
ನವಿ ಮುಂಬೈ: ನವಿ ಮುಂಬಯಿಯಲ್ಲಿ ಜನನಾಂಗ, ಎದೆಯ ಭಾಗ ಸೇರಿ ಖಾಸಗಿ ಅಂಗಗಳಿಗೆ ಹಿಂದೂ ಯುವತಿಯನ್ನು ಚಾಕುವಿನಿಂದ ಇರಿದು ಕೊಂದು ಶವವನ್ನು ನವಿ ಮುಂಬೈನ ಉರಾನ್ ಪ್ರದೇಶದಲ್ಲಿ ರಸ್ತೆಬದಿಯಲ್ಲಿ ಎಸೆದಿದ್ದ ದಾವೂದ್ ಶೇಖ್ನನ್ನು ಮಹಾರಾಷ್ಟ್ರ ಅಪರಾಧ ವಿಭಾಗದ ಪೊಲೀಸರು ಕರ್ನಾಟಕದಲ್ಲಿ ಮಂಗಳವಾರ ಬಂಧಿಸಿದ್ದಾರೆ.
20 ವರ್ಷದ ಬೇಲಾಪುರದ ಹಿಂದೂ ಯುವತಿಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ದಾವೂದ್ ಎಂ ಶೇಖ್ ನ ಚಲನ ವಲನ ಪತ್ತೆ ಹಚ್ಚಿದ ಮುಂಬೈ ಪೊಲೀಸರು ಕರ್ನಾಟಕದ ಕಲಬುರಗಿಯಲ್ಲಿ ಬಂಧಿಸಿದ್ದಾರೆ.
ಇಡೀ ಮುಂಬೈಯನ್ನು ಒಂದು ಕ್ಷಣ ನಡುಗಿಸಿದ ಉರಾನ್ ಹತ್ಯೆ ಪ್ರಕರಣದಲ್ಲಿ ಶಂಕಿತ ಆರೋಪಿ ದಾವೂದ್ ಶೇಖ್ ನನ್ನು ವಶಕ್ಕೆ ಪಡೆಯಲಾಗಿದೆ ಎಂದು ನವಿ ಮುಂಬೈ ಹೆಚ್ಚುವರಿ ಪೊಲೀಸ್ ಆಯುಕ್ತ ದೀಪಕ್ ಸಾಕೋರೆ ತಿಳಿಸಿದ್ದಾರೆ.
ದಾವೂದ್ನನ್ನು ಹಿಡಿಯಲು ಪೊಲೀಸರು ಎಂಟು ತಂಡಗಳನ್ನು ರಚಿಸಿದ್ದರು.
ಕ್ರೈಂ ಬ್ರಾಂಚ್ ಅಧಿಕಾರಿ ಒಬ್ಬರು ಹೇಳಿರುವಂತೆ, ಆರೋಪಿ ದಾವೂದ್ ಯಶಸ್ರಿ ಶಿಂಧೆ ಅವರನ್ನು ಕೆಲವು ವರ್ಷಗಳ ಹಿಂದೆ ಪ್ರೀತಿಸುತಿದ್ದಾನಂತೆ ಆದರೆ ಕೊಲೆಯಾದ ಯುವತಿ ತಿರಸ್ಕರಿಸಿದ್ದರಿಂದ ಮತ್ತು ಆಕೆಗೆ ಇನ್ನೊಬ್ಬ ಯುವಕನೊಂದಿಗೆ ಸಂಬಂಧವಿದೆ ಎಂದು ಶಂಕಿಸಿದ್ದರಿಂದ ತಾನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಜುಲೈ 25ರಂದು ಯಶಶ್ರಿ ತನ್ನ ಸ್ನೇಹಿತನನ್ನು ಭೇಟಿಯಾಗಲು ಬೇಲಾಪುರದಿಂದ ಬಂದಿದ್ದಳು. ಆದರೆ ರಾತ್ರಿಯಾದರೂ ಮಗಳು ಮನೆಗೆ ಬಾರದಿದ್ದನ್ನು ಕಂಡ ಪೋಷಕರು ಪೊಲೀಸ್ ಠಾಣೆಯಲ್ಲಿ ಯಶಶ್ರೀ ನಾಪತ್ತೆಯಾಗಿರುವ ಬಗ್ಗೆ ಆಕೆಯ ತಂದೆ ಗುರುವಾರ ತಡರಾತ್ರಿ ದೂರು ದಾಖಲಿಸಿದ್ದರು. ಶುಕ್ರವಾರ ಸಂಜೆ ಉರಾನ್ ತಾಲೂಕಿನ ಕೊಟ್ನಾಕಾದ ಪೆಟ್ರೋಲ್ ಪಂಪ್ ಬಳಿಯ ರಸ್ತೆಯ ಬಳಿಯ ಉದಯ ಹತ್ತಿರ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ರಕ್ತದ ಮಡವಿನಲ್ಲಿ ಆಕೆ ಬಿದ್ದಿದ್ದಳು ಹಾಗೆ ಬೀದಿ ನಾಯಿಗಳು ಆಕೆಯ ದೇಹವನ್ನು ಕಚ್ಚಿ ತಿನ್ನುತ್ತಿರುವ ದೃಶ್ಯವನ್ನು ಪಾದಾಚಾರಿ ಒಬ್ಬರು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ ಪೊಲೀಸರು ತಿಳಿಸಿದ ಮಾಹಿತಿಯಂತೆ ಆಕೆಯ ಸೊಂಟ ಮತ್ತು ಬೆನ್ನಿನ ಮೇಲೆ ಅನೇಕ ಇರಿತದ ಗಾಯಗಳಿಂದಾಗಿ ಆಕೆಯ ಖಾಸಗಿ ಅಂಗಗಳಿಗೆ ಚಾಕುವಿನಿಂದ ಹಿರಿಯಲಾಗಿದೆ ಹಾಗೆ ಭೀಕರವಾಗಿ ಈ ಹತ್ಯೆ ನಡೆದಿದೆ ಎಂದು ಹೇಳಿದರು.
ಇದೀಗ ಆರೋಪಿಯನ್ನು ಬಂಧಿಸಿದ ಪೊಲೀಸರು ಕಲಬುರಗಿಯ ಶಹಾಪುರ ಬೆಟ್ಟ ಪ್ರದೇಶದಿಂದ ತಂಡ ಆರೋಪಿಯನ್ನು ವಶಕ್ಕೆ ಪಡೆದಿದೆ. ಇದೀಗ ಪೊಲೀಸರು ಆರೋಪಿಯನ್ನು ಮುಂಬೈಗೆ ಕರೆತರುತ್ತಿದ್ದಾರೆ ಎಂದು ಸಾಕೋರೆ ತಿಳಿಸಿದ್ದಾರೆ.
2019ರಲ್ಲಿ ಯಶಶ್ರೀಯ ಬಗ್ಗೆ ತಿಳಿದಿದ್ದ ಶೇಖ್ ತನ್ನೊಂದಿಗೆ ಸ್ನೇಹ ಬೆಳೆಸುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಆತನ ವಿರುದ್ಧ ಸಂತ್ರಸ್ತೆಯ ತಂದೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಅನಂತರ ಬಂಧಿಸಲಾಗಿತ್ತು. ಸುಮಾರು ಆರು ತಿಂಗಳು ಜೈಲಿನಲ್ಲಿದ್ದ ಶೇಖ್ ಬಿಡುಗಡೆಯಾದ ಬಳಿಕ ತನ್ನ ಕರ್ನಾಟಕಕ್ಕೆ ಬಂದು ಡ್ರೈವರ್ ಕೆಲಸ ಮಾಡಿಕೊಂಡಿದ್ದನು.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಸಂಸದ ಕಿರೀಟ್ ಸೋಮಯ್ಯ ಹತ್ಯೆಗೀಡಾದವರ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಅಲ್ಲದೆ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನನ್ನು ಒತ್ತಾಯಿಸಿದ್ದಾರೆ. ಎಕ್ಸ್ ನಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಟ್ಯಾಗ್ ಮಾಡಿದ ಸೋಮಯ್ಯ, ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಬೇಕು ಎಂದು ಹೇಳಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯನ್ನು ಸೇರಿಸಬೇಕು ಎಂದು ಸೋಮಯ್ಯ ತಮ್ಮ ಮಾಜಿ ಪೋಸ್ಟ್ನಲ್ಲಿ ಹೇಳಿದ್ದಾರೆ.