ಣವಾದ ವಿವರಣೆಯನ್ನು ನೀಡಲಾಗಿದೆ .
ಶ್ರಾವಣ ಮಾಸದ ಶುಕ್ಲ ಪಕ್ಷ ಪಂಚಮಿಯನ್ನು ನಾಗ ಪಂಚಮಿ ಎಂದು ಆಚರಿಸಲಾಗುತ್ತದೆ ಈ ವರ್ಷ ನಾಗರ ಪಂಚಮಿ ಆಗಸ್ಟ್ 9 ಶುಕ್ರವಾರ ಬಂದಿದೆ.
ನಾಗರ ಪಂಚಮಿ ದಿನದಂದು ನಾಗದೇವತೆಗಳ ವಿಶೇಷ ಆರಾಧನೆಗಳು ಮಾಡಲಾಗುತ್ತದೆ ಇದರ ಹಿಂದೆ ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಕಾರಣಗಳು ಕೂಡ ಇವೆ ಕೃಷಿಯ ಒಡೆಯ ನಾಗನೆಂದು ಹೇಳುತ್ತಾರೆ ಇದು ಹೇಗೆ ಎಂದರೆ ಕೃಷಿ ಗದ್ದೆಗಳಿಗೆ ಕೀಟಗಳಿಂದ ಹಾನಿಯಾಗುತ್ತದೆ ಹಾಗಾಗಿ ಸರ್ಪಗಳು ಕೀಟಗಳನ್ನು ನಾಶ ಮಾಡಿ ಕೃಷಿಯನ್ನು ಸಂರಕ್ಷಣೆ ಮಾಡುತ್ತವೆ ಇದರ ಕೃತಜ್ಞತೆ ಗೋಸ್ಕರ ನಾಗರ ಪಂಚಮಿಯ ದಿನದಂದು ಸರ್ಪಗಳಿಗೆ ಹಾಲುಗಳನ್ನ ಅಭಿಷೇಕ ಮಾಡಲಾಗುತ್ತದೆ.
ಹಾವುಗಳಿಗೆ ಸಲ್ಲಿಸುವ ಯಾವುದೇ ಪೂಜೆಯು ನಾಗದೇವತೆಗಳನ್ನು ತಲುಪುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಜನರು ಹಿಂದೂ ಧರ್ಮದಲ್ಲಿ ಪೂಜಿಸಲ್ಪಡುವ ಮತ್ತು ಪೂಜಿಸುವ ನಾಗದೇವತೆಗಳ ಪ್ರತಿನಿಧಿಯಾಗಿ ಈ ದಿನದಂದು ಜೀವಂತ ಹಾವುಗಳು ಇರುವ ಹುತ್ತಕ್ಕೆ ಪೂಜಿ ಸಲ್ಲಿಸುತ್ತಾರೆ ಹಲವಾರು ಸರ್ಪ ದೇವರುಗಳಿದ್ದರೂ, ನಾಗ ಪಂಚಮಿ ಪೂಜೆಯ ಸಮಯದಲ್ಲಿ ಕೆಳಗಿನ ಹನ್ನೆರಡು ದೇವರುಗಳನ್ನು ಪ್ರಧಾನವಾಗಿ ಪೂಜಿಸಲಾಗುತ್ತದೆ –
1.ಅನಂತ
2.ವಾಸುಕಿ
3.ಶೇಷ
4.ಪದ್ಮಾ
5.ಕಂಬಳ
6.ಕಾರ್ಕೋಟಕ
7.ಅಶ್ವತಾರ
8.ಧೃತರಾಷ್ಟ್ರ
9.ಶಂಖಪಾಲ
10.ಕಲಿಯಾ
11.ತಕ್ಷಕ
12.ಪಿಂಗಲ
ನಾಗ ಪಂಚಮಿ ಪೂಜೆ ಮಂತ್ರ
ಸರ್ವೇ ನಾಗಾಃ ಪ್ರಿಯನ್ತಾಂ ಮೇ ಯೇ ಕೇಚಿತ್ ಪೃಥ್ವೀತಲೇ ।
ಯೇ ಚ ಹೇಳಿಮರೀಚಿಸ್ಥಾ ಯೇನ್ತರೇ ದಿವಿ ಸಂಸ್ಥಿತಾಃ॥
ಯೇ ನದೀಷು ಮಹಾನಾಗಾ ಯೇ ಸರಸ್ವತಿಗಾಮಿನಃ ।
ಯೇ ಚ ವಾಪೀತಡಗೇಷು ತೇಷು ಸರ್ವೇಷು ವೈ ನಮಃ॥
ಮಂತ್ರದ ಅರ್ಥ – ಈ ಲೋಕದಲ್ಲಿ ನೆಲೆಸಿರುವ ಹಾವುಗಳು, ಆಕಾಶ, ಸ್ವರ್ಗ, ಸೂರ್ಯ ಕಿರಣಗಳು, ಸರೋವರಗಳು, ಬಾವಿಗಳು, ಕೊಳಗಳು ಇತ್ಯಾದಿಗಳು ನಮ್ಮನ್ನು ಆಶೀರ್ವದಿಸಲಿ ಮತ್ತು ನಾವೆಲ್ಲರೂ ಅವರಿಗೆ ನಮಸ್ಕರಿಸುತ್ತೇವೆ.
ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್ ।
ಶಂಖ ಪಾಲಂ ಧೃತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ॥
ಏತಾನಿ ನವ ನಾಮಾನಿ ನಾಗಾನಾಂ ಚ ಮಹಾತ್ಮನಾಮ್ ।
ಸಾಯಂಕಾಲೇ ಪಾಠೇನ್ನಿತ್ಯಂ ಪ್ರಾತಃಕಾಲೇ ವಿಶೇಷತಃ ।
ತಸ್ಯ ವಿಷಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್॥
ಮಂತ್ರದ ಅರ್ಥ – ಒಂಬತ್ತು ನಾಗದೇವತೆಗಳ ಹೆಸರುಗಳು ಅನಂತ, ವಾಸುಕಿ, ಶೇಷ, ಪದ್ಮನಾಭ, ಕಂಬಳ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಳಿಯ. ಪ್ರತಿದಿನ ಬೆಳಿಗ್ಗೆ ನಿಯಮಿತವಾಗಿ ಜಪ ಮಾಡಿದರೆ, ಎಲ್ಲಾ ದುಷ್ಟರಿಂದ ನಿಮ್ಮನ್ನು ರಕ್ಷಿಸುತ್ತದೆ ಮತ್ತು ಜೀವನದಲ್ಲಿ ನಿಮ್ಮನ್ನು ವಿಜಯಶಾಲಿಯಾಗಿಸುತ್ತದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಾಗರ ಪಂಚಮಿಯನ್ನು ವಿಶೇಷವಾದ ಹಬ್ಬವೆಂದು ಆಚರಿಸಲಾಗುತ್ತದೆ ನಾಗಬನದಲ್ಲಿ ವಿಶೇಷ ಪೂಜೆ ಹಾಗೂ ನಾಗದರ್ಶನ ಆಶ್ಲೇಷ ಬಲಿ ಅಂತಹ ಧಾರ್ಮಿಕ ಕಾರ್ಯಗಳನ್ನು ಭಕ್ತರು ನೆರವೇರಿಸುತ್ತಾರೆ
ಸಾಮಾನ್ಯವಾಗಿ ನಾಗ ಪಂಚಮಿ ಉತ್ತರ ಕರ್ನಾಟಕ ಭಾಗದಲ್ಲಿ ನಾಗರ ಪಂಚಮಿಯ ದಿನ ಒಂದು ಸಡಗರದ ಹಬ್ಬದ ರೀತಿ ಮಾಡುತ್ತಾರೆ ಮತ್ತು ಹಾವುಗಳಿಗೆ ಹಾಲನ್ನು ಅರ್ಪಿಸುತ್ತಾರೆ. ಮಹಿಳೆಯರು ತಮ್ಮ ಸಹೋದರರು ಮತ್ತು ಕುಟುಂಬದ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ.
ನಾಗ ಚತುರ್ಥಿ
ಕೆಲವರು ನಾಗಪಂಚಮಿಗೆ ಒಂದು ದಿನ ಮೊದಲು ಉಪವಾಸ ಮಾಡುತ್ತಾರೆ ಮತ್ತು ನಾಗಪಂಚಮಿಯ ಹಿಂದಿನ ದಿನವನ್ನು ನಾಗ ಚತುರ್ಥಿ ಅಥವಾ ನಾಗುಲ ಚವಿತಿ ಎಂದು ಕರೆಯಲಾಗುತ್ತದೆ. ಆಂಧ್ರಪ್ರದೇಶದಲ್ಲಿ ನಾಗ ಚತುರ್ಥಿ ಅಥವಾ ನಾಗುಲ್ ಚವಿತಿಯನ್ನು ದೀಪಾವಳಿಯ ನಂತರ ಆಚರಿಸಲಾಗುತ್ತದೆ ಮತ್ತು ತಮಿಳುನಾಡಿನಲ್ಲಿ ಆರು ದಿನಗಳ ಕಾಲ ನಡೆಯುವ ಸೂರ ಸಂಹಾರದ ಹಬ್ಬದೊಂದಿಗೆ ಸೇರಿಕೊಳ್ಳುತ್ತದೆ.
ಇನ್ನೂ ನಾಗರ ಪಂಚಮಿ ದಿನದಂದು ಉಪವಾಸ ಮಾಡುವುದು ವ್ರತ ಮಾಡುವುದು ಪ್ರಾಚೀನ ಕಾಲದಿಂದ ನಡೆದು ಬಂದ ಸಂಪ್ರದಾಯವಾಗಿದೆ .
ಹಾಗೆ ನಾಗರ ಪಂಚಮಿ ದಿನದಂದು ಎಣ್ಣೆಯಲ್ಲಿ ಕರೆಯುವುದು ಭೂಮಿಯ ಕೆಲಸ ಮಾಡೋದು ಕೃಷಿ ಚಟುವಟಿಗಳಿಗೆ ನಿಷೇಧವಾಗಿದೆ.
ನಾಗದೇವತೆಗಳು ಯಾರು.?
ಋಷಿ ಕಶ್ಯಪರ 13 ಜನ ಪತ್ನಿಯರಲ್ಲಿ ಕದ್ರೂ ಕೂಡ ಒಬ್ಬರು ಋಷಿ ಕಶ್ಯಪರಿಗೂ ಹಾಗೂ ಕದ್ರುಗೆ ಜನಿಸಿದ ಮಕ್ಕಳೇ ಸರ್ಪಗಳು ಬ್ರಹ್ಮನಿಂದ ಸರ್ಪಗಳಿಗೆ ವರವು ಹಾಗೂ ಶಾಪವು ಅನ್ನುವಂತೆ ಹಲ್ಲುಗಳಲ್ಲಿ ವಿಷವನ್ನು ಬ್ರಹ್ಮ ನೀಡಿದ್ದಾರೆ.
ಸರ್ಪಗಳಿಗೆ ತೊಂದರೆ ನೀಡಿದವರಿಗೆ ಅಪಚಾರ ಮಾಡಿದವರಿಗೆ ಜನ್ಮ ಜನ್ಮಗಳ ತನಕ ಕಾಡುತ್ತದೆ ಸರ್ಪದೋಷಗಳು.
ಇನ್ನು ಸರ್ಪಗಳಿಗೆ ಶರಣಾಗಿ ಭಕ್ತಿ ಭಾವದಿಂದ ಪೂಜಿಸಿದವರಿಗೆ ಆನಂದ ಪ್ರಾಪ್ತಿ ನೀಡುತ್ತಾರೆ ಸರ್ಪದೇವತೆಗಳು.
ನಾಗ ಪಂಚಮಿ ಮಂತ್ರ
ವಾಸುಕಿ: ತಕ್ಷಶೈವ ಕಲಿಯೋ ಮಣಿಭದ್ರಕ: |
ಐರಾವತೋ ಧೃತರಾಷ್ಟ್ರ: ಕಾರ್ಕೋಟಕಧನಂಜಯ್. ಏತೇಭಯಂ ಪ್ರಯಚ್ಛನ್ತಿ ಪ್ರಾಣಿನಾಂ ಪ್ರಾಣಜೀವಿನಾಮ್ |
ಭವಿಷ್ಯತ್ತರ ಪುರಾಣ-32-2-71
(ಅರ್ಥ. ವಾಸುಕಿ ತಕ್ಷಕ, ಕಾಳಿಯ, ಮಣಿಭದ್ರಕ, ಐರಾವತ, ಧೃತರಾಷ್ಟ್ರ, ಕಾರ್ಕೋಟಕ ಮತ್ತು ಧನಂಜಯ – ಇವು ಜೀವಿಗಳಿಗೆ ನಿರ್ಭಯತೆಯನ್ನು ನೀಡುತ್ತವೆ.) ಇವು ಪೂಜ್ಯರಿ ಹಾವುಗಳು.
ಸರ್ವೇ ನಾಗಾಃ ಪ್ರಿಯಾಂ ಮೇ ಯೇ ಕೇಚಿತ್ ಪೃಥ್ವಿತಲೇ | ಯೇ ಚ ಹೇಳಿಮರೀಚಿಸ್ಕಾ ಯೇನ್ತರೇ ದಿವಿ ಸಂಸ್ಥಿತಾ।।। ಯೇ ನದೀಷು ಮಹಾನಾಗಾ ಯೇ ಸರಸ್ವತಿಗಾಮಿನಃ | ಯೇ ಚ ವಾಪೀತಡಗೇಷು ತೇಷು ನರ್ವೇಷು ವೈ ನಮಃ||
ನರ್ವೇ ನಾಗ ಪ್ರೀಯಂತ ಮೇ ಯೇ ಕೇಚಿತ್ ಪೃಥ್ವಿ ತಲೇ ಯೇ ಚ ಹೇಳೀಮರೀಚಿಸ್ಥಾ ಯೇಂತರೇ ದಿವಿ ಸಂಸ್ಥಿತಾಃ। ಯೇ. ನದೀಷು ಮಹಾನಾಗ ಯೇ ಸರಸ್ವತಿಗಾಮಿನಃ ಯೇ ಚ ವಾಪೀತಾದ್ದೇಷು ತೇಷು ಸರ್ವೇಷು ನಾಯೇ ನಮಃ|||
ಮಂತ್ರದ ಅರ್ಥ. ಈ ಲೋಕದಲ್ಲಿ ನೆಲೆಸಿರುವ ಎಲ್ಲಾ ಹಾವುಗಳು, ಆಕಾಶ ಸ್ವರ್ಗ, ಸೂರ್ಯಕಿರಣಗಳು ನರೋವರಗಳು, ಬಾವಿಗಳು, ಕೊಳಗಳು ಮುಂತಾದವುಗಳು ನಮ್ಮನ್ನು ಆಶೀರ್ವದಿಸುತ್ತವೆ. ನಾವೆಲ್ಲರೂ ನಿಮಗೆ ನಮಸ್ಕರಿಸುತ್ತೇವೆ