
ಉತ್ತರ ಕೊರಿಯಾ ಅಲ್ಲಿನ ಪ್ರಜೆಗಳ ಪಾಲಿನ ಯಮ, ಹುಚ್ಚು ದೊರೆ , ಕಿಮ್ ಜಾಂಗ್ ಉನ್ , ಅವರ ಮೇಲೆ ಕಣ್ಣು ಇಡ್ತೀನಿ ಇವರ ಮೇಲೆ ಕಣ್ಣು ಇಡ್ತೀನಿ ಎಂದು ಹೋಗಿ ಈಗ ಸೋತು ಹೋಗಿದ್ದಾನೆ . ಕಿಮ್ ಪಟಾಲಂ ಮಾಡಿಕೊಂಡ ಎಡವಟ್ಟಿಗೆ ಇದೀಗ, ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಉತ್ತರ ಕೊರಿಯಾ ಮಾನ ಹರಾಜು ಆಗಿದೆ. ಹೀಗೆ ಕಿಮ್ ಸೋತು ಸುಣ್ಣವಾಗಿರುವ ಕಾರಣಕ್ಕೆ ಯಾರ ಜೀವ ತೆಗೆಯುತ್ತಾನೋ?
ಜಪಾನ್ ಅಮೆರಿಕದ ದಕ್ಷಿಣ ಕೊರಿಯಾ ಬದ್ಧ ಶತ್ರು ಹುಚ್ಚು ದೊರೆ ಮತ್ತೆ ಸಿಟ್ಟಿಗೆದ್ದಿದ್ದಾನೆ . ಇಷ್ಟುದಿನ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೇವಲ ಮಿಸೈಲ್ ಅಂದ್ರೆ ಅಣ್ವಸ್ತ್ರ ಸಾಮರ್ಥ್ಯದ ಕ್ಷಿಪಣಿ ಪ್ರಯೋಗ ಮಾಡುತ್ತಿದ್ದ.
ಆದರೆ, ಕಿಮ್ ಜಾಂಗ್ ಉನ್ ಕಣ್ಣು ಈಗ ಉಪಗ್ರಹಗಳ ಮೇಲೆ ಬಿದ್ದಿದೆ. ಹೊಸ ಉಪಗ್ರಹ ಉಡಾವಣೆ ಮಾಡಿ ಅಮೆರಿಕ ಮತ್ತು ದಕ್ಷಿಣ ಕೊರಿಯಾ ದೇಶಗಳ ಮೇಲೆ ಕಣ್ಗಾವಲು ಇಡಲು ಮುಂದಾಗಿದ್ದ. ಆದರೆ ಈ ಕೆಲಸ ಪ್ರಾರಂಭದಲ್ಲಿಯೇ ಸೋತು ಹೋದ ಹುಚ್ಚು ದೊರೆ
2024 ಜೂನ್ 3ರ ಕೆ ಉತ್ತರ ಕೊರಿಯಾ ಉಪಗ್ರಹ ಉಡಾವಣೆ ಮಾಡುವ ಯೋಜನೆ ಹಾಕಿತ್ತು ಇದಕ್ಕೂ ಮೊದಲು ಒಮ್ಮೆ ಉತ್ತರ ಕೊರಿಯಾ ‘ಮಿಲಿಟರಿ ಗೂಢಚಾರ’ ಉಪಗ್ರಹ ಉಡಾವಣೆ ಮಾಡಲು ಹೋಗಿ ರಾಕೆಟ್ ಆಕಾಶದಲ್ಲಿಯೇ ಡಮಾರ್ ಎಂದಿದೆ.
ಈಗ ಮತ್ತೊಂದು 2ನೇ ಮಿಲಿಟರಿ ಗೂಢಚಾರ ಉಪಗ್ರಹ ಉಡಾವಣೆ ಮಾಡಿ ಜಾಗತಿಕ ಮಟ್ಟದಲ್ಲಿ ಸೇಮ್ ಮಾಡಿಕೊಂಡಿದೆ. ಈಗ ಕೂಡ ಉಪಗ್ರಹವನ್ನ ಬಾಹ್ಯಾಕಾಶಕ್ಕೆ ಕಳುಹಿಸುವಾಗ, ರಾಕೆಟ್ ಮಧ್ಯದಲ್ಲೇ ಢಮಾರ್ ಅಂದಿದೆ.
ಈ ಘಟನೆ ನಡೆದ ನಂತರ ಅಲ್ಲಿನ ವಿಜ್ಞಾನಿಗಳಿಗೆ ಮತ್ತು ಜನರಿಗೆ ಭಯ ಮೂಡಿಸಿದೆ! ಹಾಗಾದ್ರೆ ಅವರಿಗೆ ಭಯ ಯಾಕೆ ಗೊತ್ತಾ ?
ಉತ್ತರ ಕೊರಿಯಾ ಈ ಹುಚ್ಚು ದೊರೆಯ ಆಡಳಿತದಲ್ಲಿ ಎಷ್ಟು ಅಪಾಯ ಅನ್ನೋದು ಇಡೀ ಜಗತ್ತಿಗೇ ಗೊತ್ತು. ಉತ್ತರ ಕೋರಿಯಾದ ಹುಚ್ಚು ದೊರೆಯ ಸರ್ವಾಧಿಕಾರಿಯ ಹುಚ್ಚು ಆಡಳಿತಕ್ಕೆ ಜಗತ್ತಿನ ನೂರಾರು ದೇಶಗಳು ಉತ್ತರ ಕೊರಿಯಾಗೆ ತಮ್ಮ ಪ್ರಜೆಗಳು ಹೋಗುವಂತಿಲ್ಲ ಎಂಬ ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ಲದೆ ಉತ್ತರ ಕೊರಿಯಾ ದೇಶವನ್ನ ಕೂಡ ಜಾಗತಿಕ ಮಟ್ಟದಲ್ಲಿ ಬ್ಲಾಕ್ ಲಿಸ್ಟ್ಗೆ ಹಾಕಿವೆ.
ಈ ರೀತಿ ಇಷ್ಟು ಭಯಾನಕ ವಾತಾವರಣ ಇರುವ ದೇಶದಲ್ಲಿ, ಉಪಗ್ರಹ ಉಡಾವಣೆ ಮಾಡಲು ಹೋಗಿ ಸೋತು ಹೋದ ಕಾರಣಕ್ಕೆ ಅಲ್ಲಿನ ಪಾಪಿ ಕ್ರೂರ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಿಜ್ಞಾನಿಗಳ ಜೀವ ಪಕ್ಷಿ ಎಲ್ಲಿ ಹಾರಿಸಿಬಿಡುತ್ತಾನೋ ಏನೋ ಭಯದಲ್ಲಿದ್ದಾರೆ ವಿಜ್ಞಾನಿಗಳು. ಈ ಹಿಂದೆ ಕೂಡ ಅನೇಕ ಬಾರಿ ಇಂತಹದ್ದೇ ನೀಚ ಕೃತ್ಯ ಎಸಗಿದ್ದ ಈ ನೀಚ, ಇದೀಗ ಇಂಥ ಹುಚ್ಚು ದೊರೆಯಿಂದ ಅಲ್ಲಿನ ಪ್ರಜೆಗಳು ಪ್ರತಿನಿತ್ಯ ಭಯದ ವಾತಾವರಣದಲ್ಲಿ ಜೀವಿಸುವ ಸ್ಥಿತಿ ನಿರ್ಮಾಣವಾಗಿದೆ.