
ಬೆಂಗಳೂರು : ಒಂದು ಕಡೆ ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿದ್ದರೆ ಇನ್ನೊಂದು ಕಡೆ ಡೆಂಗ್ಯೂ ಪ್ರಕರಣಗಳು ಕೂಡ ಮಿತಿ ಮೇರುತ್ತಿದೆ, ಸಾವಿನ ಸಂಖ್ಯೆಯು ಕೂಡ ಏರುತಿದೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಡೆಂಗ್ಯೂ ರುದ್ರನರ್ತನ ಮೆರೆಯುತ್ತಿದೆ.!
ರಾಜ್ಯದಲ್ಲಿ ಇದುವರೆಗೆ 53,866 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ 7006 ಮಂದಿಯಲ್ಲಿ ರೋಗ ದೃಢಪಟ್ಟಿದೆ. 352 ಸಕ್ರಿಯ ಪ್ರಕರಣಗಳಿದ್ದು, 6 ಮಂದಿ ಡೆಂಗ್ಯೂಗೆ ಬಲಿಯಾಗಿದ್ದಾರೆ.!
ಜುಲೈ 6ರಂದು 753 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, 175 ಜನರಲ್ಲಿ ಸೋಂಕು ಪತ್ತೆಯಾಗಿದೆ. ಒಂದು ವರ್ಷದೊಳಗಿನ ಮಗು, 1 ರಿಂದ 18 ವರ್ಷದ 53 ಮಕ್ಕಳು, 18 ವರ್ಷ ಮೇಲ್ಪಟ್ಟ 121 ಜನರಲ್ಲಿ ಡೆಂಗ್ಯೂ ಜ್ವರ ಇರುವುದು ಪತ್ತೆಯಾಗಿದೆ.!
ಚಿಕ್ಕಮಗಳೂರಲ್ಲಿ 521 ಜನರು ಸೋಂಕಿತರಾಗಿದ್ರೆ ಮೈಸೂರಲ್ಲಿ 496, ಹಾವೇರಿ 481, ಧಾರವಾಡ 289, ಚಿತ್ರದುರ್ಗು 275, ಹಾಸನ 224 ಜನರು ಡೆಂಗ್ಯೂ ಸೋಂಕಿನಿಂದ ಕಂಗಾಲಾಗಿದ್ದಾರೆ. ಸಾವಿನ ಸಂಖ್ಯೆಯೂ ಮಿತಿ ಮೀರುತ್ತಿದ್ದು, ಹಾಸನ, ಮೈಸೂರು, ಗದಗದಲ್ಲಿ ತಲಾ ಒಬ್ಬೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.!
ಅಂಜನಾಪುರದ 11 ವರ್ಷದ ಬಾಲಕ ಗಗನ್ ಮೊನ್ನೆ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.!
ಗದಗ ಜಿಲ್ಲೆಯಲ್ಲಿ ಶಂಕಿತ ಡೆಂಘೀಗೆ ಮೊದಲ ಬಲಿ ಆಗಿದೆ. ಶಿರುಂಜ ಗ್ರಾಮದ ಐದು ವರ್ಷದ ಮಗು ತೀವ್ರ ಜ್ವರದಿಂದ ಬಳಲುತ್ತಿತ್ತು. ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿತ್ತು. ಆ ಬಳಿಕ ಅಲ್ಲಿಂದ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಆದರೂ ಚಿಕಿತ್ಸೆ ಲಭಿಸದೆ ಚಿರಾಯಿ ಹೊಸಮನಿ ಸಾವನ್ನಪ್ಪಿದ್ದಾನೆ.!
ಈಮಧ್ಯೆ, ಡೆಂಗ್ಯೂ ಜ್ವರದ ಆತಂಕದ ನಡುವೆ ಕೂಡಲೇ ಮೆಡಿಕಲ್ ಎಮರ್ಜೆನ್ಸಿ ಘೋಷಿಸಿ ಎಂದು ಬಿಜೆಪಿ ಸಂಸದ ಡಾ. ಸಿಎನ್ ಮಂಜುನಾಥ್ ಹೇಳಿದ್ದಾರೆ. ಡೆಂಗ್ಯೂ ಜ್ವರಕ್ಕೆ ನಿಖರವಾದ ಚಿಕಿತ್ಸೆ ಇಲ್ಲ. ಇದರ ಜೊತೆಗೆ ಇತರ ಕಾಯಿಲೆಗಳು ಬರುತ್ತವೆ. ಕೋವಿಡ್ ಪ್ಯಾಂಡಮಿಕ್ ಕಾಯಿಲೆ ತರ ಇದು ಎಂಡಮೆಕ್ ಕಾಯಿಲೆ. ಕೋವಿಡ್ ಮಾದರಿಯಲ್ಲಿ ಇದಕ್ಕೆ ಚಿಕಿತ್ಸೆ ನೀಡಬೇಕು ಎಂದರು.!
ಒಂದು ಕಡೆ ಡೆಂಗ್ಯೂ ಪ್ರಕರಣಗಳು ದಿನಕ್ಕೆ ಏರುತ್ತಿದ್ದರೆ ಇನ್ನೊಂದು ಕಡೆ ರಾಜಕೀಯ ಆರೋಪಗಳು ಕೂಡ ಜೋರಾಗಿದೆ.!
ಗದಗನಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ ಮಾತನಾಡಿ, ಡೆಂಘೀ ನಿಯಂತ್ರಣ ಮಾಡೋದ್ರಲ್ಲಿ ರಾಜ್ಯ ಸರ್ಕಾರ ವಿಫಲ ಆಗಿದೆ. ಡೆಂಘೀ ಒಂದೂವರೆ ತಿಂಗಳಿಂದ ಆರಂಭವಾಗಿದ್ದರೂ ಅಧಿಕಾರಿಗಳು ಕೇರ್ ಲೆಸ್ ಮಾಡಿದ್ದಾರೆ. ಡಿಹೆಚ್ಓ, ವೈದ್ಯರು ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ. ಹೊಸ ಮಳೆ ನೀರಿನಿಂದ ಬರುವ ಜ್ವರ ಇದು. ಆದರೆ ಜಾಗೃತಿ ಮೂಡಿಸುವ, ಔಷಧಿ ಸಿಂಪರಣೆ ಯಾವುದೂ ಮಾಡಿಲ್ಲ. ಟೆಸ್ಟ್ ಕಡಿಮೆ ಮಾಡ್ತಿದ್ದು, ಚಿಕಿತ್ಸೆ ಸಿಗ್ತಿಲ್ಲ ಅಂತಾ ದೂರಿದ್ದಾರೆ.!
ಆಡಳಿತಾರೂಢ ಕಾಂಗ್ರೆಸ್ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಡೆಂಗ್ಯೂ ಬಾಧಿತರನ್ನು ಭೇಟಿಯಾಗುತ್ತಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಉಲ್ಟಾ ಹೊಡೆದಿದೆ. ಆರೋಗ್ಯ ವಿಷಯದಲ್ಲಿ ರಾಜಕೀಯ ಮಾಡಬೇಡಿ, ಮಾಡುವುದು ಸರಿಯಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.!
ಬೆಂಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ ಕರ್ನಾಟಕದಲ್ಲಿ ಡೆಂಘೀ, ಝೀಕಾ ವೈರಸ್ ಸಹ ಬಂದಿದೆ. ಸರ್ಕಾರದಲ್ಲಿ ವ್ಯವಸ್ಥೆ ಹದಗೆಟ್ಟಿದೆ, ಆಸ್ಪತ್ರೆಗಳಿಗೆ ಜನ ದೊಡ್ಡ ಪ್ರಮಾಣದಲ್ಲಿ ದಾಖಲಾಗ್ತಿದ್ದಾರೆ. ಸರಿಯಾದ ಔಷಧ ಸಿಗುತ್ತಿಲ್ಲ, ಔಷಧಗಳ ಬಿಲ್ ಜಾಸ್ತಿ ಮಾಡಿದ್ದಾರೆ, ಇದಕ್ಕೆ ಯಾವುದೇ ಕಾನೂನು ಇಲ್ಲ ಎಂದು ದೂರಿದ್ದಾರೆ..!
ಇನ್ನು ಡೆಂಗ್ಯೂ ಬಗ್ಗೆ ಹೆಚ್ಚಿನ ಕ್ರಮ ವಹಿಸುವ ಅವಶ್ಯಕತೆ ಇದೆ ಪರಿಸರದಲ್ಲಿ ನೀರು ನಿಲ್ಲದ ಹಾಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ..!