
ನವದೆಹಲಿ : 2024ರ ಲೋಕಸಭಾ ಚುನಾವಣೆ ಬಿಜೆಪಿ ನೇತೃತ್ವದ NDA ಸರಕಾರ ಅಧಿಕಾರದ ಚುಕ್ಕಣಿಯನ್ನು ಹಿಡಿದಿದೆ ಆದರೆ 2014 ಹಾಗೂ 19ರಂತೆ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿಲ್ಲ ಹಾಗಾಗಿ ಬಿಜೆಪಿ ಮಿತ್ರ ಪಕ್ಷಗಳ ಮಾತು ಕೇಳೋದು ಅನಿವಾರ್ಯ,
ಕರ್ನಾಟಕದಲ್ಲಿ ಬಿಜೆಪಿ ಮಿತ್ರ ಪಕ್ಷ ಜೆಡಿಎಸ್ ಎರಡು ಸ್ಥಾನಗಳು ಗೆದ್ದಿದ್ದರು ಎಚ್ ಡಿ ಕುಮಾರಸ್ವಾಮಿ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ಮೋದಿ 3.O ಸರಕಾರ ನೀಡಿದೆ.
ಎಚ್ ಡಿ ಕುಮಾರಸ್ವಾಮಿ ಅವರು ಬಯಸಿದ್ದ ಕೃಷಿ ಖಾತೆ ಆದರೂ, ಪ್ರಧಾನಿ ಮೋದಿಯವರ ಕ್ಯಾಬಿನೆಟ್ ನಲ್ಲಿ ಪ್ರಭಾವೀ ಒಂಬತ್ತನೇ ( ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ) ಖಾತೆಯನ್ನು ಎಚ್.ಡಿ.ಕುಮಾರಸ್ವಾಮಿಯವರಿಗೆ ಮೋದಿ ನೀಡಿದರು, ಆದರೆ ಈಗ ಪ್ರಧಾನಿ ಮೋದಿ ಅವರು ಮತ್ತೊಂದು ಜವಾಬ್ದಾರಿಯನ್ನು ಎಚ್ ಡಿ ಕುಮಾರಸ್ವಾಮಿ ಅವರಿಗೆ ನೀಡಿದ್ದಾರೆ.
ಸಂಪುಟ ಆರ್ಥಿಕ ವ್ಯವಹಾರಗಳ ಸಮಿತಿಯಲ್ಲಿ ಕುಮಾರಸ್ವಾಮಿಯವರನ್ನು ಸದಸ್ಯರನ್ನಾಗಿ ಸೇರ್ಪಡೆ ಮಾಡಲಾಗಿತ್ತು. ಈಗ, ಹೊಸದಾಗಿ ಪುನರ್ ರಚನೆಗೊಂಡ ನೀತಿ ಆಯೋಗದಲ್ಲಿ ವಿಶೇಷ ಆಹ್ವಾನಿತರಾಗಿ ಎಚ್.ಡಿ.ಕುಮಾರಸ್ವಾಮಿ ಸ್ಥಾನವನ್ನು ಪಡೆದಿದ್ದಾರೆ. ದೇಶದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರ್ಣಾಯಕ ಸಮಿತಿಯಲ್ಲಿ ಕುಮಾರಸ್ವಾಮಿಯವರ ಹೆಸರು ಸೇರ್ಪಡೆಗೊಂಡಿರುವುದು ಕೆಲವರಿಗೆ ಆಶ್ಚರ್ಯವಾಗಿದೆ.
2014ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದಾಗ, ಅಸ್ತಿತ್ವದಲ್ಲಿದ್ದ ಯೋಜನಾ ಆಯೋಗವನ್ನು ರದ್ದು ಪಡಿಸಿ, ಜೂನ್ 2014ರಲ್ಲಿ ನೀತಿ ಆಯೋಗದ ರಚನೆಯನ್ನು ಮಾಡಲಾಗಿತ್ತು. ಈ ಆಯೋಗಕ್ಕೆ ಪ್ರಧಾನಿ ಮೋದಿಯವರು ಅಧ್ಯಕ್ಷರಾಗಿರುತ್ತಾರೆ.
ಹಿಂದಿನ ಬಾರಿ ಬಿಜೆಪಿ ನಾಯಕರುಗಳೇ ಈ ಆಯೋಗದ ಸದಸ್ಯರಾಗಿದ್ದರು ಆದರೆ, ಮೋದಿಯವರ 3.0 ಸರ್ಕಾರದಲ್ಲಿ, ಮಿತ್ರ ಪಕ್ಷದ ಸದಸ್ಯರೂ ನೀತಿ ಆಯೋಗದ ವಿಶೇಷ ಆಹ್ವಾನಿತರಲ್ಲಿ ಸ್ಥಾನವನ್ನು ಮೋದಿಯವರು ನೀಡಿದ್ದಾರೆ.
ಬಿಜೆಪಿಗೆ ಸ್ವಂತ ಬಲ ಇಲ್ಲದ ಕಾರಣ , ಮಿತ್ರಪಕ್ಷಗಳ ಸದಸ್ಯರನ್ನೂ ನೀತಿ ಆಯೋಗದ ಸಮಿತಿಗೆ ಸೇರಿಸುವ ಅನಿವಾರ್ಯತೆಯಲ್ಲಿ ಪ್ರಧಾನಿ ಮೋದಿಯವರಿದ್ದಾರೆ ಎಂದು ಹೇಳಲಾಗುತ್ತಿದೆ.
ಹೊಸದಾಗಿ ರಚನೆಗೊಂಡ ನೀತಿ ಆಯೋಗದ ಉಪಾಧ್ಯಕ್ಷರಾಗಿ ಕೆ.ಬೆರ್ರಿ, ಪೂರ್ಣ ಪ್ರಮಾಣದ ಸದಸ್ಯರಾಗಿ ವಿಜ್ಞಾನಿ ವಿ.ಕೆ. ಸಾರಸ್ವತ್, ಕೃಷಿ ಅರ್ಥಶಾಸ್ತ್ರಜ್ಞ ರಮೇಶ್ ಚಂದ್, ಮಕ್ಕಳ ತಜ್ಞ ವಿ.ಕೆ. ಪೌಲ್ ಮತ್ತು ಅರ್ಥಶಾಸ್ತ್ರಜ್ಞ ಅರವಿಂದ್ ವಿರ್ಮಾನಿ ಮುಂದುವರಿಯಲಿದ್ದಾರೆ.
ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಥಶಾಸ್ತ್ರಜ್ಞ ಸುಮನ್ ಕೆ ಬೆರಿ ಅವರು ನೀತಿ ಆಯೋಗದ ಉಪಾಧ್ಯಕ್ಷರಾಗಿ ಮುಂದುವರಿಯುತ್ತಾರೆ.
ಇದಲ್ಲದೇ ಮೋದಿ ಸಂಪುಟದಿಂದ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸದಸ್ಯರಾಗಿದ್ದಾರೆ. ಈ ಹೊಸ ಸದಸ್ಯರ ಹೆಸರನ್ನು ಪ್ರಧಾನಿ ಮೋದಿ ಅನುಮೋದನೆ ಮಾಡಿದ್ದಾರೆ.
ನೀತಿ ಆಯೋಗದ ಪರಿಷ್ಕೃತ ಸಂಯೋಜನೆಯನ್ನು ಪ್ರಧಾನಿ ಮೋದಿಯವರು ಅನುಮೋದಿಸಿದ್ದಾರೆ . ಪುನರ್ ರಚಿಸಲಾದ ನೀತಿ ಆಯೋಗದ ವಿಶೇಷ ಆಹ್ವಾನಿತರು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು ಖಾತೆ ಸಚಿವರು), ಜಗತ್ ಪ್ರಕಾಶ್ ನಡ್ಡಾ ಆರೋಗ್ಯ ಇಲಾಖೆ ಸಚಿವರು ಕೂಡ ಇದ್ದಾರೆ,