
ಕೊಪ್ಪಳ: ಮೂರು ಜನ ಯುವಕರು ರೇಲ್ವೆ ಟ್ರ್ಯಾಕ್ ಮೇಲೆ ಎಣ್ಣೆ ಪಾರ್ಟಿ ಮಾಡಿ ಅಲ್ಲೇ ಮಲಗಿದ್ದರು ಮಧ್ಯದ ಗೂಗಿನಲ್ಲಿ ಮಲಗಿದ್ದ ಯುವಕರಿಗೆ ರೈಲು ಬಂದಿದ್ದು ತಿಳಿಯಲಿಲ್ಲ ಯುವಕರ ಮೇಲೆ ರೈಲು ಹರಿದಿದ್ದು, ಸ್ಥಳದಲ್ಲಿಯೇ ಮೂರು ಜನ ಯುವಕರು ಸಾವನೊಪ್ಪಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ ನಡೆದಿದೆ.

ಮೃತ ಯುವಕರನ್ನು ಮೌನೇಶ್ ಪತ್ತಾರ(23), ಸುನೀಲ್ (23), ವೆಂಕಟ ಭೀಮನಾಯ್ಕ (20) ಎಂದು ಗುರುತಿಸಲಾಗಿದೆ. ಮೂವರೂ ಗಂಗಾವತಿಯವರಾಗಿದ್ದಾರೆ. ಇವರು ಕುಡಿದ ಮತ್ತಿನಲ್ಲಿ ರೇಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದರು ಎಂಬುದಕ್ಕೆ ಸ್ಥಳದಲ್ಲಿದ್ದ ಮದ್ಯದ ಬಾಟಲಿಗಳು ಬಿದ್ದಿದ್ದು ಹಾಗೂ ಕೆಲವು ಕುರುಗಳು ಕೂಡ ಸಿಕ್ಕಿದೆ.
ರೈಲು ಹುಬ್ಬಳ್ಳಿಯಿಂದ ಸಿಂಧನೂರಿಗೆ ತೆರಳುತ್ತಿತ್ತು. ಮದ್ಯದ ಅಮಲಿನಲ್ಲಿ ರೈಲಿನ ಆಗಮನ ಯುವಕರಿಗೆ ಗೊತ್ತಾಗಿರಲಿಕ್ಕಿಲ್ಲ ಎನ್ನಲಾಗಿದೆ. ದೇಹಗಳು ಛಿದ್ರಛಿದ್ರವಾಗಿವೆ.

ಮಧ್ಯದ ಗುಂಗಿನಲ್ಲಿ ಮೋಜು ಮಸ್ತಿ ಮಾಡಲು ಹೋಗಿ ಜೀವವನ್ನೇ ಕಳೆದುಕೊಂಡರು ಸದ್ಯ ಈ ಪ್ರಕರಣ ಈಗ ಗದಗ ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲ್ವೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಯುವಕರ ಗುರುತು ಕೂಡ ಪತ್ತೆಹಚ್ಚಲಾಗಿದೆ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತ ದೇಹವನ್ನು ಹಸ್ತಂತರಿಸಲಿದ್ದಾರೆ ಎಂದು ತಿಳಿದು ಬಂದಿದೆ.