
ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರದಲ್ಲಿಯೇ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಜ್ಯ ಸ್ಥಾನಮಾನವೂ ಲಭ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸುಳಿವು ನೀಡಿದ್ದಾರೆ…!
ಶುಕ್ರವಾರ ಜಮ್ಮು ಕಾಶ್ಮೀರದ ಉದಂಪುರಧಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ “ಇಲ್ಲಿ ವಿಧಾನಸಭಾ ಚುನಾವಣೆ ನಡೆಯುವ ದಿನಗಳು ದೂರವಿಲ್ಲ, ಸದ್ಯದಲ್ಲೇ ಜಮ್ಮು ಕಾಶ್ಮೀರವು ರಾಜ್ಯ ಸ್ಥಾನಮಾನ ಗಳಿಸಲಿದೆ, ಇಲ್ಲಿನ ಜನರಿಗೆ ತಮ್ಮ ಕುಂದುಕೊರತೆಗಳನ್ನು, ಸಮಸ್ಯೆಗಳನ್ನು, ಸಚಿವರು ಹಾಗೂ ಶಾಸಕರೊಂದಿಗೆ ಹಂಚಿಕೊಳ್ಳುವ ಅವಕಾಶ ದೊರೆಯಲಿದೆ ಎಂದಿದ್ದಾರೆ
ಯಾವುದೇ ಭೀತಿ ಇಲ್ಲದೆ ಚುನಾವಣೆ
ಹಲವು ದಶಕಗಳ ಬಳಿಕ ಜಮ್ಮುಕಾಶ್ಮೀರದಲ್ಲಿ ಭಯೋತ್ಪಾದನೆ, ಪ್ರತಿಭಟನೆ, ಗುಂಡಿನ ಚಕಮಕಿ, ಕಲ್ಲುತೂರಾಟದಂಥ ಯಾವುದೇ ಭಯವಿಲ್ಲದೆ ಲೋಕಸಭಾ ಚುನಾವಣೆ ನಡೆಯುತ್ತಿದೆ, ಪ್ರತ್ಯೇಕತಾವಾದಿಗಳ ಚುನಾವಣಾ ಬಹಿಷ್ಕಾರ ಕರೆ ಈಗ ಇತಿಹಾಸದ ಪುಟ ಸೇರಿದೆ ಎಂದಿದ್ದಾರೆ
ಜತೆಗೆ ಇಲ್ಲಿನ ಜನರ ನೋವುಗಳಿಗೆ ನಾನು ಅಂತ್ಯ ಹಾಡಿದ್ದೇನೆ, ತಾಕತ್ತಿದ್ದರೆ ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ಕಾಶ್ಮೀರದ 370 ನೇ ವಿಧಿಯನ್ನು ಮರುಸ್ಥಾಪಿಸಲಿ ಎಂದು ಸವಾಲು ಹಾಕಿದ್ದಾರೆ