
ದೇಶದಲ್ಲಿ 7 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು ಈಗಾಗಲೇ ಲೋಕಸಭಾ ಚುನಾವಣೆ 4ನೇ ಹಂತ ಮುಗಿದಿದೆ ಬಿಜೆಪಿ NDA ಮೈತ್ರಿ ಕೂಟ 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲುವ ಉತ್ಸಾಹದಲ್ಲಿದ್ದರೆ ಇತ್ತ ಕಾಂಗ್ರೆಸ್ I.N.D.I.A ಮೈತ್ರಿ ಕೂಟ ಈ ಬಾರಿ ಅಧಿಕಾರ ಹಿಡಿಯುತ್ತೇವೆ ಎನ್ನುವ ಭರವಸೆಯಲ್ಲಿದ್ದಾರೆ.
ಲಕ್ನೋ – ದೇಶಾದ್ಯಂತ ಬಿಜೆಪಿ ವಿರೋಧಿ ಅಲೆ ಇದೆ, ಬಿಜೆಪಿಯ ಜನವಿರೋಧಿ ನೀತಿಗಳಿಂದ ಜನ ಬೇಸತ್ತು ಹೋಗಿದ್ದಾರೆ, NDA ಮೈತ್ರಿಕೂಟ ಈ ಬಾರಿ 200 ಲೋಕಸಭಾ ಸ್ಥಾನಗಳನ್ನು ಗೆದ್ದರೆ ಹೆಚ್ಚು, I.N.D.I.A ಮೈತ್ರಿ ಕೂಟ 300 ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು…!
ಉತ್ತರ ಪ್ರದೇಶದ ಲಖ್ನೋ ದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು I.N.D.I.A ಮೈತ್ರಿಕೂಟ ಚುನಾವಣೆಯಲ್ಲಿ ಗೆದ್ದ ನಂತರ ಸರ್ಕಾರ ರಚನೆ ಮಾಡಲು ಪ್ರಧಾನಿ ಆಯ್ಕೆಗೆ ಒಟ್ಟಾರೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು…!
ಇದೇ ವೇಳೆ ಭಾರತೀಯ ಜನತಾ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಡಿಕೆ ಶಿವಕುಮಾರ್, “ಬಿಜೆಪಿ ಈ ಬಗ್ಗೆ ಮೊದಲು ಭಾರತದ ಜನರಿಗೆ ಉತ್ತರಿಸಬೇಕಾಗಿದೆ: ತಾನು ಮರಳಿ ತರಬೇಕಾಗಿದ್ದ ಕಪ್ಪುಹಣ ಎಲ್ಲಿದೆ? ಬಿಜೆಪಿ ಭರವಸೆ ನೀಡಿದಂತೆ ರೈತರ ಆದಾಯವನ್ನು ಏಕೆ ದ್ವಿಗುಣಗೊಳಿಸಿಲ್ಲ…? ನಮ್ಮ ಯುವಕರಿಗೆ ಭರವಸೆ ನೀಡಿದ 2 ಕೋಟಿ ಉದ್ಯೋಗಗಳು ಎಲ್ಲಿ? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು…!