
ಯಾದಗಿರಿ : ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ
ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ್, ನಿನ್ನೆಯಷ್ಟೇ ಯಾದಗಿರಿ ನಗರ ಠಾಣೆಯಲ್ಲಿ ಅಭಿಮಾನದ ಬಿಳ್ಕೊಡುಗೆ ಪಡೆದಿದ್ದ ಪರಸುರಾಮ್ , ಹಠಾತ್ ಹೃದಯಾಘಾತದಿಂದ ಸಾವುನ್ನಪ್ಪಿದ್ದಾರೆ. ಈ ಸಾವು ಇದೀಗ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದ್ದು, ಪಿಎಸ್ಐ ಪರಶುರಾಮ್ ಅವರ ಪತ್ನಿ ಸ್ಥಳೀಯ ಶಾಸಕರು ಮತ್ತು ಅವರ ಪುತ್ರನ ವಿರುದ್ಧ ದೂರು ನೀಡಿದ್ದಾರೆ.
ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ 17 ಗಂಟೆ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಪಿಎಸ್ಐ ಪತ್ನಿ ಶ್ವೇತಾ ಅವರು ಕುಟುಂಬಸ್ಥರ ಜೊತೆ ಯಾದಗಿರಿ ಟೌನ್ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದರು. ಈಗ ಭಾರತಿಯ ನ್ಯಾಯ ಸಂಹಿತೆ 108(3,5), ಸೆಕ್ಷನ್ 352 ಅಡಿಯಲ್ಲಿ ಶಾಸಕ ಚೆನ್ನಾರೆಡ್ಡಿ ಹಾಗೂ ಪುತ್ರ ಪಂಪನಗೌಡ ವಿರುದ್ಧ ಜಾಮೀನು ರಹಿತ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ
ಪಿಎಸ್ಐ ಪರಶುರಾಮ ಪತ್ನಿ ಶ್ವೇತಾ ದೂರು ಆಧರಿಸಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್, ಪುತ್ರ ಪಂಪನಗೌಡ ವಿರುದ್ಧ ಜಾತಿ ನಿಂದನೆ ಆರೋಪದಡಿ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಎ1 ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್, ಎ2 ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಪುತ್ರ ಪಂಪನಗೌಡ ಆಗಿದ್ದಾರೆ.
ಇದು ಸಹಜ ಸಾವು ಅಂತ ಸುದ್ದಿ ಬಂದಿದೆ: ಪರಮೇಶ್ವರ್
ಪಿಎಸ್ಐ ಪರಶುರಾಮ ಸಾವು ಸಹಜ ಸಾವು ಎಂದು ಸುದ್ದಿ ಬಂದಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಅಲ್ಲ ಹೃದಯ ಅಪವಾದದಿಂದ ಮೃತಪಟ್ಟಿದ್ದಾರೆ ಅವರು ಡೆತ್ ನೋಟ್ ಬರೆದಿಟ್ಟಿಲ್ಲ ವರ್ಗಾವಣೆ ಮಾಡಿದ ಕಾರಣವನ್ನು ಅವರು ನೀಡಿದ್ದಾರೆ, ಆದರೆ ಇದರ ಬಗ್ಗೆ ತನಿಖೆ ಮಾಡಲು ನಾನು ಸೂಚನೆ ನೀಡಿದ್ದೇನೆ ತನಿಖೆ ನಂತರ ವಿಷಯ ತಿಳಿಯಲಿದೆ ಎಂದು ಹೇಳಿದ್ದಾರೆ
ಅವರ ಪತ್ನಿ ನೀಡಿದ ದೂರನ್ನು ಪರಿಗಣಿಸುತ್ತೇನೆ ಕೆಲವೊಂದಿಷ್ಟು ಮಾಹಿತಿಗಳು ಇನ್ನು ಕಲೆ ಹಾಕಬೇಕಾಗಿದೆ ಎಫ್ ಐ ಆರ್ ದಾಖಲಿಸಲು ಸೂಚನೆ ನೀಡಿದ್ದೇನೆ ಯಾರೇ ತಪ್ಪು ಮಾಡಿದ್ದರು ಅವರ ವಿರುದ್ಧ ಕಠಿಣ ಕ್ರಮ ಕಾನೂನಾತ್ಮಕವಾಗಿ ತೆಗೆದುಕೊಳ್ಳುತ್ತೇವೆ
ಪಿಎಸ್ಐ ಪರಶುರಾಮ ಪತ್ನಿ ಆರೋಪವನ್ನು ಪರಿಗಣಿಸುತ್ತೇನೆ. ಪ್ರಾಥಮಿಕವಾಗಿ ಕೆಲವೊಂದಿಷ್ಟು ಮಾಹಿತಿ ಕಲೆ ಹಾಕಬೇಕು. ಪರಿಶೀಲನೆ ಮಾಡಿ ಶೀಘ್ರದಲ್ಲೇ ಎಫ್ಐಆರ್ ದಾಖಲಿಸುತ್ತಾರೆ. ಯಾರೇ ಇದ್ದರು ಅವರ ವಿರುದ್ಧ ಎಫ್ಐಆರ್ ಹಾಕುತ್ತಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ.
ಈ ಪ್ರಕರಣವನ್ನು ಸರಕಾರ ಉನ್ನತ ಮಟ್ಟದ ತನಿಖೆ ಮಾಡಿಸಬೇಕು : ಶರಣ್ ಗೌಡ
ಕಳೆದ ಮೂರು ದಿನಗಳ ಹಿಂದೆ ವರ್ಗಾವಣೆ ಆದೇಶದ ಬಗ್ಗೆ ನನ್ನ ಜೊತೆ ಪರಶುರಾಮ್ ಅವರು ಮಾತನಾಡಿದರು ನನಗೆ ವರ್ಗಾವಣೆಯಾಗಿ ಒಂದು ವರ್ಷ ಕೂಡ ಆಗಿಲ್ಲ ಅಷ್ಟರ ಒಳಗೆ ನನ್ನನ್ನು ಮತ್ತೆ ವರ್ಗಾವಣೆ ಮಾಡುತ್ತಿದ್ದಾರೆ ಎಂದು ನನ್ನ ಜೊತೆ ಅವರು ಮಾತನಾಡಿದ್ದಾರೆ ಇಂದು ನನ್ನ ಬಳಿ ಅವರ ನೋವನ್ನು ಹಂಚಿಕೊಂಡಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳಿಗೆ ಈ ರೀತಿ ಆದರೆ ಹೇಗೆ ಅವರ ಪತ್ನಿ ಈಗ ತುಂಬ ಗರ್ಭಿಣಿ ಅವರಿಗೆ ನ್ಯಾಯ ಸಿಗಬೇಕು , ಸದನದ ಒಳಗೆ ಮತ್ತೆ ಹೊರಗಡೆ ಕೂಡ ನಾನು ಈ ವಿಷಯವನ್ನು ಪ್ರಸ್ತಾಪಿಸಿದ್ದೆ ಸರಕಾರ ಮೊದಲೆ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು ಪರಶುರಾಮ್ ಅವರ ಸಾವಿಗೆ ಅಧಿಕಾರಿಗಳು ನೇರ ಹೊಣೆ ಆಗುತ್ತಾರೆ , ಪರಶುರಾಮ್ ಅವರ ಕುಟುಂಬಕ್ಕೆ ಸರಕಾರ ಸಂಪೂರ್ಣ ನೆರವು ನೀಡಬೇಕು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.
ಚೆನ್ನಾರೆಡ್ಡಿ ರಾಜಿನಾಮೆ ನೀಡಬೇಕು: ಯತ್ನಾಳ್
ಒಬ್ಬ ಪ್ರಮಾಣಿಕ ದಲಿತ ಅಧಿಕಾರಿ ಯನ್ನು ಪ್ರಭಾವ ಬೀರಿ ವರ್ಗಾವಣೆ ಮಾಡಿಸಿದ ಆರೋಪದಲ್ಲಿ ದೂರು ದಾಖಲಾಗಿದೆ.
ಜನಪ್ರತಿನಿಧಿಯಾಗಿ ಸಮಾಜಕ್ಕೆ ಮಾದರಿ ಆಗಬೇಕಿದ್ದ ಶಾಸಕರು ಒಬ್ಬ ಪ್ರಮಾಣಿಕ ಅಧಿಕಾರಿಗೆ ಸಾವಿಗೆ ಕಾರಣರಾಗಿದ್ದಾರೆ ಹಾಗಾಗಿ ಇಂತಹ ಶಾಸಕರು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಸನಗೌಡ ಪಟೇಲ್ ಯತ್ನಾಳ್ ಆಗ್ರಹಿಸಿದ್ದಾರೆ