
ಲಕ್ನೋ – ಬಕ್ರಿದ್ ವೇಳೆ ನಿಗದಿತ ಸ್ಥಳಗಳಲ್ಲಿ ಮಾತ್ರವೇ ನಮಾಜ್ ಮಾಡಬೇಕು…!
ಇದನ್ನು ಬಿಟ್ಟು ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡಿದರೆ ಹುಷಾರ್ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಎಚ್ಚರಿಕೆ ಕೊಟ್ಟಿದ್ದರು…!
ಯೋಗಿ ವಾರ್ನಿಂಗ್ ಕೊನೆಗೂ ಫಲ ಕೊಟ್ಟಿದೆ…!!
ಸೋಮವಾರ ಬಕ್ರಿದ್ ಸಂದರ್ಭದಲ್ಲಿ ರಾಜ್ಯದಾದ್ಯಂತ ಸಂಚಾರಕ್ಕೆ ಅಡ್ಡಿಯಾಗದಂತೆ ಗೊತ್ತುಪಡಿಸಿದ ಪ್ರದೇಶಗಳಲ್ಲಿ ಮಾತ್ರ ಈದ್ ಪ್ರಾರ್ಥನೆ ನಡೆದಿದೆ…!
ಮುಸ್ಲಿಂ ಧಾರ್ಮಿಕ ಮುಖಂಡರು ಮುಖ್ಯಮಂತ್ರಿಯ ಸೂಚನೆಯನ್ನು ಬೆಂಬಲಿಸಿದ್ದಾರೆ…!!
ಈದ್ ಪ್ರಾರ್ಥನೆಗಳನ್ನು ವಿಶೇಷವಾಗಿ ಗೊತ್ತುಪಡಿಸಿದ ಈದ್ಗಾಗಳು ಮತ್ತು ಇತರ ಸಾಂಪ್ರದಾಯಿಕ ಸ್ಥಳಗಳಲ್ಲಿ ಮಾತ್ರ ನಡೆಸಲಾಯಿತು…!!
ಈ ಹಿಂದೆ ರಾಜ್ಯದ ಹಲವು ನಗರಗಳಲ್ಲಿ ಲಕ್ಷಾಂತರ ಜನರು ರಸ್ತೆ ಮತ್ತಿತರ ಕಡೆ ನಮಾಜ್ ಮಾಡಿ ಸಂಚಾರಕ್ಕೆ ತೊಂದರೆಯಾಗುತ್ತಿತ್ತು…!
ಆದರೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕರೆಯಿಂದಾಗಿ ದೇಶದಾದ್ಯಂತ ಹೊಸ ಸಂದೇಶ ರವಾನೆಯಾಗುತ್ತಿದ್ದು, ರಾಜ್ಯದ ಪ್ರತಿಯೊಂದು ಜಿಲ್ಲೆಯ ಮಸೀದಿಗಳು ಮತ್ತು ಈದ್ಗಾಗಳಲ್ಲಿ ಶಾಂತಿಯುತವಾಗಿ ನಮಾಜ್ ಮಾಡಲಾಯಿತು…!!