
ಹೈಲೈಟ್ಸ್
13 ವರ್ಷದ ಬಾಲಕನಿಗೆ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವ ಚಟ..!
ವೀಡಿಯೋ ನೋಡುವಾಗ ಕಾಮೋದ್ರೇಕಗೊಂಡು ಪಕ್ಕದಲ್ಲೇ ಇದ್ದ 9 ವರ್ಷದ ಸ್ವಂತ ತಂಗಿಯ ಮೇಲೆಯೇ ಅತ್ಯಾಚಾರ…!!
ತಂಗಿ ಈ ವಿಷಯವನ್ನು ತಂದೆ ಬಳಿ ಹೇಳುತ್ತೇನೆ ಎಂದಾಗ ತಂಗಿಯನ್ನು ಕೊಲೆ ಮಾಡಿದ ಬಾಲಕ…!
ಮಗನಿಗೆ ಸಾಥ್ ಕೊಟ್ಟ ತಾಯಿ ಹಾಗೂ ಇಬ್ಬರು ಆತನ ಅಕ್ಕಂದಿರು…!!
ಮಧ್ಯಪ್ರದೇಶದಲ್ಲಿ ಘನಘೋರ ಕ್ರತ್ಯವೊಂದನ್ನು ಭೇದಿಸಿದ ಪೋಲಿಸರು…!
ಭೋಪಾಲ್ – 13 ವರ್ಷದ ಪೋರನೊಬ್ಬ ತನ್ನ 9 ವರ್ಷದ ತಂಗಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ಬೆಳಕಿಗೆ ಬಂದಿದೆ…!
ತನಿಖಾಧಿಕಾರಿಗಳು 3 ತಿಂಗಳಲ್ಲಿ ನಡೆಸಿದ 50 ಕ್ಕೂ ಹೆಚ್ಚು ಡಿಎನ್ಎ ಪರೀಕ್ಷೆಗಳ ಬಳಿಕ , ಬಾಲಕಿ ಖಾಸಗಿ ಭಾಗಗಳಲ್ಲಿ ಕಂಡುಬಂದ ವೀರ್ಯ ಆಕೆಯ ಸಹೋದರನ ವೀರ್ಯದೊಂದಿಗೆ ಹೊಂದಿಕೆಯಾದ ಬಳಿಕ ಆತನನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ…!!
ಅಚ್ಚರಿಯ ಸಂಗತಿಯೆಂದರೆ, ಎಲ್ಲವನ್ನೂ ತಿಳಿದಿದ್ದ ತಾಯಿ ಮತ್ತು ಇಬ್ಬರು ಹಿರಿಯ ಸಹೋದರಿಯರು ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ…!
ಹೀಗಾಗಿ ಆರೋಪಿಯ ಜೊತೆಗೆ, ಆತನ ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಸಹ ಪೋಲಿಸರು ಬಂಧಿಸಿದ್ದಾರೆ…!!
ವಿಚಾರಣೆಯ ಪ್ರಾರಂಭದಲ್ಲಿ ಬಾಲಕಿ ವಿಷಜಂತು ಕಡಿತದಿಂದ ಸಾವನ್ನಪ್ಪಿದ್ದಾಳೆ ಎಂದು ಹೇಳುವ ಮೂಲಕ ಪೋಷಕರು ಪ್ರಕರಣದ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದರು…!
ಆದರೆ ಮರಣೋತ್ತರ ಪರೀಕ್ಷೆಯ ವೇಳೆ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕತ್ತು ಹಿಸುಕಿ ಕೊಲೆಗೈದಿರುವುದು ದೃಢಪಟ್ಟಿತ್ತು…!!
ವರದಿಯ ಪ್ರಕಾರ, ಸುಮಾರು 3 ತಿಂಗಳ ಹಿಂದೆ ರೇವಾದ ಜಾವಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿ 13 ವರ್ಷದ ಬಾಲಕ ರಾತ್ರಿ ತನ್ನ ಮೊಬೈಲ್ ಫೋನ್ ನಲ್ಲಿ ಪೋರ್ನ್ ವಿಡಿಯೊ ನೋಡಿದ್ದಾನೆ, ನಂತರ ತನ್ನ ಪಕ್ಕದಲ್ಲಿ ಮಲಗಿದ್ದ ಸಹೋದರಿಯನ್ನು ಲೈಂಗಿಕವಾಗಿ ಅತ್ಯಾಚಾರ ಎಸಗಿದ್ದಾನೆ, ಆಕೆ ತಂದೆಗೆ ಹೇಳುವುದಾಗಿ ಹೇಳಿದಾಗ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ…!
ಪೊಲೀಸರು ಪ್ರಶ್ನಿಸಿದ ಬಳಿಕ ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ…!
ಮೊಬೈಲ್ನಲ್ಲಿ ಅಶ್ಲೀಲ ಚಿತ್ರವನ್ನು ನೋಡಿದ್ದೆ, ತನ್ನ ಕಾಮಕ್ಕೆ ಮಣಿದು ಆಕೆ ಮೇಲೆ ಅತ್ಯಾಚಾರ ಎಸಗಿದೆ ಎಂದು ಹೇಳಿಕೊಂಡಿದ್ದಾನೆ…!!
ಎಲ್ಲವನ್ನೂ ತಂದೆಗೆ ಹೇಳುತ್ತೇನೆ ಎಂದು ತಂಗಿ ಹೇಳಿದಾಗ ಕೊಂದಿದ್ದೇನೆ ಎಂದು ಪೋಲಿಸರಲ್ಲಿ ಹೇಳಿಕೊಂಡಿದ್ದಾನೆ…!
ಭಾರತೀಯ ದಂಡ ಸಂಹಿತೆಯಡಿ ಅತ್ಯಾಚಾರ, ಕೊಲೆ ಮತ್ತು ಸಾಕ್ಷ್ಯಗಳನ್ನು ಮರೆಮಾಚಿದ್ದಕ್ಕಾಗಿ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಜೈಲಿಗೆ ಕಳುಹಿಸಲಾಗಿದೆ, ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಆರೋಪದ ಮೇಲೆ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ…!!
ಸಂಪಾದಕರ ಅಭಿಪ್ರಾಯ
ಮಕ್ಕಳಿಗೆ ಸದ್ಬುದ್ದಿಯನ್ನು ಕಲಿಸಿ ಅವರ ಭವಿಷ್ಯ ರೂಪಿಸಬೇಕಾದ ಪೋಷಕರು, ಅಪ್ರಾಪ್ತ ಮಕ್ಕಳ ಕೈಗೆ ಮೊಬೈಲ್ ಗಳನ್ನು ಕೊಡುವ ಮೂಲಕ ಮಕ್ಕಳ ಭವಿಷ್ಯ ಹಾಳು ಮಾಡಲು ತಾವೇ ಕಾರಣರಾಗುತಿದ್ದಾರೆ…!