
ಕಠ್ಮಂಡು (ನೇಪಾಳ) – ನೇಪಾಳದ ರೌತಹಾಟ ಎಂಬ ಜಿಲ್ಲೆಯಲ್ಲಿ ಒಂದು ವಾರದ ಹಿಂದೆ ಮುಸ್ಲಿಮರು ಒಂದು ಗ್ರಾಮಕ್ಕೆ ‘ಇಸ್ಲಾಂನಗರ’ ಎಂದು ಹೆಸರಿಸಿದ ನಂತರ ಉದ್ವಿಗ್ನತೆ, ಘರ್ಷಣೆ ಉಂಟಾಗಿದೆ…!
ಈ ಹೆಸರಿನ ಫಲಕವನ್ನು ಸಹ ಸ್ಥಾಪಿಸಲಾಗಿದೆ…!!
ಈ ಘಟನೆಯ ಮಾಹಿತಿಯನ್ನು ತಿಳಿದ ಕೂಡಲೇ ಹಿಂದೂಗಳು ಇದನ್ನು ವಿರೋಧಿಸಿ ನಾಮಫಲಕವನ್ನು ತೆಗೆದರು…!
ಇದರಿಂದಾಗಿ ಮುಸ್ಲಿಮರು ಕೆಲವು ಹಿಂದೂ ಯುವಕರನ್ನು ಥಳಿಸಿದ್ದಾರೆ…!!
ಈ ಮಾಹಿತಿ ಸಿಗುತ್ತಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ…!
ರೌತಹಾಟ ಜಿಲ್ಲೆಯ ಗರುಡ್ ಪುರಸಭೆಯ ವಾರ್ಡ್ ಸಂಖ್ಯೆ 6 ರ ಪೊಥ್ಯಾಹಿ ಗ್ರಾಮದ ಒಂದು ವೃತ್ತದಲ್ಲಿ ಮುಸ್ಲಿಮರು ‘ಇಸ್ಲಾಂನಗರ’ ಎಂಬ ನಾಮಫಲಕವನ್ನು ಹಾಕಿದ್ದರು…!
ಈ ಫಲಕಕ್ಕೆ ಹಸಿರು ಬಣ್ಣ ನೀಡಲಾಗಿತ್ತು…!!
ಅದರ ಮೇಲೆ ಅರೇಬಿಕ್ ಮತ್ತು ಉರ್ದು ಭಾಷೆಗಳಲ್ಲಿ ಅನೇಕ ಪದಗಳನ್ನು ಬರೆಯಲಾಗಿತ್ತು…!
ಫಲಕದ ಎರಡೂ ಬದಿಗಳಲ್ಲಿ ಇಸ್ಲಾಮಿಕ್ ಪ್ರಾರ್ಥನಾ ಸ್ಥಳಗಳ ಚಿತ್ರಗಳನ್ನು ಸಹ ಚಿತ್ರಿಸಲಾಗಿತ್ತು…!!
ಇಲ್ಲಿ ನಿಂತು ಮುಸ್ಲಿಂ ವೃದ್ಧರೊಬ್ಬರು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ…!
ಅದರ ನಂತರ ಸ್ಥಳೀಯ ಮುಸ್ಲಿಮರು ಈ ಗ್ರಾಮವನ್ನು ‘ಇಸ್ಲಾಂನಗರ’ ಎಂದು ಕರೆಯಲು ಪ್ರಾರಂಭಿಸಿದರು…!!
ಗ್ರಾಮದಲ್ಲಿ ಕೇವಲ ಶೇಕಡಾ 4ರಷ್ಟು ಮುಸ್ಲಿಮರು
ನೇಪಾಳದ ಹಿಂದೂ ಸಾಮ್ರಾಟ್ ಸೇನಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ರಾಜೇಶ್ ಯಾದವ್ ಇವರು ಸುದ್ದಿವಾಹಿನಿಯೊಂದಕ್ಕೆ ಈ ಬಗ್ಗೆ ಹೇಳುತ್ತಾ, ಪೋಥ್ಯಾಹಿ ಗ್ರಾಮದಲ್ಲಿ ಕೇವಲ 10 ಮುಸ್ಲಿಮರ ಮನೆಗಳಿವೆ, ಇದು ಗ್ರಾಮದ ಒಟ್ಟು ಜನಸಂಖ್ಯೆಯ ಶೇಕಡಾ 4 ರಷ್ಟು ಮಾತ್ರ ಇದೆ ಎಂದರು…!
ಹೀಗಿರುವಾಗ ಸಂಪೂರ್ಣ ಪೊಥ್ಯಹಿ ಗ್ರಾಮದ ಹೆಸರು ಬದಲಾಯಿಸುವ ಸಂಚು ರೂಪಿಸಲಾಗಿತ್ತು…!
ಜೂನ್ 23 ರಂದು ಹಿಂದೂ ಸಾಮ್ರಾಟ್ ಸೇನೆಯ ಸದಸ್ಯರು ಸ್ಥಳೀಯ ನಾಗರಿಕರೊಂದಿಗೆ ಇಸ್ಲಾಂನಗರದಲ್ಲಿ ಫಲಕವನ್ನು ತೆಗೆದುಹಾಕಿದರು…!!
ಆ ಸಮಯದಲ್ಲಿ ಮುಸ್ಲಿಮರು ಮೌನವಾಗಿದ್ದರು, ಆದರೆ ಆಂತರಿಕವಾಗಿ ಹಿಂಸಾಚಾರ ನಡೆಸಲು ಸಂಚು ರೂಪಿಸಿದ್ದರು, ಜೂನ್ 25 ರ ರಾತ್ರಿ 3 ಹಿಂದೂ ಯುವಕರು ವೃತ್ತದ ಬಳಿ ಹಾದು ಹೋಗುತ್ತಿದ್ದರು, ಈ ವೇಳೆ ಅವರನ್ನು 12ಕ್ಕೂ ಹೆಚ್ಚು ಮುಸ್ಲಿಮರು ಸುತ್ತುವರಿದು ಫಲಕ ತೆಗೆದಿದ್ದೀರಿ ಎಂದು ಆರೋಪಿಸಿ ನಿಂದಿಸಿ ನಂತರ ಥಳಿಸಿದ್ದಾರೆ, ಇದರಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಚಾಂದ್ ದಿವಾನ್, ರಫೀಕ್, ಸಿರಾಜುಲ್, ಮಂಜೂರ್ ಮತ್ತಿತರರು ಹಲ್ಲೆ ಮಾಡಿದವರೆಂದು ಗುರುತಿಸಲಾಗಿದೆ, ಥಳಿಸಿದ ಸುದ್ದಿ ತಿಳಿದ ತಕ್ಷಣ ಹಿಂದೂಗಳು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು, ಪೊಲೀಸರು ಕೂಡ ಅಲ್ಲಿಗೆ ತಲುಪಿದರು…!
ಸಂಪಾದಕರ ನಿಲುವು
ಕೇವಲ ಶೇಕಡಾ 4 ರಷ್ಟು ಇರುವ ಮುಸ್ಲಿಮರು ಒಂದು ಗ್ರಾಮಕ್ಕೆ ಇಸ್ಲಾಂ ನಗರ ಎಂದು ನಾಮಕರಣ ಮಾಡುತ್ತಾರೆ ಎಂದಾದರೆ, ಹಿಂದೂಗಳು ಅಲ್ಪಸಂಖ್ಯಾತರಾಗಿರುವ ದೇಶಗಳಾದ ಪಕ್ಕದ ಬಾಂಗ್ಲಾ ದೇಶ, ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ಹಿಂದೂಗಳಿಗೆ ಯಾವ ಮಟ್ಟದ ಪರಿಸ್ಥಿತಿ ಇರಬಹುದು ಎಂದು ಒಮ್ಮೆ ಊಹಿಸಿಕೊಳ್ಳಿ…!
- ಸಂಪಾದಕರು